ಎಸಿ ಕಚೇರಿ ವೃತ್ತಕ್ಕೆ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೆಸರು ನಾಮಕರಣಕ್ಕೆ ಮನವಿ

ದಾವಣಗೆರೆ.ಡಿ.೩೦; ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ  ಕೂಡಲ ಸಂಗಮದ  ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೆಸರನ್ನ ನಗರದ ಎಸಿ ಕಚೇರಿ ಮುಂಭಾಗ ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಪಂಚಮ ಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಯುವ ಉಸ್ತುವಾರಿಗಳು ಹಾಗೂ ಉತ್ತರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ಪಾಟೀಲ್ ಆಗ್ರಹಿಸಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರು ಸೇರಿದಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ಜನ್ಮಭೂಮಿ ದಾವಣಗೆರೆಯಾಗಿದ್ದು ಇಲ್ಲಿಂದಲೇ ಮಠಾಧಿಪತಿಗಳಾಗಿ ಇಂದು ವಿಶ್ವಾದ್ಯಂತ ಧರ್ಮ ಪ್ರಚಾರಾಕರಾಗಿದ್ದಾರೆ. ಅಲ್ಲದೇ ಪಂಚಮಸಾಲಿ ಸಮಾಜ ಸೇರಿದಂತೆ ಎಲ್ಲಾ ವರ್ಗದವರಿಗೂ ಗುರುವಿನ ಸ್ಥಾನ ನೀಡಿದ್ದಾರೆ. ಈ ನಡುವೆ ಪಂಚಮಸಾಲಿ ಸಮಾಜದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಮಾಜದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆ  ದಾವಣಗೆರೆಯಲ್ಲಿ ಅವರ ಹೆಸರು ಚಿರವಾಗಿರಬೇಕಿದ್ದು ಅವರ ಹೆಸರನ್ನ ಎಸಿ ಕಚೇರಿ ಮುಂಭಾಗದ ವೃತ್ತಕ್ಕೆ ಸ್ವಾಮೀಜಿಗಳ ಹೆಸರನ್ನ ನಾಮಕರಣ ಮಾಡಬೇಕೆಂದು ಶ್ರೀಧರ್ ಪಾಟೀಲ್ ಆಗ್ರಹಿಸಿದ್ದಾರೆ.