ಎಸಿಬಿ ಬಲೆಗೆ ಪ.ರಾ. ಎಂಜನೀಯರ್


ಧಾರವಾಡ,ನ.11-ಲೈಸೆನ್ಸ್ ಮಾಡಿಕೊಡಲು ಗುತ್ತಿಗೆದಾರನಿಗೆ ಲಂಚದ ಬೇಡಿಕೆ ಇಟ್ಟ ಪಂಚಾಯತ್ ರಾಜ್ಯ ಎಂಜನೀಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಎಂಜನೀಯರ್ ಮನೋಹರ ಮಂಡೋಲಿಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಾಲ್ಕನೇ ದರ್ಜೆ ಗುತ್ತಿಗೆದಾರನಿಗೆ ಲೈಸನ್ಸ್ ನೀಡಲು ಹಣ ಪೆಡಯುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದ ತಂಡ ರೆಡ್ ಹ್ಯಾಂಡಾಗಿ ಖೆಡ್ಡಾಕ್ಕೆ ಬೀಳಿಸಿದ್ದಾರೆ.
ಕಲಘಟಗಿಯ ಕಲ್ಲಪ್ಪ ಶಿರಬಡಗಿ ಎಂಬುವರಿಗೆ ನಾಲ್ಕನೇ ದರ್ಜೆ ಗುತ್ತಿಗೆದಾರನಿಗೆ ಪರವಾನಿಗೆ ಮಾಡಿಸಲು ರೂ.6 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರಿಂದ ಹಲವು ಭಾರಿ ಅಲೆದಾಡಿ ಬೇಸತ್ತು, ಕೊನೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು.
ಕಲ್ಲಪ್ಪ ನೀಡಿದ ದೂರಿನ ಆಧಾರದ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಲಂಚ ಪಡೆಯುವ ವೇಳೆಯಲ್ಲಿ ಎಂಜನೀಯರ್ ಮನೋಹರ್ ಮಂಡೋಲಿಕರ್ ಬಲೆಗೆ ಬಿದ್ದಿದ್ದು, ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.
ಹಣದ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದಿರುವ ಪಂಚಾಯತ್ ರಾಜ್ಯ ಎಂಜನೀಯರ್ ಮನೋಹರ್ ಮಂಡೋಲಿಕರ್ ಅಮಾನತ್ತುಗೆ ಜಿಪಂ ಸಿಇಓಗೆ ಶಿಫಾರಸ್ಸು ಮಾಡಿದ್ದಾಗಿ ಎಸಿಬಿ ಎಸ್ಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.