ಎಸ್‍ಎಲ್ ವಿ ಚಿತ್ರೀಕರಣ ಪೂರ್ಣ

ಹೊಸಬರ ‘ಸಿರಿ ಲಂಬೋದರ ವಿವಾಹ” ಬಿಡುಗಡೆಗೆ ಸಜ್ಜಾಗಿದೆ. ಹಿರಿಯ ನಟ ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಮತ್ತು ಕಿರುತೆರೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಅಂಜನ್ ಭಾರಧ್ವಜ್ ನಾಯಕ,ನಾಯಕಿಯಾಗಿ ಅಭಿನಯಿಸಿದ್ದಾರೆ.

ಕಿರುತೆರೆಯ ಕಲಾವಿದ ಸೌರಭ್ ಕುಲಕರ್ಣಿ ಚೊಚ್ಚಲ ಬಾರಿಗೆ ಆಕ್ಷನ್‍ಕಟ್ ಹೇಳಿರುವ ಚಿತ್ರ ಇದು. ನಟ ರಮೇಶ್ ಅರವಿಂದ್ ಚಿತ್ರ ಟೀಸರ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಸೌರಬ್ ಕಲಕರ್ಣಿ,ಇದೊಂದು ಕಮರ್ಷಿಯರ್ಷಿಲ್ ಸಸ್ಪೆನ್ಸ್  ಚಿತ್ರ. ಯುವ ಉತ್ಸಾಹಿ ತಂಡ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದೆ.ಚಿತ್ರವನ್ನು ಬೆಂಗಳೂರು, ಮೈಸೂರಿನಲ್ಲಿ 39ದಿನಗಳ ಕಾಲ ಚಿತ್ರೀಕಣ ಮಾಡಲಾಗಿದೆ. ಮೊದಲ ಪ್ರತಿ ಸಿದ್ದವಾಗಿದ್ದು ಇನ್ನೆರೆಡು ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ಮುಂದಿನ ತಿಂಗಳು ಎರಡು ತಿಂಗಳು ಮಸ್ಕತ್ ,ದುಬೈ ಅಬುದಾಬಿ ,ಶಾರ್ಜಾದಲ್ಲಿ ಚಿತ್ರ ಪ್ರೀಮಿಯರ್ ಶೋನಡೆಯಲಿದೆ ಎಂದರು.

ನಾಯಕ ಅಂಜನ್ ಭಾರದ್ವಜ್ , ಇಷ್ಟಪಟ್ಟು ಮಾಡಿದ್ದೇವೆ.ಎಲ್ಲರ ಮನೆ ತಲಪಲು ಸಹಾಯ ಮಾಡಿ. ಚಿತ್ರದಲ್ಲಿ ನನ್ನದು ವೆಡ್ಡಿಂಗ್  ಪ್ಲಾನರ್ ಪಾತ್ರ ಎಂದರೆ ನಟಿ ದಿಶಾ ರಮೇಶ್, ಟೀಸರ್ ಬಿಡುಗಡೆಯಾಗಿದೆ ಎಲ್ಲರ ಪ್ರೀತಿ ಸಹಕಾರ ಆರೈಕೆ ಇರಲಿ,

ಒಳ್ಳೆಯದು ಕೊಟ್ಟರೆ  ಜನ ತಗೊತ್ತಾರೆ ಎನ್ನುವ ವಿಶ್ವಾಸ ಹೊಸಹಾಕಿದರು. ಹಿರಿಯ ಕಲಾವಿದ ಸುಂದರ್ ವೀಣಾ, ಚಿತ್ರದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟಿದ್ದೇನೆ.ವಿಭಿನ್ನಲುಕ್ ಇದೆ.ಚಿತ್ರ ನೋಡಿ ಹರಿಸಿ ಎಂದರು. ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಸಂಗೀತ ನಿರ್ದೇಶಕ ಸಂಘರ್ಷ್ ಹಾಗು ಹಿರಿಯ ನಟ ಮಂಡ್ಯ ರಮೇಶ್  ಹೊಸ ತಂಡ, ಸಂವೇದನಾ ಶೀಲ ತಂಡ ಉಳಿಯಬೇಕು ಬೆಂಬಲಿಸಿ ಎಂದರು.