ಎಸ್‍ಎಸ್‍ಎಲ್‍ಸಿ 7ನೇ ಸ್ಥಾನಕ್ಕೇರಿದ ಮೈಸೂರು

ಸಂಜೆವಾಣಿ ನ್ಯೂಸ್
ಮೈಸೂರು: ಮೇ.10:- 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಜಿಲ್ಲೆ ಈ ಸಲ ಫಲಿತಾಂಶದಲ್ಲಿ ಭಾರೀ ಜಿಗಿತ ಕಂಡಿದೆ. ಕಳೆದ ಬಾರಿ ಫಲಿತಾಂಶದಲ್ಲಿ 19ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ ಈ ಬಾರಿ 7ನೇ ಸ್ಥಾನಕ್ಕೆ ಜಿಗಿದಿದ್ದು ಈ ಮೂಲಕ 12 ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದುಕೊಂಡಿದೆ.
ಮೈಸೂರು ಜಿಲ್ಲೆಯಾದ್ಯಂತ ಒಟ್ಟು 38,175 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 32,639 ವಿದ್ಯಾರ್ಥಿಗಳು ತೇರ್ಗಡೆಯಾಗಿ ಒಟ್ಟಾರೆಯಾಗಿ ಶೇ.85.5ಫಲಿತಾಂಶ ಬಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಹೆಚ್.ಕೆ.ಪಾಂಡು ಈ ಕುರಿತು ಮಾಹಿತಿ ನೀಡಿದ್ದು, ಟಾಪ್ ಟೆನ್ ಒಳಗೆ ಮೈಸೂರು ಜಿಲ್ಲೆ ಸ್ಥಾನ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಹೊಸ ಪ್ರಯೋಗಕ್ಕೆ ಫಲ, ಉತ್ತಮ ಫಲಿತಾಂಶ ಬಂದಿದೆ. ಮುಂದಿನ ಬಾರಿ ಮೈಸೂರು ಜಿಲ್ಲೆಯನ್ನು ಟಾಪ್ 1 ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಬಾರಿ ಉತ್ತಮ ಫಲಿತಾಂಶ ಬರುವ ಕಡೆ ಗಮನಹರಿಸಿ ಎಂಬ ಮಾತನ್ನ ಹೇಳಿದ್ದರು. ಅದೇ ರೀತಿ ಈ ಬಾರಿ ಮೈಸೂರು ಜಿಲ್ಲೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಅದರಲ್ಲಿ ಮೈಸೂರಿನ ಸಂದ್ವಿದ್ಯಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಧನ್ವಿ 625 ಕ್ಕೆ 623 ಅಂಕವನ್ನು ಪಡೆಯುವ ಮೂಲಕ ಮೈಸೂರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಫಲಿತಾಂಶ ಈ ಸಾರಿ ಮಾನ್ಯ ಮುಖ್ಯಮಂತ್ರಿಗಳ ಜಿಲ್ಲೆಯಾಗಿರುವುದರಿಂದ ಒಂದು ಒಳ್ಳೇ ಫಲಿತಾಂಶ ತರಬೇಕು ಎಂಬ ನಮ್ಮ ಜಿಲ್ಲಾ ತಂಡದಲ್ಲಿ ಕಾರ್ಯ ಯೋಜನೆ ಹಮ್ಮಿಕೊಂಡಿದ್ದೇವು. ಕೊನೆ ಬಾರಿ 19ನೇ ಸ್ಥಾನದಲ್ಲಿದ್ದೇವು. ಈ ಸಾರಿ ಏನಾದ್ರೂ ಮಾಡಿ 5ನೇ ಸ್ಥಾನದ ಒಳಗಡೆ ತರಬೇಕು ಎಂದುಕೊಂಡಿದ್ದೇವು. ಇದಕ್ಕೆ ಸಂಬಂಧಪಟ್ಟ ಒಳ್ಳೆ ಮಾರ್ಗದರ್ಶನ ಕೊಟ್ಟಿದ್ದು ಮಾನ್ಯ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ತಾಲ್ಲೂಕುಗಳ ಶಾಸಕರು ಸಪೆÇೀರ್ಟ್ ಕೊಟ್ಟರು. ಅದರ ಜೊತೆಗೆ ನಮ್ಮ ಶಿಕ್ಷಣ ಅಧಿಕಾರಿಗಳು ಉತ್ತಮವಾದ ಸಂಪನ್ಮೂಲ ಕೈ ಪಿಡಿ ಎಲ್ಲವನ್ನೂ ಸಪೆÇೀರ್ಟ್ ಮಾಡಿದ್ದರು. ಆದ್ದರಿಂದ ನಮ್ಮಗೆ ಈ ಸಾರಿ ಉತ್ತಮ ಫಲಿತಾಂಶ ಬರಲು ಸಹಕಾರ ಆಗಿದೆ ಎಂದರು.
