ಎಸ್‌ಎಸ್‌ಎಲ್‌ಸಿ ಚಿತ್ರದುರ್ಗಕ್ಕೆ ಪ್ರಥಮ

ಚಿತ್ರದುರ್ಗ,ಮೇ.೦೮: ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ಶೇ ೯೬.೮ ರಷ್ಟು ದಾಖಲೆಯ ಫಲಿತಾಂಶದೊಂದಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ.
ಕಳೆದ ೨೦೨೧-೨೨ ನೇ ಸಾಲಿನಲ್ಲಿ ಶೇ ೯೪.೩೧ ಫಲಿತಾಂಶ ಪಡೆದ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿತ್ತು. ಈ ವರ್ಷ ಶೇ ೨.೫ ರಷ್ಟು ಫಲಿತಾಂಶ ಸುಧಾರಿಸಿದ್ದು, ಮೊದಲ ಸ್ಥಾನಕ್ಕೆ ಏರಿದೆ.
೨೦೧೯- ೨೦ರಲ್ಲಿ ಶೇ ೮೮.೬೬ ಹಾಗೂ ೨೦೨೦-೨೧ರಲ್ಲಿ ಶೇ ೧೦೦ ರಷ್ಟು ಫಲಿತಾಂಶ ದಾಖಲಿಸಿತ್ತು.
ಜಿಲ್ಲೆಯಲ್ಲಿ ೨೩,೪೨೮ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರ್ ರೆಡ್ಡಿ, ವಿಷಯವಾರು ಪರಿಣಿತರನ್ನು ಗುರುತಿಸಿ ಅವರೊಂದಿಗೆ ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆಗೆಂದು ಸೂಕ್ತ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಾಗಿತ್ತು.
ಮಕ್ಕಳಿಗೆ ಅಧ್ಯಯನ ಸಾಮಗ್ರಿ, ಪರೀಕ್ಷಾ ಉತ್ತೀರ್ಣಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಸಿದ್ಧಪಡಿಸಿ ನೀಡಲಾಗಿತ್ತು. ಮಕ್ಕಳಿಗೆ ಪಠ್ಯೆ ವಿಷಯಗಳು ಅರ್ಥೈಸುವ ರೀತಿಯಲ್ಲಿ ಹೆಚ್ಚಿನ ಶ್ರಮವಹಿಸಿ ಭೋಧನೆ ಮಾಡಿ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆಯಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಪ್ರತಿಯೊಬ್ಬರು ಪಟ್ಟ ಶ್ರಮ ಫಲ ನೀಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಎಂದು ತಿಳಿಸಿದ್ದಾರೆ.