‘ಎಸಿ’ಯಿಂದ ಅನಗತ್ಯ ಸಂಚಾರಿಗಳಿಗೆ ‘ಬಿಸಿ’

ಪುತ್ತೂರು, ಜೂ.೯- ಕೊರೊನಾ ಎರಡನೇ ಆಲೆ ತಡೆಯುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಲಾಕ್ಡೌನ್ ನಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ಮಂಗಳವಾರ ಈ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು ಸ್ವತ: ಕಾರ್ಯಾಚರಣೆಗೆ ಇಳಿದರು.
ಜಿಧಿಕಾರಿ ಸೂಚನೆಯಂತೆ ಒಂದುವಾರ ದ.ಕ ಜಿಲ್ಲೆಯಲ್ಲಿ ಕೊರೊನಾ ನಿಯಮ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಲಾಗಿದ್ದು, ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ ಅವರು ಮಾಣಿ ಮೈಸೂರು ರಾಷ್ಟ್ರೀಯ ಹೆzರಿ ಕಬಕ ಪೊಲೀಸ್ ಚೆಕ್ ಪಾಯಿಂಟ್‌ನಲ್ಲಿ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸಿದರು. ಬೆಳಗ್ಗೆ ಗಂಟೆ ೧೦ ರಿಂದ ೧೧ ಗಂಟೆಯ ತನಕ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸಿ ಸರಿಯಾದ ಮಾಹಿತಿ ದಾಖಲೆ ಪತ್ರ ನೀಡಿದವರಿಗೆ ಸಂಚಾರಕ್ಕೆ ಅವಕಾಶ ನೀಡಿ ಉಳಿದಂತೆ ಆನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳ ಮಾಲಕರ ವಿರುದ್ಧ ಕ್ರಮ ಕೈಗೊಂಡರು.
ಟಫ್‌ರೂಲ್ಸ್ ಇದ್ದರೂ ಔಷಧ ಮತ್ತಿತರ ನೆಪ ಹೇಳಿಕೊಂಡು ಅನಗತ್ಯವಾಗಿ ಓಡಾಟ ನಡೆಸುವ ಮಂದಿಯ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹಲವು ದೂರು ಬಂದರೂ ಪೊಲೀಸರಿಗಾಗಲಿ ಅಥವಾ ತಪಾಸಣಾ ಅಧಿಕಾರಿಗಳಿಗೆ ಆನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳವಾರದಿಂದ ಉಪವಿಭಾಗದಲ್ಲಿ ಅನಗತ್ಯ ಸಂಚಾರ ನಿಯಂತ್ರಣಕ್ಕೆ ಪುತ್ತೂರು ಎಸಿ ಸ್ವತಃ ಫೀಲ್ಡ್‌ಗಿಳಿದು ಕಾರ್ಯಚರಣೆ ನಡೆಸಲಿದ್ದಾರೆ.
ಕಠಿಣ ನಿಯಮ ಜಾರಿ
ಲಾಕ್‌ಡೌನ್ ನಿಯಮದನ್ವಯ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ಒಂದು ವಾರ ನಿರಂತರ ವಾಹನ ತಪಾಸಣೆ ನಡೆಯಲಿದೆ. ಪುತ್ತೂರು ಉಪವಿಬಾಗ ವ್ಯಾಪ್ತಿಯ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಭಾಗದಲ್ಲಿ ದಾಖಲೆ ರಹಿತ ಅನಗತ್ಯ ವಾಹನ ಸಂಚಾರಕ್ಕೆ ದಂಡ ವಿಧಿಸಿ ವಾಹನಗಳನ್ನು ಮುಟ್ಟುಗೋಲು ಹಾಕುವಂತೆ ಸೂಚನೆ ನೀಡಲಾಗಿದೆ.
ಡಾ. ಯತೀಶ್ ಉಳ್ಳಾಲ್. ಪುತ್ತೂರು ವಿಭಾಗೀಯ ಅಧಿಕಾರಿ.

ದಂಡ ಸಹಿತ ವಾಹನ ಮುಟ್ಟುಗೋಲು
ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ನಿರ್ದೇಶನದಂತೆ ಮುಂದಿನ ೧ವಾರ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಯಲ್ಲಿರಲಿದೆ ಕಠಿಣ ಕೊರೊನಾ ನೀತಿ ಜಾರಿಯಲ್ಲಿದ್ದು, ಒಂದುವೇಳೆ ಅನಗತ್ಯ ವಾಹನ ಸಂಚಾರ ಕಂಡುಬಂದಲ್ಲಿ ದಂಡ ಸಹಿತ ವಾಹನಗಳನ್ನು ಮುಟ್ಟುಗೋಲು ಹಾಕುವಂತೆ ಪೊಲೀಸರಿಗೆ ಸೂಚನೆ ಇದೆ. ಕಠಿಣ ನಿಯಮವಿದ್ದರೂ ಅನಗತ್ಯ ವಾಹನ ಸಂಚಾರದಿಂದ ಅಂಬುಲೆನ್ಸ್ ನಂತಹ ಅಗತ್ಯ ವಾಹನ ಸಂಚಾರಕ್ಕೂ ಕೆಲವೆಡೆ ತೊಂದರೆ ಯಾಗಿರುವುದು ಗಮನಕ್ಕೆ ಬಂದಿದ್ದು, ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.