ಎಸ್‍ಆರ್‍ಎನ್ ಮೆಹತಾ ಶಾಲೆ: ಜಿ.20 ಶೃಂಗ ಅಣಕು ಪ್ರದರ್ಶನ

ಕಲಬುರಗಿ,ಸೆ 11: ನಗರದ ಎಸ್‍ಆರ್‍ಎನ್ ಮೆಹತಾ ಶಾಲೆಯು ಮಾಕ್ ಜಿ.20 ಅಥವಾ ಗ್ರೂಪ್ ಆಫ್ ಶೃಂಗಸಭೆಗೆ ಸಾಕ್ಷಿಯಾಯಿತು.
19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ ಒಳಗೊಂಡಿರುವ ಅಂತರ ಸರಕಾರಿ ವೇದಿಕೆಯಾಗಿದೆ. 19 ದೇಶಗಳನ್ನು ಪ್ರತಿನಿಧಿಸಿದ 6ನೇ, 7ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಭಾಷೆಯಲ್ಲಿ ಪ್ರೇಕ್ಷಕರನ್ನು ಸ್ವಾಗತಿಸಿದರು.
ಜಿ20 ಹೇಗೆ ಪ್ರಾರಂಭವಾಯಿತು ಮತ್ತು ಜಿ20 ಉದ್ದೇಶಗಳು ಏನು ಮತ್ತು ಭಾಗವಹಿಸುವ ಮೂಲಕ ಪ್ರತಿ ದೇಶವು ಯಾವ ಪ್ರಯೋಜನಗಳನ್ನು ಪಡೆಯುತ್ತದೆ ಎಂಬುದನ್ನು ತೋರಿಸುವ ವಿವಿಧ ವೀಡಿಯೊಗಳನ್ನು ಅಧಿವೇಶನದಲ್ಲಿ ಚರ್ಚಿಸಲಾಯಿತು. ಭಾರತದಿಂದ ಅಧ್ಯಕ್ಷತೆಯನ್ನು 2024ರ ಅವಧಿಗೆ ಬ್ರೆಜಿಲ್‍ಗೆ ಅಧಿಕಾರ ನೀಡಲಾಗಿದೆ. ಮುಂದಿನ ಜಿ.20 ಬ್ರೆಜಿಲ್‍ನಲ್ಲಿ ನಡೆಯಲಿದೆ.
ಎಸ್‍ಆರ್‍ಎನ್ ಮೆಹ್ತಾ ಶಾಲೆಯ ಸಮಾಜ ವಿಭಾಗದ ಶಿಕ್ಷಕರು, ಪ್ರಾಚಾರ್ಯರು, ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಸಮಗ್ರ ಕಲಿಕಾ ನೀತಿ ಮತ್ತು ಸಮಗ್ರ ಶಿಕ್ಷಣದ ಭಾಗವಾಗಿ ಶಾಲಾ ಸಭಾಂಗಣದಲ್ಲಿ ಅಣಕು ಜಿ20 ಶೃಂಗಸಭೆ ಹಮ್ಮಿಕೊಳ್ಳಲಾಗಿತ್ತು.
ಹಿಂದಿನ ಶೃಂಗಸಭೆಗಳೊಂದಿಗೆ ಪರಸರ ಸಂಬಂಧ ಹೊಂದಿರುವ ವಿಭಿನ್ನ
ವಿಷಯಗಳ ಬಗ್ಗೆ ಸ್ಪಷ್ಟವಾದ ಆಲೋಚನೆಗಳು ಮತ್ತು ದೃಷ್ಟಿಕೋನಗಳೊಂದಿಗೆ ಎಸ್‍ಆರ್‍ಎನ್ ಮೆಹ್ತಾ ಶಾಲೆಯು ಜಿ.20 ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸಿತು.