ಎಸಿಸಿ ವಾರಿರ್ಯಸ್ ತಂಡ ಜಗಳೂರು ಜೆಪಿಎಲ್ ಚಾಂಪಿಯನ್: ಡಾನ್ ವಾರಿರ್ಯಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ

ಸಂಜೆವಾಣಿ ವಾರ್ತೆ

ಜಗಳೂರು.ಡಿ.೩೦:- ಎಸಿಸಿ ವಾರಿರ್ಯಸ್ ತಂಡ ಜಗಳೂರು ಪ್ರೀಮಿ ಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಪ್ರಥಮ ಸ್ಥಾನ ಪಡೆದು 1 ಲಕ್ಷ ರೂ ನಗದು ಬಹುಮಾನದ ಜೊತೆಗೆ ಆಕರ್ಷಕ ಟ್ರೋಪಿ ಎತ್ತಿ ಹಿಡಿದಿದ್ದು, ಡಾನ್ ವಾರಿರ‍್ಸ್ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ 50 ಸಾವಿರ ನಗದು, ಆಕರ್ಷಕ ಟ್ರೋಪಿಗೆ ತೃಪ್ತಿ ಪಟ್ಟಿಕೊಂಡಿತು.ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಜಗಳೂರು ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ (ಜೆಪಿಎಲ್ ) ಪಂದ್ಯಾವಳಿಯಲ್ಲಿ  ಟಾಸ್ ಸೋತು ಮೊದಲ ಬ್ಯಾಟಿಂಗ್ ಇಳಿದ ಎಸಿಸಿ ವಾರಿರ‍್ಸ್ 6 ಓವರ್‌ಗಳ ಆಟದಲ್ಲಿ 4 ವಿಕೆಟ್ ಕೆಳದುಕೊಂಡು 54 ರನ್ನಗಳ ಗುರಿಯನ್ನು ನೀಡಿತು. ನಂತರ ಡಾನ್ ವಾರಿರ‍್ಸ್ ಬ್ಯಾಟಿಂಗ್ ಆರಂಭಿಸಿ 54 ಗುರಿಗಳ ಬೆನ್ನಟ್ಟಲು ವಿಫಲಗೊಂಡು 22 ರನ್ನುಗಳಿಗೆ ಆಲೌಟ್ ಆಯಿತು. ಎಸಿಸಿ ವಾರಿರ‍್ಸ್ 32 ರನ್ನಗಳ ಮೂಲಕ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದು ಜೆ.ಪಿ.ಎಲ್ ನ ಆಕರ್ಷಕ ಪ್ರಶಸ್ತಿ ಬಾಚಿಕೊಂಡಿತು. ಡಾನ್ ವಾರಿರ‍್ಸ್ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು.ಬೆಸ್ಕಾಂ ತಂಡದ ರೋಷನ್ ಮ್ಯಾನ್ ಆಫ್‌ದ ಮ್ಯಾಚ್ ಪಾಲಾಯಿತು. ಉತ್ತಮ ಬ್ಯಾಟರ್ ಆಗಿ ವಾಲ್ಮಿಕಿ ತಂಡದ ರಮೇಶ್, ಬೆಸ್ಟ್ ಬೋಲರ್ ಎಸಿಸಿ ವಾರಿರ‍್ಸ್ ತಂಡ ಅಭಿ, ಉತ್ತಮ ವಿಕೇಟ್ ಕೀಪರ್ ಆಗಿ ನಾಗರಾಜ್ ಪಡೆದು ಕೊಂಡರು.ಅಪೂರ್ಣವಾಗಿರುವ ಜಗಳೂರು ಕ್ರೀಡಾಂಗಣವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿ ಮುಂದಿನ ವರ್ಷದ ನಡೆ ಯುವ ಜೆಪಿಎಲ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲು ಸಂಕಲ್ಪ ತೊಟ್ಟಿದ್ದೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಜಗಳೂರು ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ (ಜೆಪಿಎಲ್ ) ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಥಮ ಸ್ಥಾನ ಪಡೆದ ಎಸಿಸಿ ವಾರಿರ‍್ಸ್ ತಂಡಕ್ಕೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.ಕ್ರೀಡೆಯು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾ ಗವುದಲ್ಲದೇ ಕ್ರೀಡೆಯಿಂದ ಸಮಾನತೆ, ಜಾತ್ಯಾತೀತ ಮನೋ ಭಾವ ಮೂಡುವುದಲ್ಲದೆ ದೈಹಿಕ ಸದೃಢತೆಗೆ ಪೂರಕವಾಗಿವೆ. ಇತ್ತೀಚಿನ ದಿನಗಳಲ್ಲಿ ಯುವಕರು ಯುವಕಾರಗಿರದೇ ವಿವಿಧ ಅವ್ಯಾಸಗಳಿಗೆ ದಾಸರಾಗಿ ಆರೋಗ್ಯ,ಯವ್ವನಗಳನ್ನು ಕಳೆದು ಕೊಳ್ಳುತ್ತಿದ್ದಾರೆ ಎಮದು ವಿಷಾಧ ವ್ಯಕ್ತಪಡಿಸಿದರು.ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಲ ಟಿಕೆಟ್ ಆಕಾಂಕ್ಷಿ ವಿನಯ್‌ಕುಮಾರ್ ಜೆ.ಬಿ. ಆಕರ್ಷಕ ಮೊದಲ ಟ್ರೋಪಿ ಹಾಗೂ 1 ಲಕ್ಷ ರೂ.ನಗದು ಬಹುಮಾನ ವಿತರಿಸಿ ಮಾತನಾಡಿ ರಾಜಕೀಯವಿರಲಿ, ಕ್ರೀಡೆ ಇರಲಿ ಯುವ ಕ್ರೀಡೆಗಳಿಗೆ ಉತ್ತೇಜನ ನೀಡುವ ಸಂಕಲ್ಪದೊoದಿಗೆ ನಾನು 1 ಲಕ್ಷ ರೂ. ನೀಡಿ ಕ್ರೀಡೆಗೆ ಪ್ರೋತ್ಸಹ ನೀಡಿದೆ. ನಾನು ಸಹ ವಿನೂತನವಾಗಿ ಪಾದ ಯಾತ್ರೆ, ಪ್ರತಿ ನಿತ್ಯ ವಾಸ್ತವ್ಯ ಮಾಡುವ ಹಳ್ಳಿಗಳಲ್ಲಿ ಆ ಗ್ರಾಮದ ಜನರೊಂದಿಗೆ ಗ್ರಾಮಗಳ ಮೂಲ ಭೂತ ಸಮಸ್ಯೆಗಳು, ಕ್ಷೇತ್ರದ ಅಭಿವೃದ್ಧಿ ಕುರಿತು ಸಮಾಲೋಚ ನೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ನಮ್ಮಲ್ಲಾ ಗುವ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೆ ಭಗೆಹರಿಸುವ ಪ್ರಯತ್ನ ಮಾಡುತ್ತಿದ್ದು ಕ್ರೀಡಾಭಿಮಾನಿಗಳು ಸಹ ಪಾದ ಯಾತ್ರೆಗೆ ನಮ್ಮ ಜೊತೆಗೆ ಆಗಮಿಸಿ ಹೆಜ್ಜೆ ಹಾಕುವಂತೆ ಕರೇ ನೀಡಿದರು.