ಎಸ್‌ಎಸ್‌ಎಲ್‌ಸಿ ಪರೀಕ್ಷೆ: ೭ ಗೈರು, ೭೦೫ ಹಾಜರಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ೭ ಗೈರು, ೭೦೫ ಹಾಜರಿ
ಸಿರವಾರ,ಮಾ.೩೧- ೨೦೨೨-೨೩ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಇಂದಿನಿಂದ ಪ್ರಾರಂಭವಾಗಿದ್ದೂ, ಕನ್ನಡ ಪರೀಕ್ಷೆಯು ೭ ವಿದ್ಯಾರ್ಥಿಗಳು ಗೈರು ಆಗಿದ್ದರೆ, ೭೦೫ ಹಾಜರಿಯಾಗುವ ಮೂಲಕ ಸೂಸುತ್ರವಾಗಿ ಜರುಗಿದೆ. ಪಟ್ಟಣದಲ್ಲಿ ಬಾಲಕಿಯರ ಶಾಲೆ, ಬಾಲಕರ ಪ್ರೌಢಶಾಲೆ, ಹೋಲಿ ಕ್ರಾಸ್ ೩ ಕೇಂದ್ರಗಳು ತೆರೆಯಲಾಗಿದೆ. ಅದರಲ್ಲಿ ಬಾಲಕಿಯರ ಪ್ರೌಢಶಾಲೆ ೨೨೩-೨=೨೨೧, ಬಾಲಕರ ಪ್ರೌಢ ಶಾಲೆ ೨೬೫-೩=೨೬೨, ಹೋಲಿ ಕ್ರಾಸ್ ೨೨೪-೨=೨೨೨ ಹಾಜರಿ ಇದ್ದರು.
ಪರೀಕ್ಷೆ ಕೇಂದ್ರಕ್ಕೆ ಡಿಡಿಪಿಐ ನಂದಕುಮಾರ, ಸಿಡಿಪಿಓ ಮುದುಕಪ್ಪ, ಪ.ಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಬೇಟಿ ನೀಡಿ ವಿಕ್ಷಣೆ ಮಾಡಿದರು.