ಎಸಿಬಿ ಬಲೆಗೆ ಜಗಳೂರು ಬಿಇಒ

ಜಗಳೂರು.ಮಾ.೩೦; ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಬಿಇಓ ಕೊಠಡಿಯಲ್ಲಿ ಶಿಕ್ಷಣ ಸಂಯೋಜಕರಾದ ಮಂಜಪ್ಪ ರವರ ಸಮಕ್ಷಮ ಬಿಇಓ ಸಿ.ಎಸ್. ವೆಂಕಟೇಶ್ ರವರು  ಶಿಕ್ಷಕ ಆಂಜಿನಾಯ್ಕ್ ಅವರಿಂದ 10,000- ರೂ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಸ್ಥಳದಲ್ಲೇ ಮೇಲಿನ ಇಬ್ಬರು ಆಪಾದಿತ ಅಧಿಕಾರಿಗಳನ್ನು , ಎಸಿಬಿ ಅಧಿಕಾರಿಗಳು ದಸ್ತಗಿರಿ ಮಾಡಿರುವ ಘಟನೆ ನಡೆದಿದೆ.ಶಿಕ್ಷಕ ಆಂಜನೇಯ ನಾಯ್ಕ್,  ಜಗಳೂರು ತಾಲೂಕಿನ ಜಾಲಿನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಿಕೊಡಲು ಕೋರಿ ಜಗಳೂರು ಬಿ.ಇ.ಒ ರವರಾದ ಸಿ.ಎಸ್. ವೆಂಕಟೇಶ್ ರವರನ್ನು ಕೋರಿದ್ದಾರೆ. ಆ ಸಮಯದಲ್ಲಿ ಬಿ,.ಇ.ಒ ಕಛೇರಿಯಲ್ಲಿ ಶಿಕ್ಷಣ ಸಂಯೋಜಕರಾದ ಮಂಜಪ್ಪ ರವರನ್ನು ಭೇಟಿ ಮಾಡಲು ತಿಳಿಸಿದ್ದು, ಅದರಂತೆ  ಶಿಕ್ಷಣ ಸಂಯೋಜಕರಾದ ಮಂಜಪ್ಪ ರವರನ್ನು ಭೇಟಿ ಮಾಡಿ ತಮ್ಮ ನಿಯೋಜನೆ ಬಗ್ಗೆ ಕೇಳಿದ್ದು, ಆಗ ಬಿ.ಇ.ಒ ಹೇಳಿದ್ದಾರೆ ನಂತರ ಹಣಕ್ಕೆ ಬೇಡಿಕೆ ಇಟ್ಟು, 10,000 ರೂ ಲಂಚದ ಹಣವನ್ನು ಪಡೆದುಕೊಂಡು, ನಂತರ ಬೇಡಿಕೆ ಇಟ್ಟಿದ್ದ ಹಣದಲ್ಲಿ ಉಳಿದ 15,000/- ರೂಗಳನ್ನು ನೀಡುವಂತೆ ನಿರಂತರವಾಗಿ ಪೀಡಿಸುತ್ತಿದ್ದರಿಂದ ಆಂಜನೇಯ ಎಸಿಬಿಗೆ ದೂರು ನೀಡಿದ್ದರು.ಈ ಕಾರ್ಯಾಚರಣೆಯಲ್ಲಿ  ಎಸಿಬಿ ಪೊಲೀಸ್ ಅಧೀಕ್ಷಕರಾದ ಜಯಪ್ರಕಾಶ್, ಮಾರ್ಗದರ್ಶನದಂತೆ ಕೈಗೊಂಡಿದ್ದು, .  ಡಿಎಸ್‌ಪಿ ಸುಧೀರ್.ಎಸ್,ಪಿಐ ರವರುಗಳಾದ ಮಧುಸೂದನ್, ರವೀಂದ್ರ.ಎಂ.ಕುರುಬಗಟ್ಟಿ ಹಾಗೂ ಸಿಬ್ಬಂದಿಯವರುಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.