
ದಾವಣಗೆರೆ,ಏ.11; ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಆಕಾಡಮಿ ಹರಿಹರ ಹಾಗೂ ಆಯುಷ್ ಇಲಾಖೆ ಮತ್ತು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ದಾವಣಗೆರೆ ಇವರ ಸಹಕಾರದೊಂದಿಗೆ ಅಂತರಾಷ್ಟಿçÃಯ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ಮಹಿಳೆಯರ ಯೋಗಾಸನ ಸ್ಪರ್ಧೆಯನ್ನು ಹರಿಹರದ ಶ್ರೀ ಸಿದ್ಧರೂಡ ಸಬಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.ರಾಜ್ಯ ಮಟ್ಟದ ಮಹಿಳೆಯರ ಯೋಗಾಸನ ಸ್ಪರ್ಧೆಯಲ್ಲಿ ನಗರದ ಎಸ್‌ಎಎಸ್‌ಎಸ್ ಯೋಗಾಫೇಡರೇಷನ್‌ನ ಯೋಗಾ ವಿದ್ಯಾರ್ಥಿನಿಯರು ಭಾಗವಹಿಸಿದ ಐವರು ಮೇ 17ರಂದು ಜಮ್ಮು ಕಾಶ್ಮೀರದಲ್ಲಿ ನಡೆಯುವ ರಾಷ್ಟçಮಟ್ಟದ ಯೋಗಾ ಸ್ಪರ್ಧೆಗೆ ಆಯ್ಕೆಯಾಗಿ ನಗರ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಎಸ್‌ಎಎಸ್‌ಎಸ್ ಯೋಗಾಫೇಡರೇಷನ್‌ನ 10 ರ ವಯೋಮಿತಿ ವಿಭಾಗದಲ್ಲಿ ಕು. ಅನುಷ್ಕ್ ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ 17 ರಿಂದ 23 ರ ವಯೋಮಿತಿ ವಿಭಾಗದಲ್ಲಿ ಕು. ಸಂಜನಾ.ಎಸ್, 4ನೇ ಸ್ಥಾನ ಪಡೆದಿದ್ದಾರೆ 26ರಿಂದ 32ರ ವಯೋಮಿತಿ ವಿಭಾಗದಲ್ಲಿ ಶ್ರೀಮತಿ ಲಾವಣ್ಯ ಅವರು ಬಂಗಾರದ ಪದಕ ಪಡೆಯುವದರೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ 35 ರಿಂದ 45ರ ವಯೋಮಿತಿ ವಿಭಾಗದಲ್ಲಿ ಶ್ರೀಮತಿ ಲೀಲಾವತಿ ದೇವರಾಜ್‌ಇವರು ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನ 51 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಶ್ರೀ ಮತಿ ಗೀತಾ ಎಸ್.ಪಿ. ಇವರು ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಎಸ್‌ಎಎಸ್‌ಎಸ್ ಯೋಗಾಫೇಡರೇಷನ್‌ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಯೋಗಾಚಾರ್ಯ ಡಾ. ಎನ್. ಪರಶುರಾಮ್, ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವ ಪದಾಧಿ ಕಾರಿಗಳು ಶುಭಾ ಹಾರೈಸಿದ್ದಾರೆ.