ಎಸಿಬಿ ಯಿಂದ ಜನಸಂಪರ್ಕ ಸಭೆ

ಹಿರಿಯೂರು.ಜ.5: ನಗರದ   ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಚಿತ್ರದುರ್ಗ ಎಸಿಬಿ ಪೊಲೀಸ್ ಠಾಣೆ ವತಿಯಿಂದ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚಿತ್ರದುರ್ಗ ಎಸಿಬಿ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಬಸವರಾಜ ಆರ್. ಮಗದುಮ್,  ಪೊಲೀಸ್ ನಿರೀಕ್ಷಕರಾದ ಸಿ.ಜೆ. ಚೈತನ್ಯ, ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ಹಿರಿಯೂರು ಡಿವೈಎಸ್‌ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ರಾಘವೇಂದ್ರ,  ಗ್ರೇಡ್ 2 ತಹಶೀಲ್ದಾರ್ ಚಂದ್ರಕುಮಾರ್ ಹಾಗೂ  ಹಿರಿಯೂರು ನಗರದ ವಿವಿಧ ಸಾರ್ವಜನಿಕರ ಕಚೇರಿಗಳ ಮುಖ್ಯಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಾರ್ವಜನಿಕರು ಅಹವಾಲುಗಳನ್ನು ಮೌಖಿಕವಾಗಿ ತಿಳಿಸಿದ್ದು ಸರ್ಕಾರಿ ಅಧಿಕಾರಿಗಳಿಗೆ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡದಂತೆ ನಿಗದಿತ ಅವಧಿಯೊಳಗೆ ಮಾಡಿಕೊಡುವುದು,  ಸಾರ್ವಜನಿಕರಿಗೆ  ಯಾವುದೇ ಆಮಿಷಗಳನ್ನು ಒಡ್ಡಬಾರದು ಸಾರ್ವಜನಿಕರು ನೀಡಿರುವ ಅರ್ಜಿಗಳನ್ನು ಶೀಘ್ರವಾಗಿ ಕಾನೂನು ಚೌಕಟ್ಟಿನಲ್ಲಿ ವಿಲೇವಾರಿ ಮಾಡಲು ಸೂಚಿಸಲಾಯಿತು. ಸರ್ಕಾರಿ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ದಕ್ಷತೆಯಿಂದ ನಿರ್ವಹಿಸಲು ತಿಳಿಸಲಾಯಿತು.  ಸಾರ್ವಜನಿಕರಿಂದ ತೊಂದರೆಗಳು ಉಂಟಾದಲ್ಲಿ ಎಸಿಬಿ ಅಧಿಕಾರಿಗಳಿಗೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.