ನಮ್ಮ ಜಿಲ್ಲಾ ತಂಡ ಏನಿದೆ ಈ ಜಿಲ್ಲಾ ತಂಡಗಳು ಶಿಕ್ಷಣ ಅಧಿಕಾರಿಗಳು ಉತ್ತಮ ತಂಡವಾಗಿ ಏನು ಯೋಜನೆ ಹಮ್ಮಿಗೊಂಡಿದ್ದೆವು ಅದು ಸಫಲತೆ ಆಗುವುದಕ್ಕೆ ಅನುಕೂಲವಾಗಿದೆ. ನಾವು ಯಾವಾಗ ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಪೂರ್ವ ಸಿದ್ಧತೆ ಪರೀಕ್ಷೆಯನ್ನು ಪರಿಶೀಲನೆ ಮಾಡಿದ್ದೇವು. ನಮ್ಮ ಜಿಲ್ಲೆ ಈ ರೀತಿ ಬರುತ್ತೆ 5ನೇ ಸ್ಥಾನದ ಒಳಗಡೆ ಹೋಗ್ತೀವಿ ಎಂಬ ನಂಬಿಕೆ ಇತ್ತು. 38,175 ಮಕ್ಕಳು ಏನು ಇದ್ದಾರೆ, ಆ ಮಕ್ಕಳೆಲ್ಲಾ ಪಾಸ್ ಆಗಬೇಕು ಎಂದು ಇದ್ದೆವು. ಆದರೆ ಯಾರು ಪಾಸ್ ಆಗ್ತಾರೆ ಅವರನ್ನ ಒಂದು ಕಡೆ ಇಟ್ಟಿದ್ದೆವು, ಯಾರು ಫೇಲ್ ಆಗೋತರ ಇರುವವರನ್ನು ನಾವು ಟ್ಯಾಕಲ್ ಮಾಡಿಕೊಂಡೆವು. ಅದೇ ಪ್ರಕಾರ ಟೀಂ ರಚನೆ ಮಾಡಿಕೊಂಡು ಕೆಲಮಾಡಿದೆವು. ಅದೇ ರೀತಿ ಫಲಿತಾಂಶ 5ನೇ ಸ್ಥಾನದಲ್ಲಿ ಬರಬೇಕಿತ್ತು. ಆದರೂ ನಮ್ಮ ಜಿಲ್ಲೆಯಲ್ಲಿ ವಿಧ್ಯಾರ್ಥಿ 623 ಮಾಕ್ರ್ಸ್ ತೆಗೆದುಕೊಂಡಿದ್ದಾರೆ. ಮುಖ್ಯವಾಗಿ ಮಕ್ಕಳು ಅವರ ಪೆÇೀಷಕರು ಉತ್ತಮವಾದ ಶ್ರಮ ಹಾಕಿದ್ದಾರೆಂದರು.
ನಾವೂ ಸುಮಾರು 7-8 ತಿಂಗಳಿಂದ ಸಿದ್ಧತೆ ಮಾಡಿಕೊಂಡು ಇದ್ದೇವು. ಪೂರ್ವಸಿದ್ಧತೆ ಪರೀಕ್ಷೆ, ಯುನಿಟ್ ಪರೀಕ್ಷೆ ಗೆ ಮುಖ್ಯಶಿಕ್ಷಕರೂ, ಸಹಶಿಕ್ಷಕರು ದೃಢೀಕರಣ ತೆಗೆದುಕೊಂಡೆವು. ನಾವು ಯಾರು ಫೇಲ್ ಆಗುತ್ತಾರೋ ಅವರನ್ನ ಹಿಂಬಾಲಿಸಿದೇವು. ಅವರ ಮನೆಗೆ ಹೋಗುವುದು, ರಾತ್ರಿ ಸಮಯದಲ್ಲಿ ಅವರ ಮನೆಗೆ ಹೋಗಿ ನೋಡಿದ್ದೆವು. ಆ ಮಕ್ಕಳ ಮಕ್ಕಳ ತಂದೆ ತಾಯಿ ಹಳ್ಳಿಯಿಂದ ಸಿಟಿ ಬಂದಿದ್ದಾರೆ. ಯಾಕೇ ಬಂದಿದ್ದಾರೆ ಅಂದರೆ ಬೇರೆ ಬೇರೆ ಮನೆಯಲ್ಲಿ ಕೆಲಸ ಮಾಡಿಕೊಂಡು ಅವರ ಮಕ್ಕಳನ್ನ ಓದಿಸುವ ಸಲುವಾಗಿ ಬಂದಿದ್ದಾರೆ.
