ವಾಡಿ:ಮಾ.23: ಸಮೀಪದ ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿಯು ಸ್ಮಾರ್ಟ್ ಕ್ಲಾಸ್ ಉಪಕರಣಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದೆ.
ಕಂಪನಿಯ ಸಿಎಸ್ ಆರ್ ವಿಭಾಗದ ವತಿಯಿಂದ ಈಚೇಗೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಹಿತದೃಷ್ಟಿಯಿಂದ ಮಕ್ಕಳಲ್ಲಿ ಕಲಿಕೆ ಆಸಕ್ತಿ ಮೂಡಿಸಲು ಸ್ಮಾರ್ಟ್ ಕ್ಲಾಸ್ ಯೋಜನೆ ಜಾರಿಗೆ ತಂದಿದ್ದ, ಕಂಪ್ಯೂಟರ್ ಸ್ಕ್ರೀನ ಸೇರಿದಂತೆ ಅಗತ್ಯ ಉಪಕರಣ ನೀಡಿದೆ. ಎಸಿಸಿ ನೀಡುರುವ ಈ ಕೊಡುಗೆಗೆ ಗ್ರಾಮಸ್ಥರು ಹಾಗೂ ಶಿಕ್ಷಕ ವೃಂದ್ಧ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಎಸಿಸಿ ಸಿಎಸ್‍ಆರ್ ವಿಭಾಗದ ಮುಖ್ಯ ವ್ಯವಸ್ಥಾಪಕ ರಾಜಶೇಖರ ರಾಜು ಪೊದ್ಧರ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾದೃಷ್ಟಿಗಾಗಿ ಎಸಿಸಿ ಸಿಮೆಂಟ್ ಕಾರ್ಖಾನೆಯ ಸಿಎಸ್‍ಆರ್ ವಿಭಾಗ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ, ಟೈಲರಿಂಗ್ ತರಬೇತಿ, ಬೇಕರಿ ಪದಾರ್ಥಗಳ ತಯಾರಿಕಾ ತರಬೇತಿ ಹೀಗೆ ಹಲವು ಸಮಾಜಮುಖಿ ಕೆಲಸಗಳಿಗೆ ಎಸಿಸಿ ಆಡಳಿತ ಮಂಡಳಿ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಸಿಎಸ್‍ಆರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಜಗದೀಶ ರಾಠೋಡ ಮಾತನಾಡಿ, ಶಿಕ್ಷಣ ರಂಗ ಇಂದು ಸಂಪೂರ್ಣ ಡಿಜಿಟಲ್ ಆಗಿದೆ. ಮೊದಲಿನ ಹಾಗೆ ಕೈಯಲ್ಲಿ ಪೇನ್ನು ಹಿಡಿದು ಬರೆಯುವ ದಿನಗಳು ಸದ್ಯ ಇಲ್ಲ. ಮೌಸ್ ಹಿಡಿದು ಕೀಪ್ಯಾಡ್ ಅಕ್ಷರ ಕಲಿಕೆ ನಡೆಸುವ ಕಾಲ ಈಗ ಇದೆ. ಈಗಾಗಿ ಮಕ್ಕಳು ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ರಹೆಮನಸಾಬ್ ಬಾಂಬೆ, ಗ್ರಾಮ ಹಿರಿಯ ಮುಖಂಡ ಹಣಮಂತ ತಳವಾರ, ಯುವ ಬರಹಗಾರ ರಾಯಪ್ಪ ಕೊಟಗಾರ, ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಸುರೇಶಕುಮಾರ ರಾಂಪೂರೆ, ಸಹ ಶಿಕ್ಷಕರಾದ ಮಂಜೂಳಾ ಕುಲಕರ್ಣಿ, ರೀಜವಾನಾ ಬೇಗಂ, ಯೋಶಧ ರೆಡ್ಡಿ ಇದ್ದರು.