ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಳ್ಳಕ್ಕೆ ಮುಕ್ತಿ : ಗ್ರಾಮಸ್ಥರ ಅಭಿನಂದನೆ

ದಾವಣಗೆರೆ, ಜೂ.16- ದಾವಣಗೆರೆ ತಾಲ್ಲೂಕು, ಆನಗೋಡು ಹೋಬಳಿ, ಹೊನ್ನೂರು ಗ್ರಾಮ ಪಂಚಾಯ್ತಿಗೆ ಒಳಪಡುವ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರ ರಾಷ್ಟಿçÃಯ ಹೆz್ದÁರಿ 48ರ ಹತ್ತಿರ ದೊಡ್ಡ ಹಳ್ಳವು ಹೊನ್ನೂರು ಕೆರೆಗೆ ಹೋಗುವ ಹಳ್ಳವು 2021-22ನೇ ಸಾಲಿನಲ್ಲಿ ಧಾರಾಕಾರ ಮಳೆಯಾಗಿ ಕೆರೆ ತುಂಬಿ ಹಿಡುವಳಿ ಜಮೀನುಗಳಿಗೆ ನೀರು ನಿಂತು, ಅಡಿಕೆ ಬೆಳೆ ಮತ್ತು ಇತರೆ ಬೆಳೆ ನಾಶವಾಗಿರುತ್ತದೆ. ಈ ಸಂಬAಧ ಜಿ¯್ಲÁಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆಯವರು ಮತ್ತು ತಹಶೀಲ್ದಾರರು ಹಾಗೂ ಸಣ್ಣ ನೀರಾವರಿ ಅಂತರ್ಜಲ ಇಲಾಖೆಯವರಿಗೂ ವಿಷಯದ ಬಗ್ಗೆ ಮನವಿ ಮಾಡಿಕೊಂಡಾಗ ಎಲ್ಲಾ ಅಧಿಕಾರಿಗಳು ಸೇರಿದಂತೆ ಟಿವಿ. ಮಾಧ್ಯಮದವರೂ ಕೂಡ ಸ್ಥಳ ಪರಿಶೀಲನೆ ಮಾಡಿರುತ್ತಾರೆ. ಹಿಂದಿನ ಮಾಯಕೊಂಡ ಶಾಸಕರಾದ ಪ್ರೊ. ಲಿಂಗಣ್ಣನವರ ಮಾರ್ಗದರ್ಶನದಲ್ಲಿ ಮತ್ತು ಸಣ್ಣ ನೀರಾವರಿ ಅಂತರ್ಜಲ ಇಲಾಖೆಯವರು ರಾಷ್ಟಿçÃಯ ಹೆz್ದÁರಿಯಿಂದ ಹೊನ್ನೂರು ಕೆರೆಯವರೆಗೂ ದೊಡ್ಡ ಹಳ್ಳವನ್ನು ಊಳು ತುಂಬಿರುವುದರಿAದ ಊಳು ತೆಗೆದು ಎರಡೂ ಕಡೆ ಕಲ್ಲಿನಲ್ಲಿ ರಿವಿಟ್‌ಮೆಂಟ್ ಅನ್ನು ಮಾಡಿಸುವುದಕ್ಕೆ ಅನುದಾನ ಮಂಜೂರು ಮಾಡಿಸಿರುತ್ತಾರೆ. ಈಗ ಒಂದು ತಿಂಗಳಿನಿAದ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮುಕ್ಕಾಲು ಭಾಗ ಕಾಮಗಾರಿ ಕೆಲಸ ನಡೆದಿದೆ. ಗೋಮಾಳ ಪಕ್ಕದಲ್ಲಿ ನೀರುಹರಿಯುವ ಹಳ್ಳವಿದ್ದು, ಇನ್ನು ಕಾಲು ಭಾಗದಷ್ಟು ಕೆಲಸವಿರುತ್ತದೆ. ಕೆಲವು ಕಿಡಿಗೇಡಿಗಳು ನಡೆಯುತ್ತಿರುವ ಕಾಮಗಾರಿಯನ್ನು ಸಹಿಸಲಾರದೆ ಗೋಮಾಳ ಸಾಗುವಳಿ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಕಾಮಗಾರಿಯನ್ನು ತಡೆಹಿಡಿಯುವಂತೆ ಪ್ರಚೋದನೆ ನೀಡಿರುತ್ತಾರೆ. ಹೆಣ್ಣು ಮಕ್ಕಳಿಂದ ಆಗುತ್ತಿರುವ ತೊಂದರೆಯನ್ನು ನಿರ್ಲಕ್ಷಿಸಿ, ಸಂಬAಧಪಟ್ಟ ಅಧಿಕಾರಿಗಳು ಕಾಮಗಾರಿಯು ಸುಸೂತ್ರವಾಗಿ ನಡೆಯುವಂತೆ ನಿಗಾ ವಹಿಸಬೇಕೆಂದು ಇದಕ್ಕೆ ಸಂಬAಧಪಟ್ಟ ಅಧಿಕಾರಿಗಳಾದ ತಹಶೀಲ್ದಾರ್‌ರವರಿಗೂ ಮನವಿ ಸಲ್ಲಿಸಲಾಗಿದೆ.ಈ ಕಾಮಗಾರಿಯು ಹೊನ್ನೂರು ಕೆರೆಯವರೆಗೆ ನಡೆದರೆ, ನೀರು ಸರಾಗವಾಗಿ ಕೆರೆಗೆ ಸೇರುತ್ತದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ಎ.ಇ. ಪ್ರವೀಣ್, ಸಹಾಯಕ ಇಂಜಿನಿಯರ್ ರುದ್ರಮುನಿಯವರು ಕಾಮಗಾರಿ ನಡೆಯುವ ಹತ್ತಿರ ಆಗಿಂದಾಗ್ಗೆ ಬಂದು ಕಾಮಗಾರಿಯ ಪರಿಶೀಲನೆಯಲ್ಲಿರುತ್ತಾರೆ. ಈ ಕಾಮಗಾರಿಯು ತಲಾತಲಾಂತರಗಳಿAದ ನಡೆದೇ ಇರಲಿಲ್ಲ. ಈ ದೊಡ್ಡ ಹಳ್ಳಕ್ಕೆ ರಾಷ್ಟಿçÃಯ ಹೆz್ದÁರಿ ಹತ್ತಿರವಿದ್ದು, ಹಳ್ಳದ ನೀರು ಹೊನ್ನೂರು ಕೆರೆಗೆ ಸೇರಲು ಮುಕ್ತಿ ಸಿಕ್ಕಂತಾಗಿದೆ. ಇದಕ್ಕೆ ಸಂಬAಧಪಟ್ಟ ಸಣ್ಣ ನೀರಾವರಿ ಅಂತರ್ಜಲ ಇಲಾಖೆಯವರಿಗೂ ಹಾಗೂ ಮಾಜಿ ಶಾಸಕ ಪ್ರೊ ಲಿಂಗಣ್ಣನವರನ್ನು ಗ್ರಾಮಸ್ಥರಾದ 22 ಕೆರೆ ಹೋರಾಟ ಸಮಿತಿ ಉಪಾಧ್ಯಕ್ಷ ಜಿ.ಎಸ್. ರೇವಣಸಿದ್ಧಪ್ಪ ದಳಪತಿ ಅಭಿನಂದನೆ ಸಲ್ಲಿಸಿದ್ದಾರೆ.