ಎಳನೀರಿನ ದರ ಕುಸಿತ

ರಾಯಚೂರ,ಜ.೨೧- ಮಾರುಕಟ್ಟೆಯಲ್ಲಿ ಎಳೆ ನೀರಿನ ದರ ದಿಢೀರನೆ ಕುಸಿತ ಕಂಡಿದೆ. ಕೇವಲ ೨೫ ಮತ್ತು ೩೦ರೂ. ಗಳ ಬೋರ್ಡ್ ಗಳನ್ನೂ ನೇತು ಹಾಕಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಗೆ ಎಳನೀರು ಹೊರಜಿಲ್ಲೆಗಳಿಂದ ವಾರದಲ್ಲಿ ಎರಡು ಲಾರಿಗಳಷ್ಟು ಮಾತ್ರ ಬರುತ್ತಿವೆ. ಮುಂದಿನ ತಿಂಗಳಿನಿಂದ ಬೇಸಿಗೆಕಾಲ ಆರಂಭವಾಗಲಿದ್ದು ಇದರಿಂದ ಎಳೆನೀರಿಗೆ ಬೇಡಿಕೆ ಹೆಚ್ಚಳವಾಗುತ್ತದೆ ಎಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಎಳೆ ನೀರಿನ ದರ ದಿಡೀರನೆ ಇಳಿಕೆ ಕಂಡಿದ್ದು ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸುತ್ತಿದೆ.
ಬೇಡಿಕೆ ಹೆಚ್ಚಾದಂತೆ ಎಳನೀರಿನ ದರವು ಏರಿಕೆಯಾಗುತ್ತದೆ. ಕಳೆದ ವರ್ಷ ಬೇಸಿಗೆಯಲ್ಲಿ ಒಂದು ಎಳೆ ನೀರಿನ ದರ ಗರಿಷ್ಠ ೫೦ ಕ್ಕೆ ಮಾರಾಟವಾಗಿದೆ. ಈಗ ಅರ್ಧದಷ್ಟು ಕುಸಿತ ಕಂಡಿದೆ.
ಎಳೆನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ. ವಾರದಲ್ಲಿ ಕನಿಷ್ಠ ಮೂರು ದಿನ ಎಳನೀರು ಕುದಿದರೆ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ದುಬಾರಿ ಮದ್ಯ ಸೇವನೆಗಿಂತ ಎಳನೀರು ಸೇವಿಸುವುದು ಉತ್ತಮ. ಎಳೆನೀರಿನ ದರ ಸದ್ಯಕ್ಕೆ ೨೫ ರಿಂದ ೩೦ರೂ. ದರದಲ್ಲಿ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಳೆನೀರಿನ ದರ ಹೆಚ್ಚಾಗಲಿದಿಯೋ ಎಂದು ಕಾದು ನೋಡಬೇಕಿದೆ.