ಎಳನೀರು ಕೀಳುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶ: ವ್ಯಕ್ತಿ ಮೃತ್ಯು

ಹಾಸನ, ಎ.೨೬- ತೆಂಗಿನ ಮರದಿಂದ ಎಳನೀರು ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ಆಲೂರು ತಾಲೂಕಿನ ಪಾಳ್ಯ ಹೋಬಳಿ ಬಾಳಿಕೊಪ್ಪಲು (ಕಾಮತಿ ಹತ್ತಿರ) ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜಣ್ಣ ಅವರ ಪುತ್ರ ಧರಣಿ (39) ಮೃತ ವ್ಯಕ್ತಿ. ಬಿಕ್ಕೋಡು ರಸ್ತೆಯಲ್ಲಿರುವ ಕಾಮತಿಕೂಡಿಗೆ ಗ್ರಾಮದಲ್ಲಿ ರಸಗೊಬ್ಬರದ ಅಂಗಡಿಯನ್ನು ತೆರೆದು ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದು, ಮನೆಯ ಪಕ್ಕದಲ್ಲಿದ್ದ ತೆಂಗಿನ ಮರದಲ್ಲಿ ಎಳನೀರು ಕೀಳಲು ಮುಂದಾದ ವೇಳೆ ಮರದ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.