ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಗೆ ಸಮಗ್ರ ಚಾಂಪಿಯನ್ ಪಟ್ಟ

ಕಲಬುರಗಿ:ಆ.4:ಆಳಂದ ಪಟ್ಟಣದ ದಕ್ಷಿಣ ವಲಯದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಆಳಂದ ಪಟ್ಟಣದ ಪ್ರತಿಷ್ಠಿತ ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಪಡೆದು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಅಥ್ಲೇಟಿಕ್ಸ್‍ನಲ್ಲಿ ಬಾಲಕಿಯರ ವಿಭಾಗದ 100 ಮೀ ಓಟದಲ್ಲಿ ಶಿವರಂಜನಿ ಪ್ರಥಮ, ಸ್ಫೂರ್ತಿ ದ್ವೀತಿಯ, 200 ಮೀ ಓಟದಲ್ಲಿ ಶಿವರಂಜನಿ ಪ್ರಥಮ, 400 ಮೀ ಓಟದಲ್ಲಿ ಪ್ರಿಯಾ ಪ್ರಥಮ, 600 ಮೀ ಓಟದಲ್ಲಿ ಸೇವಂತಾ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ಗುಂಪು ಸ್ಪರ್ಧೆಗಳಲ್ಲಿ ಖೋಖೋ ಪ್ರಥಮ. ಕಬ್ಬಡ್ಡಿ ಪ್ರಥಮ, ರೀಲೆ ಪ್ರಥಮ ವಾಲಿಬಾಲ್ ದ್ವೀತಿಯ, ಥ್ರೋಬಾಲ್‍ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

ಅಥ್ಲೇಟಿಕ್ಸ್‍ನಲ್ಲಿ ಬಾಲಕರ ವಿಭಾಗದ 100ಮೀ ಓಟದಲ್ಲಿ ಸುಪ್ರೀತ ಪ್ರಥಮ, ಅಮರ ದ್ವೀತಿಯ, 200 ಮೀ ಓಟದಲ್ಲಿ ಚೇತನ ಪ್ರಥಮ, 400 ಮೀ ಓಟದಲ್ಲಿ ಅಕ್ಷಯ ಪ್ರಥಮ, ಸತೀಶ ದ್ವೀತಿಯ ಪಡೆದಿದ್ದಾರೆ. ಬಾಲಕರ ಗುಂಪು ಸ್ಪರ್ಧೆಗಳಲ್ಲಿ ಖೋಖೋ ಪ್ರಥಮ, ಕಬಡ್ಡಿ ಪ್ರಥಮ, ವಾಲಿಬಾಲ್ ದ್ವೀತಿಯ ಥ್ರೋಬಾಲ್ ದ್ವೀತಿಯ, ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಚಕ್ರ ಎಸೆತದಲ್ಲಿ ಶ್ರೀಕಾಂತ ದ್ವೀತಿಯ, ಎತ್ತರ ಜಿಗಿತದಲ್ಲಿ ಆದರ್ಶ ಪ್ರಥಮ, ವಿಶಾಲ ದ್ವೀತಿಯ, ಉದ್ದ ಜಿಗಿತದಲ್ಲಿ ಆದರ್ಶ ಪ್ರಥಮ, ಬಾಲಕಿಯರ ಎತ್ತರ ಜಿಗಿತದಲ್ಲಿ ವಿಜಯಲಕ್ಷ್ಮೀ ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ, ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಕಾರ್ಯದರ್ಶಿಗಳಾದ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯೆ ಜ್ಯೋತಿ ವಿಶಾಕ್, ದೈಹಿಕ ಶಿಕ್ಷಕ ಅನೀಲಕುಮಾರ ಸಾಳುಂಕೆ ಸೇರಿದಂತೆ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.