ಎಸ್‍ಎಸ್‍ಎಲ್‍ಸಿ ಜಿಲ್ಲಾ ಮಟ್ಟದ ಸಾಧಕರ ಮನೆಗೆ ಬಂದು ಸನ್ಮಾನ


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ29. ಈವರ್ಷ ಎಸ್‍ಎಸ್‍ಎಲ್‍ಸಿಯಲ್ಲಿ ಜಿಲ್ಲಾ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳ ಮನೆಗೆ ನಾನು ಮತ್ತು ಆ ತಾಲೂಕಿನ ಬಿಇಓ ಜೊತೆಗೆ ಸ್ವತಹ ಬಂದು ಸನ್ಮಾನಿಸುತ್ತೇವೆಂದು ಬಳ್ಳಾರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಅಂದಾನಪ್ಪ ವಡಿಗೇರ್ ತಿಳಿಸಿದರು. ನಿನ್ನೆ ಸಿರಿಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಿರಿಗೇರಿ ಕ್ಲಸ್ಟರ್‍ನ 07 ಪ್ರೌಢಶಾಲೆಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ವ್ಯಕ್ತಿತ್ವ ವಿಕಸನ ಮತ್ತು ಪ್ರೇರಣಾ ಕಾರ್ಯಕ್ರಮ’ ದಲ್ಲಿ ಮಾತನಾಡಿ ಸಾಮಾನ್ಯರೂ ಸಾಧನೆ ಮಾಡಬಲ್ಲರು ಎಂಬುದನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಬಂದಿರುವ ರಮೇಶಬಲ್ಲಿದ್ ರವರು ಸಾಬೀತು ಮಾಡಿದ್ದಾರೆ. ಶಾಲೆಗೆ ಹೋಗದೇ ಕುರಿ ಕಾಯುತ್ತಿದ್ದ ವ್ಯಕ್ತಿ ಒಂದು ಎನ್‍ಜಿಒ ಕಂಪನಿ ನೀಡಿದ ಕೇವಲ 6 ತಿಂಗಳ ತರಬೇತಿಯಿಂದ ರಾಜ್ಯದದ್ಯಂತ 4ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಉಪನ್ಯಾಸ ನೀಡಿ ಸಾಧನೆ ಮಾಡಿದ್ದಾರೆಂದು ತಿಳಿಸಿದರು.
ನಂತರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಮಾತನಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅವರ ಬುದ್ದಿಮಟ್ಟ ಹೆಚ್ಚಿಸಲು ಗುರುರಾಜ ಕರ್ಜಗಿ, ಡಿ.ಚನ್ನಣ್ಣನವರ್, ರಮೇಶ್‍ಬಲ್ಲಿದ್ ರಂತಹ ಸಾಧಕರನ್ನು ಕರೆಸಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಒಳ್ಳೆಯ ಫಲಿತಾಂಶ ತರಬೇಕೆಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ರಮೇಶಬಲ್ಲಿದ್ ವಿದ್ಯಾರ್ಥಿಗಳಿಗೆ ಓದಿನಲ್ಲಿ ತೊಡಗಿಕೊಳ್ಳುವ ಕುರಿತು, ಕಠಿಣ ವಿಷಯಗಳ ಕರಗತ ಮಾಡಿಕೊಳ್ಳುವ ಕುರಿತು, ಇಂಗ್ಲೀಷ್ ವಿಷಯ ಓದುವ ಕುರಿತು ವಿವರಿಸಿದರು. ತಾಲೂಕು ಶಿಕ್ಷಣ ಸಂಪನ್ಮೂಲ ಅಧಿಕಾರಿಗಳು, ಸಿರಿಗೇರಿಯ 2ಸರ್ಕಾರಿ ಮತ್ತು 2ಖಾಸಗೀ ಪ್ರೌಢಶಾಲೆ ಮತ್ತು ಶಾನವಾಸಪುರ, ಕೊಂಚಿಗೇರಿ, ಮುದ್ದಟನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಗುರುಗಳು, ಸಹಶಿಕ್ಷಕರು, 10ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕರಾದ ನಾಗವೇಣಿ.ಎಚ್.ಎಂ. ಮತ್ತು ಎನ್. ವಿಶಾಲಮ್ಮ, ನಿರ್ವಸಹಿಸಿದರು. 

Attachments area