ಎಸ್‌ಎಸ್‌ಎಲ್‌ಸಿ ಪೂರಕ ಫಲಿತಾಂಶ ಪ್ರಕಟ ಸ್ಟಮಕ್: ಶೇ.೪೧.೩೯ರಷ್ಟು ಫಲಿತಾಂಶ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜೂ.೩೦-ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ೨೦೨೩ನೇ ಸಾಲಿನಲ್ಲಿ ಪರೀಕ್ಷೆ ಬರೆದ ೧,೧೧೭೮೧ ವಿದ್ಯಾರ್ಥಿಗಳ ಪೈಕಿ ೪೬, ೨೭೦ ಉತ್ತೀರ್ಣರಾಗಿದ್ದು, ಶೇಕಡವಾರು ೪೧.೩೯% ಫಲಿತಾಂಶ ಬಂದಿದೆ.ಜೂನ್ ೧೨ ರಿಂದ ಜೂನ್ ೧೯ ರ ವರೆಗೆ ಈ ಪೂರಕ ಪರೀಕ್ಷೆ ನಡೆಸಲಾಗಿತ್ತು. ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈವೇಳೆ ಬರೋಬ್ಬರಿ ೮,೩೫,೧೦೨ ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಈ ಪೈಕಿ ೭,೦೦,೬೧೯ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ೧,೩೪,೪೮೩ ಅನುತ್ತೀರ್ಣರಾಗಿದ್ದರು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಧೃತಿಗೆಡದೇ ಮೇ ೧೫ರೊಳಗೆ ಪೂರಕ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡು ಜೂನ್‌ನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದಿದ್ದರು.
ಇದೀಗ ಪರೀಕ್ಷೆ ಬರೆದ ೧,೧೧೭೮೧ ವಿದ್ಯಾರ್ಥಿಗಳ ಪೈಕಿ ೪೬, ೨೭೦ ಉತ್ತೀರ್ಣರಾಗಿದ್ದು, ಶೇಕಡವಾರು ೪೧.೩೯% ಫಲಿತಾಂಶ ಬಂದಿದೆ. ಇನ್ನೂ, ರಾಜ್ಯದ ೪೫೮ ಕೇಂದ್ರಗಳಲ್ಲಿ ಈ ಪೂರಕ ಪರೀಕ್ಷೆ ನಡೆದಿದ್ದು, ೧೧,೮೧೦ ಪ್ರೌಢಶಾಲೆಗಳ ೧,೧೧,೬೮೯ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.ಸದ್ಯ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ನೋಡಬಹುದಾಗಿದೆ.ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ರಿಜಿಸ್ಟರ್ ನಂಬರ್ ಅನ್ನು ಎಂಟ್ರಿಮಾಡಿ, ಜನ್ಮ ದಿನಾಂಕವನ್ನು ಸೆಲೆಕ್ಟ್ ಮಾಡಿ ನಂತರ ಸಬ್‌ಮಿಟ್ ಒತ್ತಿದರೆ ಫಲಿತಾಂಶ ತೆರೆಯ ಮೇಲೆ ಪ್ರಕಟವಾಗಲಿದೆ.
ಫಲಿತಾಂಶ ನೋಡಿ..!
ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ ಇಂತಿದೆ; hಣಣಠಿs://ಞಚಿಡಿಡಿesuಟಣs.ಟಿiಛಿ.iಟಿ/ಜಿiಡಿsಣsಟ_suಠಿಞಚಿಡಿ.ಚಿsಠಿ
ಪೂರಕ ಪರೀಕ್ಷೆ ಹಿನ್ನೆಲೆ..!
೨೦೨೩ ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಒಟ್ಟು ೮,೩೫,೧೦೨ವಿದ್ಯಾರ್ಥಿಗಳು ಬರೆದಿದ್ದರು.ಈ ಪೈಕಿ ೭,೦೦,೬೧೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು (ಶೇ. ೮೩.೮೯ ರಷ್ಟು ಫಲಿತಾಂಶ). ಇದರಲ್ಲಿ ೩,೫೯,೫೧೧ ಬಾಲಕಿಯರು ಉತ್ತೀರ್ಣರಾದರೆ, ೩,೪೧,೧೦೮ ಬಾಲಕರು ಉತ್ತೀರ್ಣರಾಗಿದ್ದರು. ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಪೂರಕ ಪರೀಕ್ಷೆ ನಡೆಸಲಾಗಿತ್ತು.