ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಕ್ತಾಯ: ವಿದ್ಯಾರ್ಥಿಗಳಿಗೆ ರಿಲೀಫ್

ಹನೂರು: ಏ.16:- ತಾಲೂಕಿನಾದ್ಯಂತ ಇರುವ ಎಲ್ಲಾ ಶಾಲೆಗಳ ಪರೀಕ್ಷಾ ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದಿದ್ದು ವಿದ್ಯಾರ್ಥಿಗಳಿಗೆ ಸ್ವಲ್ಪ ನಿರಾಳವಾಗಿ ಪರೀಕ್ಷೆಯ ಟೆನ್ಶನ್ ಮೂಡನಿಂದ ಹೊರಬಂದಿದ್ದಾರೆ.
ಮಾ.31ರಿಂದ ಪ್ರಾರಂಭವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿ ಹನೂರು ತಾಲೂಕಿನಲ್ಲಿ 2184 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗ ಬೇಕಾಗಿತ್ತು ಆದರೆ 2184 ವಿದ್ಯಾರ್ಥಿಗಳ ಪೈಕಿ 2 ವಿದ್ಯಾರ್ಥಿ ಗೈರು ಆಗಿರುತ್ತಾರೆ.
ಹನೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಪಟ್ಟಣದ ಜೀವಿಗೌಡ ಕಾಲೇಜಿನಲ್ಲಿ 191 ವಿದ್ಯಾರ್ಥಿಗಳು. ಕ್ರಿಸ್ತ ರಾಜ ಶಾಲೆಯಲ್ಲಿ 314 ವಿದ್ಯಾರ್ಥಿಗಳು. ಮಾರ್ಟಳ್ಳಿ ಸೆಂಟ್ ಮೇರಿಸ್ ಶಾಲೆಯಲ್ಲಿ 218 ವಿದ್ಯಾರ್ಥಿಗಳು. ಲೊಕ್ಕನಹಳ್ಳಿ ಸರ್ಕಾರಿ ಶಾಲೆಯಲ್ಲಿ 269 ವಿದ್ಯಾರ್ಥಿಗಳು. ಮಣಗಳ್ಳಿ ಶಾಲೆಯಲ್ಲಿ 183 ವಿದ್ಯಾರ್ಥಿಗಳು. ರಾಮಪುರ ಜೆಎಸ್‍ಎಸ್ ಶಾಲೆಯಲ್ಲಿ 358 ವಿದ್ಯಾರ್ಥಿಗಳು. ಮಲೆ ಮಾದೇಶ್ವರ ಬೆಟ್ಟದ ಮಾದೇಶ್ವರ ಶಾಲೆಯಲ್ಲಿ 179. ವಿದ್ಯಾರ್ಥಿಗಳು ಕೌದಳ್ಳಿ ಸೇಂಟ್ ಅಂತೋನಿ ಶಾಲೆಯಲ್ಲಿ 279 ವಿದ್ಯಾರ್ಥಿಗಳು. ಹೂಗ್ಯ o ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 193 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2184 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಕುಡಿಯುವ ನೀರು ಸೇರಿದಂತೆ ಪರೀಕ್ಷೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಯಾವುದೇ ತೊಂದರೆ ಆಗದಂತೆ ಪರೀಕ್ಷೆಯನ್ನು ಮುಗಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕೊಟ್ಟಡಿ ಮೇಲ್ವಿಚಾರಕರು ಸ್ಥಾನಿಕ ಹಾಗೂ ಸಂಚಾರಿ ಜಾಗೃತಿ ಸಂಚಾರಿ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಪರೀಕ್ಷೆ ಕೇಂದ್ರ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆಸಲಾಗಿದೆ ಎಂದು ಬಿಇಓ ಶಿವರಾಜು ಅವರು ತಿಳಿಸಿದ್ದಾರೆ.