ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೊಸಪೇಟೆ ತಾಲೂಕಿಗೆ ಪ್ರಥಮ ಸ್ಥಾನ ಬಾಲಕಿ ಸ್ನೇಹಾಗೆ ಹ.ಬೊ.ಹಳ್ಳಿ ಶಾಸಕರಿಂದ ಸನ್ಮಾನ

Oplus_0


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮೇ.16: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮರಿಯಮ್ಮನಹಳ್ಳಿ ತಾಂಡಾದ ಸ್ನೇಹ ಎಂಬ ಬಾಲಕಿ 625 ಕ್ಕೆ 611 ಅಂಕಗಳನ್ನು ಗಳಿಸುವುದರ ಮೂಲಕ  ಹೊಸಪೇಟೆ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದು, ಹ.ಬೊ.ಹಳ್ಳಿ ಶಾಸಕ ಕೆ.ನೇಮಿರಾಜ್ ನಾಯ್ಕ್ ಬಾಲಕಿ ಮನೆಗೆ ತೆರಳಿ ಸನ್ಮಾನಿಸಿದರು.
ಮರಿಯಮ್ಮನಹಳ್ಳಿ ತಾಂಡಾದ ಟಿ. ವೆಂಕಟೇಶ ಹಾಗೂ ವಿ. ಸುನೀತಾ ದಂಪತಿಗಳ ಮಗಳಾದ ಸ್ನೇಹ ಪಟ್ಟಣದ ಪ್ರಾರ್ಥನಾ ಆಂಗ್ಲ ಮಾದ್ಯಮ‌ ಪ್ರೌಢಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು.  ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳ ಮೂಲಕ ಪೋಷಕರು‌ ಹಾಗೂ ಶಾಲೆಗೆ ಕೀರ್ತಿ ತಂದ ಹಿನ್ನಲೆಯಲ್ಲಿ ಹ.ಬೊ.ಹಳ್ಳಿ ಶಾಸಕರ ನೇಮಿರಾಜ್ ನಾಯ್ಕ್‌ರು ಖುದ್ದಾಗಿ ವಿದ್ಯಾರ್ಥಿನಿ ಮನೆಗೆ ತೆರಳಿ ವೈಯಕ್ತಿಕವಾಗಿ ಪ್ರೋತ್ಸಾಹ ಧನ ವಿತರಿಸಿ ಸನ್ಮಾನಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾಲಕಿ ಸತತ ಪರಿಶ್ರಮದಿಂದ ಓದಿ ಶಾಲೆ ಹಾಗೂ ನಮ್ಮ ಊರಿಗೆ ಮಾತ್ರವಲ್ಲದೇ ನಮ್ಮ ಹ.ಬೊ.ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಭಾಗದಲ್ಲೂ ಇಂದು ಬಡವರು, ರೈತರು, ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ. ಈ ಬಾಲಕಿಯು ಮುಂದಿನ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕಗಳನ್ನು ಪಡೆಯಲಿ, ಉನ್ನತ ವಿದ್ಯಾಭ್ಯಾಸದ ಪರೀಕ್ಷೆ ಪಾಸು ಮಾಡುವ ಆಶಯ ಹೊಂದಲಿ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬದಾಮಿ ಮೃತ್ಯುಂಜಯ, ಪ್ರಕಾಶನಾಯ್ಕ್, ಸೀತ್ಯಾನಾಯ್ಕ್, ರವೀಂದ್ರನಾಯ್ಕ್, ರವಿನಾಯ್ಕ್, ಹನುಮನಾಯ್ಕ್, ಢಾಕ್ಯಾನಾಯ್ಕ್, ಗಿರಿಯನಾಯ್ಕ್, ರಾಮನಾಯ್ಕ್, ಹೇಮ್ಲಾನಾಯ್ಕ್ ಹಾಗೂ ಇತರರು ಇದ್ದರು.

One attachment • Scanned by Gmail