ಎಸ್‌ಎಸ್‌ಆರ್‌ಜಿ ಮಹಿಳಾ ಮಹಾವಿದ್ಯಾಲಯ : ಪ್ರೇಮಚಂದ ಜಯಂತಿ ಆಚರಣೆ

ರಾಯಚೂರು.ಆ.೦೪- ಪ್ರೇಮಚಂದರು ತಾವು ರಚಿಸಿರುವ ಕಾಯಕವೆಂಬ ಕೃತಿಗಳ ಮೂಲಕ ಅಪಾರ ಶ್ರೀಮಂತಿಕೆಯನ್ನು ಈ ಲೋಕಕ್ಕೆ ಬಿಟ್ಟು ಹೋಗಿರುವ ಮಹಾನ್ ಚೇತನ” ಎಂದು ಕರುಣಾ ಪಂಕಜ್ ಬೋಹರಾ ಹೇಳಿದರು.
ಇಂದು ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಚನ್ನಬಸಮ್ಮ ಎಮ್ ನಾಗಪ್ಪ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಮಹಾನ್ ಕಥಾ ಶಿಲ್ಪಿ ಮುಂಶಿ ಪ್ರೇಮ್‌ಚಂದ್ರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕರುಣಾ ಪಂಕಜ್ ಬೋಹರಾ ಇವರು ಕು.ಫೀಜಾ ಪಿಯು ವಿದ್ಯಾರ್ಥಿನಿ ಪೆನ್ಸಿಲ್ ಸ್ಕೆಚ್‌ನಿಂದ ಬಿಡಿಸಿದ ಪ್ರೇಮ್‌ಚಂದರ ಭಾವಚಿತ್ರವನ್ನು ಅನಾವರಣಗೊಳಿಸುವ ಹಾಗೂ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಪ್ರೇಮಚಂದ್ರ ಜೀವನಪೂರ್ತಿ ಬಡತನ ಮತ್ತು ಸಾಲದ ಬಾಧೆಗಳಲ್ಲಿಯೇ ಕಷ್ಟಪಟ್ಟು ನಂತರ ಬದುಕಿನಲ್ಲಿ ಸದಾ ಪರಿಶ್ರಮ ಹಾಗೂ ಸಾಹಿತ್ಯದಲ್ಲಿ ತಮ್ಮ ಅನುಭವಗಳನ್ನು ಬರಹಗಳ ಮೂಲಕ ಕಥೆ ಕಾದಂಬರಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಡಾ.ಶಾಮ್ ಗಾಯಕವಾಡ್ ಸಹಾಯಕ ಪ್ರಾಧ್ಯಾಪಕರು ಬಿಆರ್‌ಬಿ ಮಹಾವಿದ್ಯಾಲಯ ರಾಯಚೂರು ಮಾತನಾಡುತ್ತಾ, ಪ್ರೇಮಚಂದರು ಬಾಲ್ಯದಿಂದಲೇ ಅವರಿಗೆ ಪುಸ್ತಕ ಓದುವ ಹವ್ಯಾಸವಿತ್ತು.
ತಮ್ಮ ಬದುಕಿನ ಸಂಘರ್ಷದ ಬಗ್ಗೆ ಮತ್ತು ಸಾಮಾನ್ಯರ ಬದುಕಿನ ಹಲವು ಸಮಸ್ಯೆಗಳಾದ ಪರಾದೀನತೆ, ರೈತರ ಶೋಷಣೆ, ಬಡತನ, ಅನಕ್ಷರಕ್ಷತೆ, ವರದಕ್ಷಿಣೆ, ಮನೆ ಮತ್ತು ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ವೇಶ್ಯೆಯರ ಬದುಕು, ವೃದ್ಧರ ವಿವಾಹ, ವಿಧವೆಯರ ಸಮಸ್ಯೆ, ಅಸ್ಪೃಶ್ಯತೆ ಮುಂತಾದವುಗಳ ಸೇರದಂತೆ ಮಧ್ಯಮ ವರ್ಗದ ಪರಿವಾರದಲ್ಲಿ ನಡೆಯುವ ಕಷ್ಟಪಡುಗಳನ್ನು ಕುರಿತಾಗಿ ಸಾಹಿತ್ಯದ ಮುಖಾಂತರ ಜನರ ಮನಮುಟ್ಟುವಂತೆ ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.
