ಎಸಿಬಿ ಬಲೆಗೆ ಬಿದ್ದ ಪಿಡಿಒ

ದಾವಣಗೆರೆ.ಏ.೨೭; ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕಡದಕಟ್ಟೆ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಅಟೆಂಡರ್ 5 ಲಕ್ಷ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ.ಕಡದಕಟ್ಟೆ ಗ್ರಾಮದ ಪಂಚಾಯ್ತಿಯ ಪಿಡಿಒ ಕೆ.ಅರುಣ್, ಅಟೆಂಡರ್ ಚನ್ನಬಸಪ್ಪ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ. ದೊಡ್ಡಕೆರೆ ಗ್ರಾಮದ ಕಿರಣ್ ಕುಮಾರ್ ಎಂಬುವರ ಖಾತೆ ಬದಲಾವಣೆ ಮಾಡಿಕೊಡಲು 8ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಿರಣ್ ಕುಮಾರ್ ಎಸಿಬಿಗೆ ದೂರು ದಾಖಲಿಸಿದ್ದರು. 5 ಲಕ್ಷ ಪಡೆಯುವಾಗ ಎಸಿಬಿಯ ಎಸ್ ಪಿ ಜಯಪ್ರಕಾಶ್ ಅವರ ಬಲೆಗೆ ಬಿದ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.