ಎಸಿ ಮುಖಾಂತರ ರಾಷ್ಟ್ರಪತಿಗಳಿಗೆ ಎಐಎಂಐಎಂ, ಮನವಿ ಪತ್ರ ಸಲ್ಲಿಕೆ

ಸೇಡಂ,ನ,16:ಪವಿತ್ರ ಪ್ರವಾದಿ ಹಜರತ್ ಮೊಹಮ್ಮದ್ (ಎಸ್.ಎ.) ರನ್ನು ನಿರಂತರವಾಗಿ ಅವಮಾನಿಸುವ ಮತ್ತು ತ್ರಿಪುರಾ ಮುಸ್ಲಿಂ ಸಮುದಾಯದ ಮೇಲೆ ಹಿಂಸಾಚಾರವನ್ನು ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಅಗತ್ಯ ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಐಎಂಐಎಂ ಸೇಡಂ ತಾಲೂಕಾ ಸಮಿತಿ ಗೌರವಾಧ್ಯಕ್ಷ ಇಕ್ಬಾಲ್ ಜಾವೀದ್ ನಿರ್ಣವಿ ನೇತೃತ್ವದಲ್ಲಿ ಸಹಾಯಕ ಉಪ ವಿಭಾಗ ಆಯುಕ್ತರಾದ ಅಶ್ವಿಜಾ ಬಿ ವಿ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆಯಲ್ಲಿ
ಕಾರ್ಯಾಧ್ಯಕ್ಷ ಎಂ.ಡಿ. ಸಲೀಂ ಲಷ್ಕರಿ ಲೀಗಲ್ ವಿಂಗ್ ಅಧ್ಯಕ್ಷ ಅಡ್. ಲಾಲ್ ಅಹಮದ್ ಹೊಸಳ್ಳಿಕರ್ ಉಪಾಧ್ಯಕ್ಷ ಎಂ.ಡಿ. ರಬ್ಬಾನಿ ಪ್ರಧಾನ ಕಾರ್ಯದರ್ಶಿಖಜಾಂಚಿ ಹಫೀಜ್ ಸೈಯದ್ ಶಹಾಬುದ್ದೀನ್ ರಜ್ವಿ ಜಂಟಿ ಕಾರ್ಯದರ್ಶಿ ಸೈಯದ್ ಮಹೆಮೂದ್ ಪಟೇಲ್ ಸೈಯದ್ ಚಂದ್ ಪಾಷಾ ಸೈಯದ್ ಇಸ್ಮಾಯಿಲ್ ಶೇಖ್ ಫಯಾಜ್ ಯುವ ಅಧ್ಯಕ್ಷ ಸೈಯದ್ ಸುಲ್ತಾನ್ ಇನ್ನಿತರರು ಇದ್ದರು.