ಎಲ್.ವಿ.ಡಿ ಕಾಲೇಜು: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ರಾಯಚೂರು.ಜ.೧೩-ಸನಾತನ ಹಿಂದು ಧರ್ಮದ ವೇದಾಂತ ಕೇಸರಿ ಸ್ವಾಮಿ ವಿವೇಕಾನಂದರ ೧೫೮ನೆ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ೨೦೨೧ರ ಆಚರಣೆಯನ್ನು ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್.ವಿ.ಡಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ ರಾಯಚೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮ ರಾಯಚೂರು ಇವರುಗಳ ಸಹಯೋಗದೊಂದಿಗೆ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಎಂ.ಸುಚೇತಾ ನೆಲವಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಯಚೂರು ಇವರು ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವೇಕಾನಂದರ ಆಲೋಚನೆಗಳು ಪ್ರಸ್ತುತ ಯುವ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ, ಛಲ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ, ಗುರಿ ಮುಟ್ಟುವವರೆಗೆ ಪ್ರಯತ್ನ ನಿರಂತರವಾಗಿರಬೇಕೆಂದು ಉದಾರಣೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಉಪನ್ಯಾಸಕರಾಗಿ ಉಪಸ್ಥಿತರಿದ್ದ ಶ್ರೀ ಜೆ.ಸಿ .ರಾಜಶೇಖರ ಟ್ರಸ್ಟಿಗಳು ರಾಮಕೃಷ್ಣ ವಿವೇಕಾನಂದ ಆಶ್ರಮ ಬಳ್ಳಾರಿ ಇವರು ಮಾತನಾಡಿ ಯುವ ಶಕ್ತಿ ಒಂದಾದರೆ ನವ ಭಾರತ ನಿರ್ಮಾಣದ ಕನಸು ನನಸಾಗಲು ಸಾಧ್ಯ. ವಿವೇಕಾನಂದರ ಜೀವನದ ಅಭೂತಪೂರ್ವ ಘಟನೆಗಳನ್ನು ನೈಜವಾಗಿ ತಿಳಿಸಿ ಯುವ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಸಂಚಲನವನ್ನುಂಟು ಮಾಡಿದರು. ನಿನ್ನೆಯ ಮತ್ತು ನಾಳೆಗಳ ನಡುವಿನ, ಇಂದಿನ ವಾಸ್ತವದ ಜೊತೆಗೆ ಮುನ್ನುಗುವಂತೆ ಕರೆ ನೀಡಿದರು.
ಕೊನೆಯದಾಗಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪ-ಪ್ರಾಚಾರ್ಯರಾದ ಡಾ.ಎಂ.ವಿರೇಶಪ್ಪ ಇವರು ಮಾತನಾಡಿ ಪ್ರತಿನಿತ್ಯವು ವಿವೇಕಾನಂದರ ತತ್ವಗಳನ್ನು ತಿಳಿದು ಅಳವಡಿಸಿಕೊಳ್ಳುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಅರ್ಥಪೂರ್ಣ ಕಾರ್ಯಕ್ರಮಗಳು ವಿವೇಕಾನಂದರ ವಿಚಾರಗಳ ಮೇಲೆ ನಡೆಯಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಗ್ರೀನ್ ರಾಯಚೂರು ಸಂಸ್ಥೆಯ ರಾಜೇಂದ್ರಕುಮಾರ ಇವರು ಆಸಕ್ತಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ಹಾಗೂ ವಿವೇಕ ಕೈ-ಬ್ಯಾಂಡ್‌ಗಳನ್ನು ವಿತರಿಸಿ ವಿವೇಕಾನಂದರ ಸಂದೇಶ ಸಾರುವ ಬಿತ್ತಿ ಪತ್ರಗಳನ್ನು ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮವು ಸಂಗೀತ ವಿಭಾಗದ ಸಿ.ಎನ್ ರಾಘವೇಂದ್ರ ಅವರ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಡಿತು. ಕಾಲೇಜಿನ ಎನ್.ಎಸ್.ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಆಂಜನೇಯ ಒಬಳೇಶ ಅತಿಥಿಗಳನ್ನು ಸ್ವಾಗತಿಸಿದರು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಸ್.ಅಮರೆಗೌಡ ಅತಿಥಿಗಳ ಪರಿಚಯ ಮಾಡಿದರು, ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾದ ಚೆನ್ನಾರೆಡ್ಡಿ ವಂದಿಸಿದರು. ಎನ್.ಸಿ.ಸಿ ವಿದ್ಯಾರ್ಥಿನಿಯಾದ ಕುಮಾರಿ ಪ್ರಮೀತಾ ವಿವೇಕಾನಂದರ ಕುರಿತು ತಮ್ಮ ಅನಿಸಿಕೆಳನ್ನು ವ್ಯಕ್ತಪಡಿಸಿದರು. ರೇಖಾ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕದ ಡಾ.ಮಲ್ಕಣ್ಣ, ರೋವರ್ ಘಟಕದ ಅಧಿಕಾರಿಯಾದ ಡಾ.ಪ್ರಶಾಂತಕುಮಾರ, ಎನ್.ಸಿ.ಸಿ ಅಧಿಕಾರಿಯಾದ ಡಾ.ಶಿವರಾಜ, ರೇಂಜರ್ ಘಟಕದ ಅಧಿಕಾರಿಯಾದ ಡಾ.ವಿಜಯಲಕ್ಷ್ಮೀ ಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಎಸ್.ಆರ್.ಪಿ.ಎಸ್ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿಗಳು ಹಾಗೂ ಎಲ್.ವಿ.ಡಿ ಕಾಲೇಜಿನ ಎಲ್ಲಾ ವಿದ್ಯಾಥಿಗಳು ಭಾಗವಹಿಸಿದ್ದರು.

ಸಹಿ/-

ಪ್ರಾಚಾರ್ಯರು