ಇಂತಹ ಮಕ್ಕಳ ಮೇಲೆ ನಾವು ಕಣ್ಣು ಇಟ್ಟಿದ್ದೇವೆ ಅಂತಹ ಮಕ್ಕಳು ಕೂಡಾ ಡಿಸ್ಟಿಕ್ಷನ್ ಬಂದಿದ್ದಾರೆಂದರು.
620 ಅಂಕ ಗಳಿಸಿದ ಸುದೀಕ್ಷ:
ಮೈಸೂರಿನ ಸುದೀಕ್ಷಗೆ 625ಕ್ಕೆ 620 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ ಸೇರಿ 5 ವಿಷಯದಲ್ಲಿ ಶೇಕಡ 100ರಷ್ಟು ಅಂಕ ಗಳಿಸಿರುವ ಸುದೀಕ್ಷ ಎಂ.ಡಿ ಮೈಸೂರಿನ ದಿನೇಶ್ ಎಂಬುವರ ಪುತ್ರಿ. ಸಂಸ್ಕೃತ 125, ಇಂಗ್ಲಿಷ್ 100, ಕನ್ನಡ 100, ವಿಜ್ಞಾನ 100, ಸಮಾಜ 100, ಗಣಿತದಲ್ಲಿ 95 ಅಂಕ ಗಳಿಸಿದ್ದಾರೆ. ಸುದೀಕ್ಷ ಮೈಸೂರಿನ ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ.
ಅಂಧಮಕ್ಕಳ ಶಾಲೆ 100ರಷ್ಟು ಫಲಿತಾಂಶ:
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರಿನ ಅಂಧಮಕ್ಕಳ ಸರ್ಕಾರಿ ಶಾಲೆ ಅತ್ಯುತ್ತಮ ಸಾಧನೆ ಮಾಡಿದೆ. ಮೈಸೂರಿನ ತಿಲಕ್ ನಗರದಲ್ಲಿರುವ ಅಂಧಮಕ್ಕಳ ಸರ್ಕಾರಿ ಶಾಲೆಗೆ ಈ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುತ್ತಾ ಬಂದಿರುವ ಅಂಧಮಕ್ಕಳ ಸರ್ಕಾರಿ ಶಾಲೆ ಈ ಬಾರಿಯೂ ಆ ಸಾಧನೆಯನ್ನು ಮುಂದುವರಿಸಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 8 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಕುರಿತು ಅಂಧಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಸತೀಶ್ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ತಮ್ಮ ಖುಷಿಯನ್ನು ಹಂಚಿಕೊಂಡರು. ಭವಿಷ್ಯದಲ್ಲಿ ಪಿಡಿಒ ಆಗುವುದಾಗಿ ಓರ್ವ ವಿದ್ಯಾರ್ಥಿ ಹೇಳಿದರೆ, ಮತ್ತೋರ್ವ ವಿದ್ಯಾರ್ಥಿ ಡ್ಯಾನ್ಸರ್ ಆಗುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಮಾತನಾಡಿ ,ನಾನು ಉನ್ನತ ವಿದ್ಯಾಭ್ಯಾಸ ಮಾಡಿ, ಇದೇ ಅಂಧಮಕ್ಕಳ ಶಾಲೆಗೆ ಅಧೀಕ್ಷಕನಾಗಿ ಬಂದವು ಸೇವೆ ಸಲ್ಲಿಸುವುದಾಗಿ ಆಸೆಯನ್ನು ವ್ಯಕ್ತಪಡಿಸಿದರು.
ಬಾಲಕಿಯರೇ ಮೇಲು ಗೈ:
ಈ ಬಾರಿ ಜಿಲ್ಲೆಯಲ್ಲಿ 17, 847 ಬಾಲಕರು ಮತ್ತು 18, 949 ಬಾಲಕಿಯರು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 14, 681 ಬಾಲಕರು ಮತ್ತು 17, 402 ಬಾಲಕಿಯರು ತೇರ್ಗಡೆ ಪಡೆದುಕೊಂಡಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಶೇ.100ರಷ್ಟು ಫಲಿತಾಂಶ:
45 ಸರ್ಕಾರಿ, 10 ಅನುದಾನಿತ, 93 ಅನುದಾನ ರಹಿತ ಸೇರಿದಂತೆ 148 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿವೆ. ಯಾವುದೇ ಶಾಲೆಯಲ್ಲಿ ಶೂನ್ಯ ಸಂಪಾದನೆ ಫಲಿತಾಂಶ ಪಡೆದುಕೊಂಡಿಲ್ಲ ಎಂಬುದು ಈ ಬಾರಿಯ ಮತ್ತೊಂದು ವಿಶೇಷವಾಗಿದೆ.
