ಎಲ್.ವಿ.ಡಿ. ಮಹಾವಿದ್ಯಾಲಯಕ್ಕೆ ೨, ೬ನೇ ರ್‍ಯಾಂಕ್

ರಾಯಚೂರು,ಜೂ.೨೦-
ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗುಲರ್ಗಾ ವಿಶ್ವವಿದ್ಯಾಲಯದ ೨೦೨೧-೨೨ನೇ ಸಾಲಿನ ಶೈಕ್ಷಣಿಕ ವರ್ಷದ ಬಿ.ಎಸ್ಸಿ ಪದವಿ ಪರೀಕ್ಷೆಗಳಲ್ಲಿ ೨ನೇ ಮತ್ತು ೬ನೇ ರ್‍ಯಾಂಕ್ ಪಡೆಯುವದರ ಮೂಲಕ ಮಹಾವಿದ್ಯಾಲಯದ ರ್‍ಯಾಂಕ್‌ಗಳಿಕೆಯ ಸಂಪ್ರದಾಯವನ್ನು ಮುಂದಿವರಿಸಿದ್ದಾರೆ.
ಅಶ್ವಿನಿ ತಂದೆ ರಾಮನಗೌಡ ಇವರು ಬಿ.ಎಸ್ಸಿ ವಿಭಾಗದಲ್ಲಿ ೨ನೇ ರ್‍ಯಾಂಕ್ ಹಾಗೂ ಪಿ. ಮೌನಿಕ ತಂದೆ ಪಿ. ಸಿದ್ದಯ್ಯ ಇವರು ಬಿ.ಎಸ್ಸಿ ವಿಭಾಗದಲ್ಲಿ ೬ನೇ ರ್‍ಯಾಂಕ್ ಪಡೆದು ಕೀರ್ತಿ ಎಲ್.ವಿ.ಡಿ. ಕಾಲೇಜಗೆ ಸಲ್ಲುತ್ತದೆ.
ತಮ್ಮ ಅದ್ಭುತ ಸಾಧನೆಯಿಂದ ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಮತ್ತು ಅವರ ಯಶಸ್ಸಿಗೆ ಸಹಕರಿಸಿದ ಪಾಲಕರಿಗೆ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿವರಿಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸಮಲ್ ಸುಖಾಣಿ, ಪ್ರಧಾನ ಕಾರ್ಯದರ್ಶಿಗಳಾದ ನಂದಾಪೂರ ಶ್ರೀನಿವಾಸ್‌ರಾವ್, ಎಲ್ಲಾ ಸದಸ್ಯರು ಮತ್ತು ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ರ್ಶರೀ ಪವನಕುಮಾರ ಸುಖಾಣಿ, ಕಾರ್ಯದರ್ಶಿಗಳಾದ ಧವಲ್ ಜೋಬನಪುತ್ರ, ಪ್ರಾಚಾರ್ಯರಾದ ಡಾ. ವೆಂಕಟೇಶ ಬಿ. ದೇವರು, ಉಪ-ಪ್ರಾಚಾರ್ಯರು, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.