ಎಸಿಬಿ ದಾಳಿ ಪ್ರಕರಣ: ಜೆಇ ಶಾಂತಗೌಡ ಜಾಮೀನು ಅರ್ಜಿ ತಿರಸ್ಕಾರ

ಕಲಬುರಗಿ:ಡಿ.1: ಡ್ರೈನೇಜ್​ ಪೈಪ್​​ನಲ್ಲಿ ಹಣ ಇಟ್ಟಿದ್ದ ಕಲಬುರಗಿ ಪಿಡಬ್ಲ್ಯೂಡಿ ಜೆಇ ಶಾಂತಗೌಡ ಬಿರಾದಾರ್​ಗೆ ಮತ್ತೆ ಜೈಲೇ ಗತಿಯಾಗಿದೆ.
ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಾಂತಗೌಡ ಜಾಮೀನು ಅರ್ಜಿಯನ್ನು ಕಲಬುರಗಿ ‌ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿಗಳು ತಿರಸ್ಕರಿಸಿದ್ದಾರೆ.
ನವೆಂಬರ್​​ 24ರಂದು ಎಸಿಬಿ ದಾಳಿ ವೇಳೆ 55 ಲಕ್ಷ ರೂ. ನಗದು ಹಣ ಸೇರಿದಂತೆ ಒಟ್ಟು ನಾಲ್ಕೂವರೆ ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾದ ಹಿನ್ನೆಲೆಯಲ್ಲಿ ಶಾಂತಗೌಡ ಬಿರಾದಾರ ಅವರನ್ನು ಎಸಿಬಿ ವಶಕ್ಕೆ ಪಡೆದಿತ್ತು.
ಆದರೆ, ವಿಚಾರಣೆ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳಿಗೆ ಸೂಕ್ತ ಸಹಕಾರ ನೀಡದ ಕಾರಣ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮನೆಯ ಪೈಪ್‌ನಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳು, ಪ್ಲಂಬರ್ ಮೂಲಕ ಪೈಪ್‌ ಕತ್ತರಿಸಿ ಅದರಲ್ಲಿದ್ದ ಸುಮಾರು 13 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದರು. ಇದೀಗ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಶಾಂತಗೌಡ ಬಿರಾದಾರ್‌ಗೆ ಜೈಲೂಟವೇ ಫಿಕ್ಸ್ ಆಗಿದೆ.