ತಿ.ನರಸೀಪುರಕ್ಕೆ ಅಗ್ರಸ್ಥಾನ:
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿನ್ನಡೆ ಅನುಭವಿಸಿದ್ದ ತಿ.ನರಸೀಪುರ ತಾಲ್ಲೂಕು ಈ ಬಾರಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ. 93.30ರಷ್ಟು ಫಲಿತಾಂಶ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದೆ. ಮೈಸೂರು ಗ್ರಾಮಾಂತರ ವಿಭಾಗದ ಫಲಿತಾಂಶ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದು, ಶೇ.93.05ರಷ್ಟು ಫಲಿತಾಂಶ ಪಡೆದುಕೊಂಡಿದೆ. ಆದರೆ, ಎಚ್.ಡಿ.ಕೋಟೆ ತಾಲ್ಲೂಕು ಈ ಬಾರಿಯು ಶೇ.79.09ರಷ್ಟು ಫಲಿತಾಂಶ ಪಡೆದು ಕೊನೆ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಮೈಸೂರು ದಕ್ಷಿಣ ಶೇ.90.42ರಷ್ಟು, ಕೆ.ಆರ್.ನಗರ ಶೇ.89.48, ನಂಜನಗೂಡು ಶೇ.86.74, ಹುಣಸೂರು ಶೇ.84.68, ಮೈಸೂರು ಉತ್ತರ ಶೇ.54.68 ಮತ್ತು ಪಿರಿಯಾಪಟ್ಟಣ ಶೇ.81.03ರಷ್ಟು ಫಲಿತಾಂಶ ಪಡೆದುಕೊಂಡಿವೆ.
ಪರೀಕ್ಷೆಗೆ ಹಾಜರಾದ 291 ವಿಶೇಷಚೇತನ ವಿದ್ಯಾರ್ಥಿಗಳಲ್ಲಿ 225 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯ 45 ಸರ್ಕಾರಿ ಶಾಲೆಗಳು ಶೇ. 100 ಫಲಿತಾಂಶ ಹೊಂದಿದ್ದರೆ, 10 ಅನುದಾನಿತ ಶಾಲೆ, 93 ಅನುದಾನ ರಹಿತ ಶಾಲೆ ಸೇರಿ 148 ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ. ಜಾತಿವಾರು ಫಲಿತಾಂಶ ನೋಡಿದರೆ, ಪ.ಜಾತಿಯ 7,388 ವಿದ್ಯಾರ್ಥಿಗಳ ಪೈಕಿ, 6,331 ತೇರ್ಗಡೆ, ಪ.ಪಂಗಡದ 4,470 ಮಂದಿಯಲ್ಲಿ 3,828 ತೇರ್ಗಡೆ ಆಗಿದ್ದಾರೆ. ಸಿಎಟಿ- 1ರಲ್ಲಿ 1998 ಪೈಕಿ 1659 ಮಂದಿ ತೇರ್ಗಡೆ ಹೊಂದಿದ್ದಾರೆ. ಇತರೆ ಸಮುದಾಯದವರಲ್ಲಿ 22,940 ಮಂದಿಯ ಪೈಕಿ, 20265 ಮಂದಿ ತೇರ್ಗಡೆಹೊಂದಿದ್ದಾರೆ.
ಮರು ಪರೀಕ್ಷೆ ತೆಗೆದುಕೊಂಡಿದ್ದ 816 ಮಂದಿಯ ಪೈಕಿ, 382 ಮಂದಿ ತೇರ್ಗಡೆ ಹೊಂದಿದ್ದಾರೆ. ಅನುದಾನಿತ ಶಾಲೆಗಳು ಶೇ. 85.52, ಸರ್ಕಾರಿ ಶಾಲೆಗೆ ಶೇ. 83.67 ಮತ್ತು ಅನುದಾನ ರಹಿತ ಶಾಲೆ ಶೇ. 92.97 ಫಲಿತಾಂಶ ಪಡೆದಿವೆ. ಕನ್ನಡ ಮಾಧ್ಯಮದವರಲ್ಲಿ 16,807 ಮಂದಿ, ಇಂಗ್ಲಿಷ್ ಮಾಧ್ಯಮದಲ್ಲಿ 15,275 ಮತ್ತು ಉರ್ದು ಮಾಧ್ಯಮದಲ್ಲಿ ಒಬ್ಬರು ಮಾತ್ರ ತೇರ್ಗಡೆ ಹೊಂದಿದ್ದಾರೆ.
