ಎಳನೀರಿನ ಲಾಭ ಗೊತ್ತೆ

ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದ್ದು ತೂಕ ಇಳಿಕೆಯ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅಗತ್ಯವಿರುವ ಶಕ್ತಿಯನ್ನು ತಕ್ಷಣವೇ ಒದಗಿಸುವುದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ಸೂಕ್ಷ್ಮಜೀವಿಗಳಿಂದ ರಕ್ಷಣೆ ಒದಗಿಸುವುದು, ಮೂತ್ರದ ಪ್ರಮಾಣ ವರ್ಧಿಸಿ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ನಿತ್ಯವೂ ಬೆಳಗ್ಗಿನ ಪ್ರಥಮ ಆಹಾರವಾಗಿ ಒಂದು ಭರ್ತಿ ಎಳನೀರನ್ನು ಕುಡಿದರೆ ದಿನದ ಅಗತ್ಯದ ಎಲೆಕ್ಟ್ರೋಲೈಟುಗಳು ಲಭಿಸುತ್ತವೆ. ಎಳನೀರು ಥೈರಾಯ್ಡ್ ಗ್ರಂಥಿಯ ಸ್ರವಿಕೆಗೆ ಪ್ರಚೋದನೆ ಒದಗಿಸುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿದೆ ಅವಶ್ಯಕ ಎಲೆಕ್ಟ್ರೋಲೈಟುಗಳ ಹೊರತಾಗಿ ಕಾಲ್ಸಿಯಂ, ಮೆಗ್ನೇಶಿಯಂ, ಗಂಧಕ, ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶಗಳು ಪ್ರಮುಖವಾಗಿದ್ದು ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತವೆ. ತ್ವಚೆಯ ಆರೋಗ್ಯ ಉತ್ತಮವಾಗಿರಲು ದೇಹದಲ್ಲಿ ಸಾಕಷ್ಟು ಪ್ರಮಾಣದ ಆರ್ದ್ರತೆ ಇರಬೇಕು. ಎಳನೀರನ್ನು ಕುಡಿಯುವ ಹೊರತಾಗಿ ಎಳನೀರನ್ನು ತ್ಬೆಚೆಗೆ ಹಚ್ಚಿಕೊಳ್ಳುವ ಮೂಲಕವೂ ಅಗತ್ಯವಿರುವ ಪೋಷಣೆಯನ್ನು ಒದಗಿಸಬಹುದು. ಪರಿಣಾಮವಾಗಿ ಕ್ಷಿಪ್ರ ಸಮಯದಲ್ಲಿಯೇ ತ್ವಚೆ ಹೊಳೆಯಲಾರಂಭಿಸುತ್ತದೆ. ಎಳನೀರು ನೈಸರ್ಗಿಕ ಹಾಗೂ ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ಈ ಗುಣ ಮೊಡವೆಗಳನ್ನು ದೂರವಿಡುತ್ತದೆ. ಎಳನೀರಿನಲ್ಲಿರುವ ಸೈಟೋಕಿನಿನ್ ಎಂಬ ಪೋಷಕಾಂಶಕ್ಕೆ ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣವಿದ್ದು ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ತಡವಾಗಿಸಿ ವೃದ್ದಾಪ್ಯವನ್ನು ಮುಂದೂಡುತ್ತದೆ. ಅಲ್ಲದೇ ಎಕ್ಸಿಮಾ ಎಂಬ ಚರ್ಮರೋಗಕ್ಕೆ ಅತ್ಯುತ್ತಮ ಔಷಧಿಯೂ ಹೌದು. ಬಾಯಾರಿಕೆಗೆ ಎಳನೀರಿಗಿಂತ ಉತ್ತಮವಾದ ಜಲ ಈ ಜಗತ್ತಿನಲ್ಲಿಲ್ಲ. ವಿಶೇಷವಾಗಿ ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದಣಿದ ದೇಹಕ್ಕೆ ಶಕ್ತಿಯನ್ನು ಒದಗಿಸುವ ಜೊತೆಗೇ ಬೆವರು, ಅತಿಸಾರ, ವಾಂತಿ ಮೊದಲಾದ ಕಾರಣಗಳಿಂದ ದೇಹದಿಂದ ನಷ್ಟವಾಗಿದ್ದ ನೀರಿನಂಶವನ್ನು