ಎಳ್ಳುಂಡೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು
ಬೆಳಿ ಎಳ್ಳು : ಅರ್ಧ ಬಟ್ಟಲು
ಕಪ್ಪು ಎಳ್ಳು : ಅರ್ಧ ಬಟ್ಟಲು
ಬೆಲ್ಲ : ಒಂದು ಬಟ್ಟಲು
ಏಲಕ್ಕಿ ಪುಡಿ – ಸ್ವಲ್ಪ
ಬಾದಾಮಿ ಪುಡಿ- ಎರಡು ಚಮಚ
ಗೋಡಂಬಿ ಪುಡಿ – ಎರಡು ಚಮಚ
ಮಾಡುವ ವಿಧಾನ…
ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ ಅದಕ್ಕೆ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಬೇಕು. ನಂತರ ಬಿಳಿ ಎಳ್ಳು ಹಾಗೂ ಕಪ್ಪು ಎಳ್ಳನ್ನು ಕೆಂಪಗೆ ಹುರಿದಿಟ್ಟುಕೊಳ್ಳಬೇಕು.
ಬೆಲ್ಲದ ಪಾಕವಾಗುತ್ತಿದ್ದಂತೆಯೇ ಅದಕ್ಕೆ ಹುರಿದಿಟ್ಟುಕೊಂಡ ಎಳ್ಳು, ಗೋಡಂಬಿ, ಬಾದಾಮಿ ಪುಡಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಬೆಲ್ಲ, ಎಳ್ಳು ಮಿಶ್ರಣ ತಣ್ಣಗಾಗಲು ಬಿಟ್ಟು, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡರೆ, ರುಚಿಕರವಾದ ಎಳ್ಳುಂಡೆ ಸವಿಯಲು ಸಿದ್ಧ.