ಎಸಿಬಿ ಬಲೆಗೆ ಆಳಂದ ಬಿಇಒ ಕಚೇರಿ ಗುಮಾಸ್ತ

ಕಲಬುರಗಿ,ಜೂ.3: ಬಾಕಿ ಉಳಿದಿರುವ ವೇತನ ಮತ್ತು ನಿವೃತ್ತಿ ವೇತನ ಸೆಟಲ್‍ಮೆಂಟ್ ಮಾಡಲು ಲಂಚದ ಹಣ ಬೇಡಿಕೆಯಿಟ್ಟಿದ್ದ ಜಿಲ್ಲೆಯ ಆಳಂದ ತಾಲೂಕು ಕ್ಷೇತ್ರ ಶಿಕ್ಷಣ ಅýಕಾರಿ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಲಂಚದ ಸಮೇತ ಎಸಿಬಿ ಬಲೆಗೆ ಗುರುವಾರ ಸಂಜೆ ಸಿಕ್ಕು ಬಿದ್ದಿದ್ದಾರೆ.
ಹುಸೇನ್‍ಭಾಷಾ (38) ಎಂಬುವರೇ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದವರು. ಬಿಇಒ ಕಚೇರಿಯಲ್ಲಿ ಗುಮಾಸ್ತರಾಗಿದ್ದು, ಜಯರಾಜ್ ಎಂಬುವರ ಬಾಕಿ ಉಳಿದ ಐದು ತಿಂಗಳ ವೇತನ ಬಿಡುಗಡೆ ಮಾಡುವ ದಾಖಲೆಗಳನ್ನು ಮಾಡಲು 20 ಸಾ.ರೂ. ಬೇಡಿಕೆಯಿಟ್ಟಿದ್ದ. ಅದರಂತೆ ಅವರ ಪುತ್ರ ದತ್ತುಕುಮಾರ ಅವರು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಹೊಟೇಲ್‍ನಲ್ಲಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಲಾಗಿದೆ.
ಎಸ್ಪಿ ಮಹೇಶ ಮೇಘಣ್ಣನವರ ಮಾರ್ಗದರ್ಶನದಲ್ಲಿ ಡಿಎಸ್ಪಿ ವಿರೇಶ ಕರಡಿಗುಡ್ಡ ಮತ್ತು ಸಿಬ್ಬಂದಿ ಕೂಡಿಕೊಂಡು ದಾಳಿ ನಡೆಸಿದ್ದಾರೆ. ಲಂಚ ಸ್ವೀಕರಿಸಿದ್ದ ಹುಸೇನ್‍ಭಾಷಾನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನ ಜತೆಗಿದ್ದ ಇನ್ನೊಬ್ಬ ನೌಕರ ಅಪೆÇ್ರೀಜ್ ಪರಾರಿಯಾಗಿದ್ದಾನೆ. ಈ ಕುರಿತು ಕಲಬುರಗಿಯ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.