ಎಸ್‌ಎಸ್‌ಎಲ್‌ಸಿ ಬಾಲಕಿಯರೇ ಮುಂದು

ಬೆಂಗಳೂರು,ಮೇ ೮:ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟಾರೆ ಶೇ.೮೩.೮೯ರಷ್ಟು ಫಲಿತಾಂಶ ಬಂದಿದ್ದು, ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕವನ್ನು ಪಡೆದಿದ್ದಾರೆ.
ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕಡಿಮೆಯಾಗಿದ್ದು, ಕಳೆದ ವರ್ಷ ಒಟ್ಟಾರೆ ಶೇ. ೮೫.೧೩ ರಷ್ಟು ಫಲಿತಾಂಶ ಬಂದಿತ್ತು.
ಸುದ್ದಿಗೋಷ್ಠಿಯಲ್ಲಿಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷ ರಾಮಚಂದ್ರ ಹಾಗೂ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್‌ಸಿಂಗ್ ಫಲಿತಾಂಶಗಳನ್ನು ಪ್ರಕಟಿಸಿದರು.
ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಫಲಿತಾಂಶದಲ್ಲಿ ಮುಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಶೇ.೮೭ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶ ೭೯.೬೨ ರಷ್ಟಿದೆ. ೨೦೨೨-೨೩ನೇ ಸಾಲಿನಲ್ಲಿ ಒಟ್ಟಾರೆ ೮೩.೫೧೦೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೭೦೦೬೧೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಂಶಗಳನ್ನು ಶಾಲೆಗಳಲ್ಲಿ ಇಂದು ಪ್ರಕಟಿಸಲಾಗಿದ್ದು, ಜಾಲತಾಣದಲ್ಲಿhಣಣಠಿs://ಞಚಿಡಿಡಿesuಟಣs.ಟಿiಛಿ.iಟಿನೋಡಬಹುದಾಗಿದೆ.
ತಾತ್ಕಾಲಿಕ ಅಂಕಪಟ್ಟಿಯನ್ನು ಮಂಡಲಿಯ hಣಣಠಿs://ಞseಚಿb.ಞಚಿಡಿಟಿಚಿಣಚಿಞಚಿ.gov.iಟಿ ಜಾಲತಾಣದಲ್ಲಿ ಲಾಗ್‌ಇನ್ ಆಗಿ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ವರ್ಷವೂ ಉತ್ತೀರ್ಣತಾ ಪ್ರಮಾಣದಲ್ಲಿ ಬಾಲಕಿಯರೇ ಮುಂದಿದ್ದು, ಬಾಲಕಿಯರ ಉತ್ತೀರ್ಣತೆಯ ಪ್ರಮಾಣ ಶೇ. ೮೭.೮೭ರಷ್ಟಿದ್ದರೆ, ಬಾಲಕರ ಉತ್ತೀರ್ಣದ ಪ್ರಮಾಣ ಶೇ.೮೦.೦೮ರಷ್ಟಿದೆ.
ಈ ವರ್ಷ ೪೦,೯೧೩೪ ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೩೫,೯೫೧೧ ಬಾಲಕಿಯರು ಉತ್ತೀರ್ಣರಾಗಿದ್ದು, ಪರೀಕ್ಷೆಗೆ ಹಾಜರಾದ ೪೨,೫೯೬೮ ಬಾಲಕರ ಪೈಕಿ ೩೪,೧೧೦೮ ಬಾಲಕರು ಉತ್ತೀರ್ಣರಾಗಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಕಳೆದ ಮಾ. ೩೧ ರಿಂದ ಏ. ೧೫ದರವರೆಗೂ ನಡೆದಿದ್ದು, ಮೌಲ್ಯಮಾಪನ ಕಾರ್ಯ ಏ. ೨೪ ರಿಂದ ಮೇ ೩ರವರೆಗೂ ನಡೆದಿತ್ತು. ೬೧,೩೫೭ ಮೌಲ್ಯಮಾಪಕರು ಉತ್ತರ ಪತ್ರಿಕೆಯ ಮೌಲ್ಯಮಾಪನ ನಡೆಸಿದ್ದರು.

ಪ್ರಸಕ್ತ ಸಾಲಿನ ಎಸ್ ಎಸ್ ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಅಧ್ಯಕ್ಷ ರಾಮಚಂದ್ರ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಪ್ರಕಟಿಸಿದರು.

ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಮಂಡ್ಯ ಜಿಲ್ಲೆ ಫಲಿತಾಂಶದಲ್ಲಿ ೨ನೇ ಸ್ಥಾನ, ಹಾಸನ ೩ನೇ ಸ್ಥಾನ ಪಡೆದಿದೆ.
ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದವರೇ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಿಗಿಂತ ಹೆಚ್ಚಾಗಿದ್ದು, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಒಟ್ಟಾರೆ ಫಲಿತಾಂಶ ಶೇ.೮೫.೫೯ರಷ್ಟಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಉತ್ತೀರ್ಣತೆ ಶೇ.೯೧.೬೬ರಷ್ಟಿದೆ.
ಈ ವರ್ಷ ೬೧.೦೦೩ ವಿದ್ಯಾರ್ಥಿಗಳು ಎ ಪ್ಲಸ್ ಗ್ರೇಡ್ ಅಂದರೆ ಶೇ. ೯೦ ರಿಂದ ಶೇ ೧೦೦ರಷ್ಟು ಅಂಕ ಪಡೆದಿದ್ದರೆ, ೧೪,೭೬೩೪ ವಿದ್ಯಾರ್ಥಿಗಳು ಎ ಪ್ಲಸ್ ಗ್ರೇಡ್ ಶೇ. ೮೦ ರಿಂದ ಶೇ. ೮೯ರಷ್ಟು ಅಂಕ ಪಡೆದಿದ್ದಾರೆ.
ಬಿ ಪ್ಲಸ್ ಗ್ರೇಡ್‌ನಲ್ಲಿ ಅಂದರೆ ಶೇ. ೭೦ ರಿಂದ ಶೇ. ೭೯ರಷ್ಟು ಅಂಕವನ್ನು ೧೭,೫೪೮೯ ವಿದ್ಯಾರ್ಥಿಗಳು ಪಡೆದಿದ್ದು, ಬಿ ಗ್ರೇಡ್ ಅಂದರೆ ಶೇ. ೬೦ ರಿಂದ ಶೇ. ೬೯ರಷ್ಟು, ೧೭,೦೨೯೬ ವಿದ್ಯಾರ್ಥಿಗಳು ಪಡೆದಿದ್ದಾರೆ. ಸಿ ಪ್ಲಸ್ ಗ್ರೇಡ್ ಅಂದರೆ ಶೇ. ೫೦ ರಿಂದ ಶೇ. ೫೯ರಷ್ಟು ಅಂಕವನ್ನು ೧೧,೬೮೧೯ ವಿದ್ಯಾರ್ಥಿಗಳು ಪಡೆದಿದ್ದು, ಸಿ ಗ್ರೇಡ್ ಶೇ. ೩೫ ರಿಂದ ಶೇ. ೪೯ರಷ್ಟು ಅಂಕವನ್ನು ೧೯.೩೦೧ ವಿದ್ಯಾರ್ಥಿಗಳು ಪಡೆದಿದ್ದಾರೆ.
ಈ ವರ್ಷ ೧೫೧೭ ಸರ್ಕಾರಿ ಶಾಲೆಗಳಲ್ಲಿ ಶೇ. ೧೦೦ರಷ್ಟು ಫಲಿತಾಂಶ ಬಂದಿದೆ. ೪೮೨ ಅನುದಾನಿತ, ೧೮೨೪ ಅನುದಾನರಹಿತ ಶಾಲೆಗಳು ಶೇ. ೧೦೦ರಷ್ಟು ಫಲಿತಾಂಶ ಪಡೆದಿವೆ. ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ, ಆದರೆ, ೧೧ ಅನುದಾನಿತ ಹಾಗೂ ೨೩ ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಪ್ರಥಮ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ೧೪೯೮೩ ವಿದ್ಯಾರ್ಥಿಗಳು ಪಡೆದಿದ್ದು, ದ್ವಿತೀಯ ಭಾಷೆಯಲ್ಲಿ ೯೭೫೪ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ,ತೃತೀಯ ಭಾಷೆಯಲ್ಲಿ ೧೬೧೭೦ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ, ಗಣಿತದಲ್ಲಿ ೨೧೩೨ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ, ವಿಜ್ಞಾನದಲ್ಲಿ ೯೮೩ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ, ಸಮಾಜ ವಿಜ್ಞಾನದಲ್ಲಿ ೮೩೧೧ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ ಪಡೆದಿದ್ದಾರೆ.
ಉತ್ತರ ಪತ್ರಿಕೆಗಳ ಛಾಯಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಮೇ ೧೪ ಕೊನೆಯ ದಿನವಾಗಿದ್ದು, ಅಂಕಗಳ ಮರು ಎಣಿಕೆ ಮರು ಮೌಲ್ಯಮಾಪನಕ್ಕೆ ಮೇ ೨೧ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಪೂರಕ ಪರೀಕ್ಷೆಗೆ ಮೇ ೧೫ದರವೆಗೂ ನೋಂದಣಿ ಮಾಡಿಕೊಳ್ಳಬಹುದು.

ನಾಲ್ವರಿಗೆ ಪ್ರಥಮ ರ್‍ಯಾಂಕ್
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕಪಡೆದ ನಾಲ್ವರು ವಿದ್ಯಾರ್ಥಿಗಳ ವಿವರ
ಭೂಮಿಕಾ ಪೈ, ನ್ಯೂ ಮ್ಯಾಕ್ಯುಲೆ ಶಾಲೆ, ಹೊಸೂರು ರಸ್ತೆ ಬೆಂಗಳೂರು.
ಯಶಸ್‌ಗೌಡ, ಬಿಜಿಎಸ್ ಶಾಲೆ, ಆಗಲಗುರ್ಕಿ, ಚಿಕ್ಕಬಳ್ಳಾಪುರ
ಅನುಪಮಾ ಶ್ರೀಶೈಲ್, ಹಿರೇಹೊಳಿ ಶ್ರೀ ಕುಮಾರೇಶ್ವರ ಶಾಲೆ, ಸವದತ್ತಿ, ಬೆಳಗಾವಿ.
ಭೀಮನಗೌಡ ಪಾಟೀಲ್, ಆಕ್ಸ್‌ಫರ್ಡ್ ಹೈಸ್ಕೂಲ್ ಶಾಲೆ, ಮುದ್ದೆಬಿಹಾಳ, ವಿಜಯಪುರ