ಎಲ್.ವಿ.ಡಿ ಮಹಾವಿದ್ಯಾಲಯದಲ್ಲಿ ಎರಡು ದಿನದ ವಿದ್ಯಾರ್ಥಿ ಪುನ:ಶ್ಚೇತನ,ಎಫ್.ಡಿ.ಪಿ ಕಾರ್ಯಕ್ರಮ

ರಾಯಚೂರು,ಜು.೨೭- ಪ್ರಸ್ತುತ ದಿನಗಳಲ್ಲಿ ಏಕಮುಖ ಕಲಿಕಾ ಪದ್ಧತಿಯಿಂದ ಹೊರಬರಲು ವಿದ್ಯಾರ್ಥಿಗಳಲ್ಲಿ ಕಲಿಕೆಯ ಸ್ಪೂರ್ತಿ, ಆಸಕ್ತಿ ಹೆಚ್ಚಿಸಲು ಇಂತಹ ವಿದ್ಯಾರ್ಥಿ ಪುನಶ್ಚೇತನ ಕಾರ್ಯಕ್ರಮಗಳು ಅತ್ಯವಶ್ಯಕ ಮಾತ್ರವಲ್ಲ ಉಪನ್ಯಾಸಕರಿಗೂ ವಿಭಿನ್ನ ಚಟುವಟಿಕೆಗಳ ತರಬೇತಿ ಅವಶ್ಯಕವಾದ ಹಿನ್ನೆಲೆಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ನಂದಾಪೂರ ಶ್ರೀನಿವಾಸರಾವರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ನಂತರ ಕಾರ್ಯಕ್ರಮದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಂತೋಷ ಅವಣ್ಣವರ್ ಬೆಂಗಳೂರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಚಟುವಟಿಕೆಗಳ ಮೂಲಕ ಅರ್ಥಪೂರ್ಣ ಕಲಿಕೆಯ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ನಿರಂತರವಾಗಿ ಪುನಶ್ಚೇತನ ಚಟುವಟಿಕೆಗಳೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ಅಧ್ಯಕ್ಷತೆ ವಹಿಸಿದ ಎಲ್.ವಿ.ಡಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಶರಣಗೌಡ ಬಿ.ಹೆಚ್‌ರವರು ನಮ್ಮ ಸಂಸ್ಥೆ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡುತ್ತಿರುತ್ತದೆ ಹಾಗಾಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮವು ಸಂಗೀತ ವಿಭಾಗದ ಕು.ಸಹನಾ ಸಂಗಡಿಗರ ವಿದ್ಯಾರ್ಥಿಗಳೊಂದಿಗೆ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಡಾ.ಆಂಜನೇಯ ಓಬಳೇಶ ಉಪ-ಪ್ರಾಚಾಂiiರು ವೇದಿಕೆಗೆ ಪರಿಚಯಿಸಿದರು. ರೂಪಾ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಎನ್.ಎಸ್.ಜಯತೀರ್ಥ ಐ.ಕ್ಯು.ಎ.ಸಿ ಸಂಚಾಲಕರು ಎಲ್.ವಿ.ಡಿ ಮಹಾವಿದ್ಯಾಲಯ ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.