
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.31: ನೂತನ ವಿಜಯನಗರ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಶಾಂತಿಯುತವಾಗಿ ಆರಂಭವಾಗಿವೆ ಎಂದು ಉಪನಿರ್ದೇಶಕ ಕೊಟ್ರೇಶ್ ತಿಳಿಸಿದರು.
ಜಿಲ್ಲೆಯಲ್ಲಿ ಈ ವರ್ಷ 21934 ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಪರೀಕ್ಷೆ ಬರೆಯುತ್ತಿದ್ದಾರೆ, ಈ ಪೈಕಿ 11259 ವಿದ್ಯಾರ್ಥಿಗಳು ಹಾಗೂ 10675 ವಿದ್ಯಾರ್ಥಿನಿಯರಿದ್ದು ಜಿಲ್ಲೆಯಾದ್ಯಂತ 73 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ ಮೊದಲ ದಿನವಾದ ಇಂದು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಸರಿಯಾದ ಸಮಯಕ್ಕೆ ತಲುಪಿದ್ದು ಅಲ್ಲದೆ ಯಾವುದೆ ತೊಂದರೆಗಳಿಲ್ಲದಂತೆ ಪರೀಕ್ಷೆಗಳು ಆರಂಭವಾಗಿದೆ 21934 ವಿದ್ಯಾರ್ಥಿಗಳ ಪೈಕಿ ಈ ವರ್ಷ ಪರೀಕ್ಷೆ ಬರೆಯುವ, ಕಳೆದ ಬಾರಿ ಅನುತಿರ್ಣರಾದ ಹಾಗೂ ಹೊರಗಡೆಯಿಂದ ಪರೀಕ್ಷೆಬರೆಯುವ ವಿದ್ಯಾರ್ಥಿಗಳು ಒಳಗೊಂಡಿದೆ ಎಲ್ಲಾ ಕೇಂದ್ರಗಳಲ್ಲಿಯೂ ಯಾವುದೆ ತೊಂದರೆಗಳಿಲ್ಲದಂತೆ ಪರೀಕ್ಷೆಗಳು ಆರಂಭವಾಗಿದೆ ಜಿಲ್ಲಾಡಳಿತ ಹಾಗೂ ಪೊಲೀಸ ಇಲಾಖೆ ಸುಗಮ ವ್ಯವಸ್ಥೆಗೆ ಸೂಕ್ತ ಬಂದೋಬಸ್ತ ಆಯೋಜಿಸಿದೆ ಮೊದಲ ದಿನವಾದ ಇಂದು ವಿದ್ಯಾರ್ಥಿಗಳು ಪಾಲಕರೊಂದಿಗೆ ಬಂದು ತಮ್ಮ ಕೊಠಡಿ, ತಮ್ಮ ನೊಂದಣಿ ಸಂಖ್ಯೆಯನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗುವ ಮೂಲಕ ಪರೀಕ್ಷೆ ಸಿದ್ದರಾಗಿದ್ದರು ಎಂದು ಅವರು ತಿಳಿಸಿದ್ದಾರೆ.