ಈ ಕಥೆಗಳು ಬಹುತೇಕರ ಮೇಲೆ ಈ ಸಾಹಿತ್ಯದ ಪ್ರಭಾವವು ಮೂಡಿ ಬಂದಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್‌ಎಸ್ ಆರ್ ಜಿ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯರಾದ ಸತ್ಯನಾರಾಯಣ ಅವರ ಮಾತನಾಡುತ್ತಾ, ಮಹಾತ್ಮ ಗಾಂಧೀಜಿಯವರನ್ನು ಮೊದಲ ಬಾರಿಗೆ ಕಂಡ ಅನುಭವದ ಪರಿಣಾಮವಾಗಿ ಪ್ರೇಮ್‌ಚಂದರು ಗೋದಾನ ಮತ್ತು ಮಂಗಳಸೂತ್ರ ಹೀಗೆ ಮುಂತಾದ ಕಥೆಗಳನ್ನು ಬರೆಯುವಲ್ಲಿ ಕ್ರಾಂತಿಕಾರಕ ಸಾಮಾಜಿಕ ಪರಿವರ್ತನೆ ನಿಲುವುಗಳನ್ನು ಹೆಚ್ಚು ಹೆಚ್ಚು ಅಭಿವ್ಯಕ್ತಿಸಿಕೊಂಡ ಮಹನೀಯರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಅರುಣಾ ಹಿರೇಮಠ ಅವರು ಮಾತನಾಡುತ್ತಾ, ಪ್ರೇಮ್‌ಚಂದರು ಹುಟ್ಟಿನಿಂದಲೂ ಕಷ್ಟಗಳನ್ನು ಸಹಿಸಿ ಸಂಘರ್ಷಮಯವಾದ ಜೀವನ ಸಾಗಿಸಿ ತಮ್ಮದೇ ಆದ ಸ್ವಾತಂತ್ರ ಜೀವನ ನಡೆಸಲು ಇಷ್ಟಪಡುತ್ತಿದ್ದರು. ಕೀರ್ತಿ ಹೆಗ್ಗಳಿಕೆಗೆ ಎಂದು ಮಾರುಹೋಗುತ್ತಿರಲಿಲ್ಲ, ಇವರ ಸಾಹಿತ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬ್ರಿಟಿಷ್ ಸರ್ಕಾರವು ಪ್ರಶಸ್ತಿ ಕೊಡಲು ಮುಂದೆ ಬಂದಾಗ, ಪ್ರೇಮ್‌ಚಂದರು ಒಂದು ಮಾತನ್ನು ಹೇಳುತ್ತಾರೆ- ನನಗೆ ಪ್ರಶಸ್ತಿಗಳಿಗಿಂತ ಸ್ವಾತಂತ್ರ ಮತ್ತು ಸಮಾಜದ ಮಾನವೀಯ ಮೌಲ್ಯಗಳು ಹೆಚ್ಚು ಪ್ರಾಮುಖ್ಯತೆ ಕೊಡುವೆ ಎಂದು ಹೇಳಿ ಪ್ರಶಸ್ತಿಗಾಗಿ ಒಲವನ್ನು ತೋರಿಸದ ಮಹಾನ್ ಚೇತನರಾಗಿದ್ದರು ಎಂದು ಹೇಳಿದರು.
ಸಮೀರಾ, ಶ್ರೇಯ, ಫಲಕನಾಜ, ಐಶ್ವರ್ಯ ವಿದ್ಯಾರ್ಥಿನಿಯರು ಕೂಡ ಪ್ರೇಮ್ಚಂದರನ್ನು ಕುರಿತು ಮಾತನಾಡಿದರು. ಇನ್ನೋರ್ವ ಅತಿಥಿಗಳಾದ ಡಾ. ವೆಂಕಪ್ಪ ನಾಯಕಿ ಅವರು ಮಾತನಾಡುತ್ತಾ, ಪ್ರೇಮ್‌ಚಂದರ ಸಾಹಿತ್ಯವನ್ನು ನೋಡಿದಾಗ ಅವರ ಬರವಣಿಗೆ ಅಪಾರವಾದದ್ದು ಬರೆಯದಿದ್ದರೆ ತಾನು ಬದುಕುವುದಿಲ್ಲ ಮಟ್ಟಿಗೆ ಸಾಹಿತ್ಯವೇ ಒಂದು ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಅಂಶ ನಾವು ನೋಡಬಹುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿಎಂಎನ್‌ಪಿಯು ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ್ ದೊಡ್ಡಮನಿ ಮಾತನಾಡುತ್ತಾ, ಪ್ರೇಮ್ ಚಂದರು ಶತಮಾನದ ಪ್ರಾರಂಭದ ಕಾಲದಲ್ಲಿ ಸಾಹಿತ್ಯವನ್ನು ರಚಿಸಿದ್ದು ಈಗ ನಾವುಗಳು ೨೧ನೇ ಶತಮಾನದಲ್ಲಿ ಅವರ ಸಾಹಿತ್ಯದ ಪ್ರಭಾವವನ್ನು ಇಂದಿಗೂ ಕೂಡ ಗುರುತಿಸಬಹುದು ಅವರ ಸಾಹಿತ್ಯ ಅಪಾರವಾದದ್ದು.
ಅವರ ಬರಹಗಳು ಇಂದಿಗೂ ಕೂಡ ಅಸಾಧಾರಣವಾದ ಸೃಜನಶೀಲತೆಗೆ ಜೀವಂತ ಸಾಕ್ಷಿಯಾಗಿವೆ” ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಗೂ ಪಿಯುಸಿ ಮತ್ತು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕು. ಇಂದು ಮತ್ತು ಕು.ಆಯಿಷಾ ಪ್ರಾರ್ಥಿಸಿದರು.ಕು.ಗೌಸಿಯಾ ಪ್ರಾಸ್ತವಿಕ ನುಡಿಗಳನ್ನು ಆಡಿದರು. ಕು. ಆಯಿಷಾ ಸಿದ್ದಿಕಿ ಮತ್ತು ಕು.ಉಮ್ಮೆಹಾನಿ ನಿರೂಪಿಸಿದರು. ಕು.ಸಲ್ಮಾ ಮತ್ತು ಕು.ಆಯಿಷಾ ಸ್ವಾಗತಿಸಿದರು. ಕು. ಫಲಕನಾಜ ಮತ್ತು ಕು .ಆಲಿಯಾ ವಂದಿಸಿದರು.