ಎಸ್‍ಎಂವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಸಿಐಸಿಎಸಿಎಸ್ ಸಮ್ಮೇಳನ

ರಾಯಚೂರು, ಫೆ 25: ನಗರದ ಹೆಚ್.ಕೆ.ಇ. ಸಂಸ್ಥೆಯ ಎಸ್.ಎಂ.ವಿ. ( ಹಿಂದಿನ ಎಸ್ ಎಲ್ ಎನ್ ) ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಎಂಡ್ ಸಿಇ ವಿಭಾಗದಿಂದ ಅಂತರಾಷ್ಟ್ರೀಯ ಮಟ್ಟದ ಐಸಿಐಸಿಎಸಿಎಸ್ -2024 ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಐಐಎಸ್‍ಸಿ ಪ್ರಾಧ್ಯಾಪಕ ಡಾ.ಟಿ. ಶ್ರೀನಿವಾಸ್‍ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಥಾಲ್‍ಸ್ಯಾಟ್ ಸಂಸ್ಥೆ ಸಿಇಒ ಡಾ.ಪ್ರದೀಪ್ ವಿ ದೇಸಾಯಿ, ಹಾಗು ತಿರುಪತಿ ಐಐಟಿಯ ಡಾ. ಚಲವಾದಿ ವಿಷ್ಣುಆಗಮಿಸಿದ್ದರು. ವಿಶೇಷ ಆಹ್ವಾನಿತರಾಗಿ ಪ್ರೊ ರವಿ ಹೊಸಮನಿ ಆಗಮಿಸಿದ್ದರು. ಕಾಲೇಜಿನ ಇ ಎಂಡ್ ಸಿ ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ ಪಿ ಹಾಗೂ ಸಿ ಎಸ್ ಇ ವಿಭಾಗದ ಮುಖ್ಯಸ್ಥರಾದ ಪ್ರೊ. ಸುಮಂಗಲ ಇಟಗಿ ಹಾಗು ಇ ಎಂಡ್ ಸಿಇ ವಿಭಾಗದ ಪ್ರೊ.ರಾಚಮ್ಮ ಪಾಟೀಲ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಟಿ. ಶ್ರೀನಿವಾಸ್ ಅಂತರಾಷ್ಟ್ರೀಯ ಮಟ್ಟದ ಐಸಿಐಸಿಎಸಿಎ¸ ಸಮ್ಮೇಳನದಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸನ ಹಾಗು ಸಂಶೋಧನಾ ಕೌಶಲ್ಯ ವೃದ್ಧಿಗೊಳ್ಳುತ್ತದೆ ಎಂದರು.ಇನ್ನೋರ್ವ ಅತಿಥಿ ಡಾ. ಪ್ರದೀಪ್ ವಿ ದೇಸಾಯಿ ಮಾತನಾಡಿ ಇಂದಿನ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಭವಿಷ್ಯವಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಮೊದಲಿನಿಂದಲೂ ಸತತ ಪ್ರಯತ್ನ ಆತ್ಮ ವಿಶ್ವಾಸ ಹೊಂದಿರಬೇಕೆಂದು ಕರೆಕೊಟ್ಟರು.
ಮತ್ತೋರ್ವ ಅತಿಥಿ ಡಾ. ಚಲವಾದಿ ವಿಷ್ಣು ಮಾತನಾಡಿ,ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಲಹೆಕೊಟ್ಟರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪ್ರೊ: ರವಿ ಹೊಸಮನಿ ಮಾತನಾಡಿ ಇಂತಹ ಸಮ್ಮೇಳನವನ್ನು ಪ್ರತಿವÀರ್ಷ ಆಯೋಜನೆ ಮಾಡಲು ಐಇಇಇ ಉತ್ತರ ಕರ್ನಾಟಕ ಉಪವಿಭಾಗ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರುಇ ಎಂಡ್ ಸಿಇ ವಿಭಾಗದ ಮುಖ್ಯಸ್ಥ ಡಾ. ಪಿ.ವಿಶ್ವನಾಥ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಕಾಲೇಜಿನ ಸಂಚಾಲಕ ಗಿರಿಜಾಶಂಕರ್ ಹಾಗು ಕಾಲೇಜಿನ ಪ್ರಾಚಾರ್ಯಡಾ.ಆರ್. ಬಸವರಾಜ ಈ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಶುಭ ಹಾರೈಸಿದರು.
ಸಮ್ಮೇಳನದಲ್ಲಿ ವಿವಿಧ ದೇಶದ ಸ್ಕಾಲರ್ಸ್ ಹಾಗು ಕಾಲೇಜಿನ ವಿದ್ಯಾರ್ಥಿಗಳು ಭಾಗವಿಹಿಸಿದ್ದರು. ಕಾರ್ಯಕ್ರಮವನ್ನು ಪ್ರೊ|| ಸ್ಮಿತಾ ಚೆಟ್ಟಿ ನಿರೂಪಿಸಿದರು, ಪ್ರೊ. ರಾಚಮ್ಮ ಪಾಟೀಲ್ ಸ್ವಾಗತಿಸಿದರು, ಪ್ರೊ. ಸುಮಂಗಲ ಇಟಗಿ ವಂದಿಸಿದರು.