ಎಸ್‌ಎನ್‌ಆರ್‌ನ 12 ವಿಶೇಷ ಕೊಠಡಿಗಳು ಲೋಕಾರ್ಪಣೆ

ಕೋಲಾರ,ಮಾ,೨೮- ನಗರದ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಮೂರನೇ ಅಂತಸ್ತಿನಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನ ೭೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ್ದ ೧೨ ವಿಶೇಷ ಕೊಠಡಿಗಳ ಉದ್ದಾಟನೆಯನ್ನು ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಅವರು ನೆರವೇರಿಸಿದರು,
ಸರ್ಕಾರವು ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಿಗೆ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಇಂಚರ ಗೋವಿಂದರಾಜು ರೂ ೨೦ ಲಕ್ಷ, ಸಂಸದರಾದ ಎಸ್.ಮುನಿಸ್ವಾಮಿ ರೂ ೨೦ ಲಕ್ಷ , ವೈ.ಎ.ನಾರಾಯಣಸ್ವಾಮಿ, ನಸ್ಸೀರ್ ಆಹಮದ್ ಹಾಗೂ ಸಿ.ಮನೋಹರ್ ಅವರುಗಳು ತಲಾ ರೂ ೧೦ ಲಕ್ಷದಂತೆ ಒಟ್ಟು ೭೦ ಲಕ್ಷರೂ ವೆಚ್ಚದಲ್ಲಿ ೧೦ ಹಾಸಿಗೆಯ ೧೦ ವಿಶೇಷ ಕೊಠಡಿಯ ಜೂತೆಗೆ ೨ ವಿ.ಐ.ಪಿ. ಕೊಠಡಿಗಳು ಸೇರಿದಂತೆ ಒಟ್ಟು ೧೨ ಕೊಠಡಿಗಳು ನಿರ್ಮಿಸಲಾಗಿರುವುದ್ದನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಗೋವಿಂದರಾಜು ಅವರು ಮಾತಾಡಿ ಕೊಠಡಿಗಳನ್ನು ಉತ್ತಮವಾಗಿ ನಿರ್ವಹಿಸಿ ಕೊಂಡು ಬಡ ಜನತೆಗೆ ಹೆಚ್ಚಿನ ಅದ್ಯತೆ ನೀಡಿ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ವಿಜಯಕುಮಾರ್ ಮತ್ತು ಸಿಬ್ಬಂದಿಗಳಿಗೆ ಕಿವಿ ಮಾತು ತಿಳಿಸಿದರು