ಎಸ್‍ಎಸ್‍ಎಲ್‍ಸಿ ಸಾಧಕರಿಗೆ ಸನ್ಮಾನ

ಬೀದರ,ಮೇ 12: ಇಲ್ಲಿನ ಶ್ರೀ ದ.ಮ.ಶಿ.ಸಂಸ್ಥೆಯ ಶ್ರೀ ದತ್ತಗಿರಿ ಮಹಾರಾಜ
ಪ್ರೌಢ ಶಾಲೆ(ಕನ್ನಡ ಮಾಧ್ಯಮ)ಯಲ್ಲಿ ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯವರಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಸಂಸ್ಥಾಪಕರಾದ ವೈರಾಗ್ಯ ಶಿಖಾಮಣಿ ಅವಧೂತಗಿರಿ ಮಹಾರಾಜರು, ಸಂಸ್ಥೆಯ ಅಧ್ಯಕ್ಷ ರಮೇಶಕುಮಾರ ಪಾಂಡೆ,
ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ್,
ರಮೇಶ್ ಜಿ ದುಕಾನದಾರ್, ಪ್ರಭಾಕರ್ ಮೈಲಾಪುರೆ, ಆಡಳಿತ ಮಂಡಳಿಯ ಸದಸ್ಯರಾದ ಶಾಂತಾಬಾಯಿಅನಿಲಕುಮಾರ ಯರಮಲ್ಲಿ, ರವಿಶಂಕರ್ ಮಾಲಸಾ, ಬಸವರಾಜ ದೆಗಲಮಡಿ,ಸಂಸ್ಥೆಯ ಎಲ್ಲಾ ಶಾಖೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಸಮಸ್ತ ಗುರುವೃಂದದವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು
ಒಟ್ಟು ಪರೀಕ್ಷೆಗೆ ಹಾಜರಾಗಿದ್ದ 59 ವಿದ್ಯಾರ್ಥಿಗಳಲ್ಲಿ ಅಗ್ರ ಶ್ರೇಣಿಯಲ್ಲಿ
5, ಪ್ರಥಮ ದರ್ಜೆಯಲ್ಲಿ 49 ವಿದ್ಯಾರ್ಥಿಗಳು ಪಾಸಾಗಿದ್ದು,ಶೇ 98.30ಫಲಿತಾಂಶ ಬಂದಿದೆ.ವಿದ್ಯಾರ್ಥಿಗಳಾದ ಮಾಣಿಕೇಶ್ವರಿ ಶೇ 576 92.16, ಕಿರಣ ಶೇ 90.56,ವಿಷ್ಣುಕಾಂತ ಶೇ 90.08,ವರುಣ ಶೇ 89.76,ರೇಣುಕಾ ಶೇ 88.08, ಭಾಗ್ಯಶ್ರೀ ,ಶೇ 88,ವೈಷ್ಣವಿ ಶೇ 85.92 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