ಎಸ್‌ಎಲ್‌ಸಿ ವಿದ್ಯಾರ್ಥಿಗಳ ತಾಯಂದಿರ ಸಮಾವೇಶ

ಹೊಸಕೋಟೆ, ಜ.೧-ಎಸ್‌ಎಲ್‌ಸಿ ಯಲ್ಲಿ ಶೇ.೧೦೦ರಷ್ಟು ಫಲಿತಾಂಶ ತರುವ ಉದ್ದೇಶದಿಂದ ವಿದ್ಯಾರ್ಥಿಗಳ ತಾಯಂದಿರ ಸಮಾವೇಶವನ್ನು ಆಯೋಜಿಸಲಾಗಿದೆ. ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ಅರಳೆಮಾಕನಹಳ್ಳಿ ಶ್ರೀಸಪ್ತ ಮಾತೃಕೆಯರ ದೇವಾಲಯ ಆವರಣದಲ್ಲಿ ನಡೆದ ತಾಯಂದಿರ ಸಮಾವೇಶದಲ್ಲಿ ಮಾತನಾಡಿದರು.
೨೦೨೪ನೇ ಮಾರ್ಚ್‌ನಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೊಸಕೋಟೆ ತಾಲೂಕು ಕಳೆದ ಭಾರಿ ೪ನೇ ಸ್ಥಾನಗಳಿಸಿದ್ದು, ಮುಂದಿನ ಸಾಲಿನಲ್ಲಿ ಶೇ.೧೦೦ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲೆ ಪ್ರಥಮ ಸ್ಥಾನ ಗಳಿಸಬೇಕು. ಎಂಬ ಉದ್ದೇಶದಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ತಾಯಂದಿರ ಸಮಾವೇಶವನ್ನು ಆಯೋಜಿಸಲಾಗಿದೆ. ಮಕ್ಕಳಿಗೆ ಮನೆಯಲ್ಲಿ ಮೂರು ತಿಂಗಳುಗಳ ಕಾಲ ಮಕ್ಕಳಿಗೆ ಓದುವ ವಾತಾವರಣವನ್ನು ಸಮರ್ಪಕವಾಗಿ ಸೃಷ್ಠಿಮಾಡಿಕೊಡುವ ಕೆಲಸ ತಾಯಂದಿರಿಂದ ಆಗಬೇಕು ಎಂದರು.
ಬಿಇಓ ಪದ್ಮನಾಭ ಮಾತನಾಡಿ ೨೦೨೪ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಭಾರಿ ಹೊಸಕೋಟೆ ತಾಲ್ಲೂಕನ್ನು ಶೇ ೧೦೦ ರಷ ಫಲಿತಾಂಶ ತಂದು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ತರುವ ಉದ್ದೇಶದಿಂದ ವಿದ್ಯಾರ್ಥಿಗಳ ತಾಯಂದಿರ ಪಾತ್ರ ಅಗತ್ಯವಾಗಿದೆ. ಮನೆಯಲ್ಲಿ ಮಕ್ಕಳಿಗೆ ಮೊಬೈಲ್, ಟಿವಿಯಿಂದ ದೂರವಿರಿಸಿ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವಲ್ಲಿ ಬೆಂಬಲವಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ತಾಯಂದಿರಿಗೆ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ ಶಾಸಕರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದೆ. ಎಂದರು.
ಡಿಡಿಪಿಐ ಕೃಷಮೂರ್ತಿ, ಗ್ರಾಪಂ ಅಧ್ಯಕ್ಷ ರಮೇಶ್, ಸಪ್ತ ಮಾತೃಕೆ ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಗಟ ನರೇಂದ್ರಪ್ಪ, ಉಪಾಧ್ಯಕ್ಷ ಮುನಿರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಪ್ಪ, ತಾಲ್ಲೂಕು ಅಧ್ಯಕ್ಷ ಅಲ್ಲಾಬಕಾಶ್ ಹಾಜರಿದ್ದರು.

ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಿ
ವಿದ್ಯಾರ್ಥಿಗಳನ್ನು ಎಂದಿಗೂ ಕೂಡ ಇತರೆ ಮಕ್ಕಳಿಗೆ ಹೋಲಿಕೆ ಮಾಡಬೇಡಿ. ಪ್ರಪಂಚದಲ್ಲಿ ಒಬ್ಬರಂತೆ ಮತ್ತೊಬ್ಬರಿರೋಲ್ಲ. ಪ್ರತಿಯೊಬ್ಬ ಮಕ್ಕಳು ತಮ್ಮದೇ ಅದ ಬುದ್ದಿಶಕ್ತಿ ಹೊಂದಿರುತ್ತಾರೆ. ಮನೆಯಲ್ಲಿ ಪೋಷಕರು ಸ್ನೇಹಿತರಂತೆ ನೋಡಿಕೊಂಡು ಅವರಿಗೆ ಜ್ಞಾನಾರ್ಜನೆಗೆ ಅಗತ್ಯವಾದ ಪೌಷ್ಠಿಕಾಂಶವುಳ್ಳ ಅಹಾರವನ್ನು ಒದಗಿಸಿ, ಓದುವ ಪ್ರೇರಣೆ ನೀಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ತಿಳಿಸಿದರು.