ಎಸ್‌ಎಸ್‌ಎಲ್‌ಸಿ ೨ ಜೂ.೧೪ರಿಂದ ಪರೀಕ್ಷೆ

ಬೆಂಗಳೂರು, ಮೇ ೧೮: ಎಸ್‌ಎಸ್‌ಎಲ್‌ಸಿ-೨ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಜೂನ್ ೧೪ರಿಂದ ೨೨ರವರೆಗೆ ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ-ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ.
ಜೂನ್ ೦೭ ರಿಂದ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೨ ಇತ್ತೀಚೆಗೆ ಕರ್ನಾಟಕ ಶಾಲಾ ಪರೀಕ್ಷೆ-ಮೌಲ್ಯ ನಿರ್ಣಯ ಮಂಡಳಿ ಮುಂದೂಡಿತ್ತು. ಇದೀಗ ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣ hಣಣಠಿs://ಞseಚಿb.ಞಚಿಡಿಟಿಚಿಣಚಿಞಚಿ.gov.iಟಿ/eಟಿgಟish ಪ್ರಕಟಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ೨ ವೇಳಾಪಟ್ಟಿ ಹೀಗಿದೆ
ಜೂನ್ ೧೪: ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಆರ್‌ಟಿ), ಸಂಸ್ಕೃತ
ಜೂನ್ ೧೫: ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ಸಂಸ್ಕೃತ, ಕೊಂಕಣಿ, ಉರ್ದು, ತುಳು, ಮತ್ತು ಎನ್‌ಎಸ್‌ಕ್ಯೂ ಈ ವಿಷಯಗಳು
ಜೂನ್ ೧೮: ಗಣಿತ/ಸಮಾಜ ಶಾಸ್ತ್ರ
ಜೂನ್ ೧೯: ಎಲಿಮೆಂಟ್ಸ್‌ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್ Iಗಿ, ಇಂಜಿನಿಯರಿಂಗ್ ಗ್ರಾಫಿಕ್ಸ್೨, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್‌ಇಂಜಿನಿಯರಿಂಗ್ Iಗಿ,ಎಲಿಮೆಂಟ್ಸ್‌ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ‘ಸಿ’ ನಲ್ಲಿ ಪ್ರೋಗ್ರಾಮಿಂಗ್, ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
ಜೂನ್ ೨೦: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
ಜೂನ್ ೨೧: ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
ಜೂನ್ ೨೨: ಸಮಾಜ ವಿಜ್ಞಾನ