ಸದ್ವಿದ್ಯಾ ಶಾಲೆ ವಿದ್ಯಾರ್ಥಿನಿ ಜಿಲ್ಲೆಯ ಟಾಪರ್:
ಶ್ರೀ ಸದ್ವಿದ್ಯಾ ಪ್ರೌಢಶಾಲೆಯ ಡಿ.ಎಸ್.ಧನ್ವಿ 625ಕ್ಕೆ 623 ಅಂಕ ಪಡೆದು ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬಿಕೆಎಸ್‍ವಿಬಿ ಪ್ರೌಢಶಾಲೆಯ ಎಸ್.ಜಾನ್ಹವಿ 623, ವಿಜಯ ವಿಠಲ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ್ ಎಸ್.ಭಾರಧ್ವಜ್ 622, ಸದ್ವಿದ್ಯಾ ಪ್ರೌಢಶಾಲೆಯ ಜೆ.ದಿಶಾ ವರ್ಮಾ 621, ಎ.ಕಾವ್ಯಶ್ರೀ 621, ಮರಿಮಲ್ಲಪ್ಪ ಶಾಲೆಯ ಆರ್.ಭೂಮಿಕಾ 621 ಅಂಕಗಳು ಪಡೆದುಕೊಂಡಿದ್ದಾರೆ.
ಸರ್ಕಾರಿ ಶಾಲೆಗೆ ಕೀರ್ತಿ ತಂದ ಬಾಂಧವ್ಯ: ಜಿಲ್ಲೆಯಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಎಂಬುದನ್ನು ನಂಜನಗೂಡಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಎಚ್.ಎಂ.ಬಾಂಧವ್ಯ ಸಾಬೀತು ಪಡಿಸಿದ್ದಾರೆ. 625ಕ್ಕೆ ಅಂಕಗಳಿಗೆ 618 ಅಂಕಗಳನ್ನು ಪಡೆದು ಸರ್ಕಾರಿಗಳ ಗರಿಮೆ ಹೆಚ್ಚಿಸಿದ್ದಾರೆ. ಹುಣಸೂರಿನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಸ್.ಸ್ನೇಹ 613, ಮಹಾರಾಣಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಮೊಹಮ್ಮದ್ ಜೂಹನ್ ಕಲೀಂ 612 ಅಂಕ, ಬಿ.ತೇಜಸ್ವಿನಿ 611 ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಮಗಳ ಸಾಧನೆ:
ಮೈಸೂರಿನ ಭಾರತೀಯ ವಿದ್ಯಾಭವನ ಶಾಲೆಯ ಎಸ್. ಜಾನವಿ 625 ಕ್ಕೆ 623 ಅಂಕಗಳಿಸಿ ಜಿಲ್ಲೆಯ ಮತ್ತೋರ್ವ ಟಾಪರ್ ಎನಿಸಿಕೊಂಡಿದ್ದಾರೆ.
ಹೆಬ್ಬಾಳ ನಿವಾಸಿಯಾದ ಶಿವಕುಮಾರ್ ಜೆಎಸ್ ಎಸ್ ಮೆಡಿಕಲ್ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ತಾತಿ ಪುಷ್ಪಲತಾ ಗೃಹಿಣಿಯಾಗಿದ್ದಾರೆ. ಗಣಿತದಲ್ಲಿ 2 ಅಂಕ ಕಡಿಮೆಯಾಗಿದ್ದು ಉಳಿದ ಎಲ್ಲಾ ಭಾಷೆಗಳಲ್ಲಿಯೂ ಪೂರ್ಣ ಅಂಕ ಪಡೆದ ಮಗಳ ಸಾಧನೆಗೆ ಪೆÇೀಷಕರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಧನೆ ಕುರಿತು ಜಾನ್ಹವಿ ಮಾತನಾಡಿ, ಪೆÇೀಷಕರು ಹಾಗೂ ಸಂಸ್ಥೆಯ ಸಹಕಾರದಿಂದ ಇಷ್ಟೆಲ್ಲಾ ಸಾಧನೆಗೆ ಸಾಧ್ಯವಾಯಿತು. ಮುಂದೆ ಸೈನ್ಸ್ ಓದಿ ಇಂಜಿನಿಯರಿಂಗ್ ಮಾಡಬೇಕೆಂದು ಕೊಂಡಿದ್ದೇನೆಂದು ಸಂತಸ ಹಂಚಿಕೊಂಡರು.