ಎಸಿ ಗದ್ಯಾಳ ಅಧಿಕಾರ ಸ್ವೀಕಾರ

ಇಂಡಿ : ಜು.21:ಇಂಡಿಯ ಕಂದಾಯ ಉಪವಿಬಾಗಾಧಿಕಾರಿಯಾಗಿ ಅಬೀದ್ ಗದ್ಯಾಳ ಅಧಿಕಾರ ಸ್ವೀಕರಿಸಿದರು.

ಮೂಲತ ರಬಕವಿಯ ಅಭೀದ್‍ರವರು 2014 ರಲ್ಲಿ ಕೆ.ಎ.ಎಸ್ ಪಾಸಾಗಿದ್ದಾರೆ.

ಅವರು ಮಡಕೇರಿಯಲ್ಲಿ ಪರಿಕ್ಷಾರ್ಥ ಅಧಿಕಾರಿಯಾಗಿ, ಜಮಖಂಡಿ ಮತ್ತು ಬ್ಯಾಡಗಿಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ರಾಣಿಬೆನ್ನೂರ, ಬಾಗಲಕೋಟದಲ್ಲಿ ಭೂ ಸ್ವಾಧೀನ್ ಅಧಿಕಾರಿಯಾಗಿ, ಮಂಗಳೂರದಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶದ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಇಂಡಿಯ ಕಂದಾಯ ಉಪ ವಿಬಾಗಾಧಿಕಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡರು.

ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ರಬಕವಿಯಲ್ಲಿ,ಇಂಡಿ ತಾಲೂಕಿನ ಲಚ್ಯಾಣದಲ್ಲಿ ಟಿಸಿಎಚ್, ಧಾರವಾಡದಲ್ಲಿ ಪದವಿ ಪಡೆದಿದ್ದಾರೆ.