ದೇವದುರ್ಗ,ಮಾ.೨೮- ೨೦೨೩ ವಾರ್ಷಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ದತೆ ಸಭೆ ತಹಶೀಲ್ದಾರ ಶ್ರೀನಿವಾಸ ಚಾಪಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
೧೬ ಪರೀಕ್ಷಾ ಕೇಂದ್ರಗಳಿದ್ದೂ, ೪೨೩೩ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ೭ಮಾರ್ಗಗಳನ್ನು ನಿಗದಿ ಪಡಿಸಿದ್ದೂ, ೩೧೦ ಜನ ಕೊಠಡಿ ಮೇಲ್ವಿಚಾರಕರು. ೧೬ ಜನ ಮುಖ್ಯ ಅಧೀಕ್ಷಕರು, ೨ ಉಪ ಅಧೀಕ್ಷಕರು, ೭ ಜನ ಮಾರ್ಗಧಿಕಾರಿಗಳು, ೧೬ ಜನ ಜಾಗೃತದಳ ಕಾರ್ಯನಿರ್ವಸಲಿದ್ದೂ,೧೬ ಅಭೀರಕ್ಷಕರು ಕರ್ತವ್ಯ ನಿರ್ವಸಲಿದ್ದಾರೆ ಎಂದು ತಹಶೀಲ್ದಾರ ಶ್ರೀನಿವಾಸ ಚಾಪಲ್ ತಿಳಿಸಿದರು.
ವಿದ್ಯಾರ್ಥಿಗಳು ಯಾವುದೆ ಆತಂಕ ಇಲ್ಲದೆ ಪರೀಕ್ಷೆ ಎದುರಿಸಬೇಕು. ಪರೀಕ್ಷೆ ಕೇಂದ್ರ ಸುತ್ತಲೂ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಸುಖದೇವ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ, ಶಿವರಾಜ ಪೂಜಾರಿ, ಅಕ್ಷರ ದಾಸೋಹ ಅಧಿಕಾರಿ ಬಂದೋಲಿ ಸಾಬ, ಶ್ರೀನಿವಾಸ ಇತರರು ಇದ್ದರು.