ಮರುತುಂಬಿಸಿ ಕೊಡುತ್ತದೆ. ಎಳನೀರಿನಲ್ಲಿಯೂ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದ್ದು ಇದರ ಜೊತೆಗೇ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ. ವಿಶೇಷವಾಗಿ ಉಪ್ಪಿನಲ್ಲಿರುವ ಸೋಡಿಯಂ ಅಂಶದಿಂದ ಎದುರಾಗಿದ್ದ ಪರಿಣಾಮಗಳಿಗೆ ವಿರುದ್ದ ಪರಿಣಾಮವನ್ನು ಪೊಟ್ಯಶಿಯಂ ಒದಗಿಸುವ ಮೂಲಕ ಅಧಿಕ ರಕ್ತದೊತ್ತಡವಾಗದಂತೆ ತಡೆಯುತ್ತದೆ. ಎಳನೀರಿನ ಅತ್ಯುತ್ತಮ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ. ಹೃದಯಕ್ಕೊಂದು ಟಾನಿಕ್ ಎಳನೀರಿನಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಹಾಗಾಗಿ, ಹೃದಯದ ಮಟ್ಟಿಗೆ ಎಳನೀರು ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ ಕೆಟ್ಟ ಎಲ್ ಡಿ ಎಲ್ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಹೆಚ್ ಡಿ. ಎಲ್ ಹೆಚ್ಚಿಸುವ ಮೂಲಕ ಹೃದಯದ ಮೇಲಿನ ಹೊರೆಯನ್ನು ತಗ್ಗಿಸುತ್ತದೆ ಹಾಗೂ ತನ್ಮೂಲಕ ಹೃದಯಕ್ಕೆ ಎದುರಾಗುವ ತೊಂದರೆಗಳಿಂದ ಕಾಪಾಡುತ್ತದೆ. ಮದ್ಯದ ಪ್ರಭಾವದಿಂದ ಹೊರಬರಲು ನೆರವಾಗುತ್ತದೆ ಮದ್ಯದ ಸೇವನೆಯ ಬಳಿಕ ಎದುರಾಗುವ ತಲೆತಿರುಗುವಿಕೆಗೆ ದೇಹದಲ್ಲಿ ಎದುರಾಗಿರುವ ನಿರ್ಜಲೀಕರಣ ಒಂದು ಕಾರಣವಾಗಿದ್ದು ವಿಶೇಷವಾಗಿ ರಾತ್ರಿ ಮದ್ಯಪಾನ ಮಾಡಿದ ಮರುದಿನ ಬೆಳಿಗ್ಗೆ ಎದುರಾಗುವ ತಲೆ ತಿರುಗುವಿಕೆ ತೀವ್ರಗೊಳ್ಳಲು ಕಾರಣವಾಗುತ್ತದೆ. ಇದನ್ನು ಸರಿಪಡಿಸಲು ಎಳನೀರಿನ ಸೇವನೆ ಅತ್ಯುತ್ತಮವಾಗಿದ್ದು ಇದರಲ್ಲಿರುವ ಎಲೆಕ್ಟ್ರೋಲೈಟುಗಳು ಶೀಘ್ರವೇ ಈ ಕೊರತೆಯನ್ನು ನೀಗಿಸಿ ಸಹಜಸ್ಥಿತಿಗೆ ಬರಲು ನೆರವಾಗುತ್ತದೆ. ತೂಕ ಇಳಿಯುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಎಳನೀರು ಅದ್ಭುತವಾದ ಆಹಾರವಾಗಿದೆ. ಇದರಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇದು ಎಳನೀರನ್ನು ನಮ್ಮ ಜಠರ ಅತಿ ಸುಲಭವಾಗಿ ಮತ್ತು ಪರಿಪೂರ್ಣವಾಗಿ ಜೀರ್ಣಿಸಿಕೊಳ್ಳುತ್ತದೆ. ಅಲ್ಲದೇ ಎಳನೀರಿನಲ್ಲಿ ಜೀರ್ಣರಸಗಳಿಗೆ ಪೂರಕವಾದ ಕಿಣ್ವಗಳಿದ್ದು ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಲಭವಾಗಿಸುತ್ತದೆ. ತನ್ಮೂಲಕ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ ಹಾಗೂ ತೂಕ ಇಳಿಕೆಯ ಉದ್ದೇಶ ಶೀಘ್ರವಾಗಿ ನೆರವೇರುತ್ತದೆ