ಎಲ್.ಬಿ.ಎಸ್ ನಗರ: ನಾಗರೀಕರಿಗೆ ಒಳ ಚರಂಡಿ ತ್ಯಾಜ್ಯ ಮಿಶ್ರಿತ ಕುಡಿಯುವ ನೀರು ಪೂರೈಕೆ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಪರಿಹಾರಕ್ಕೆ ಮನವಿ-ಜನಪ್ರತಿನಿಧಿಗಳು ಇದ್ದಾರೆಯೇ?
ರಾಯಚೂರು ನ ೧೫:-ನಗರದ ನಿವಾಸಿಗಳಿಗೆ ಶುದ್ಧ ಮತ್ತು ನಿರಂತರ ನೀರು ಪೂರೈಕೆ ಉದ್ದೇಶದ ೨೪x೭ ಕುಡಿಯುವ ನೀರು ೧೩೫ ಕೋಟಿ ಯೋಜನೆ ಅನುಷ್ಟಾನದ ಹೆಸರಲ್ಲಿ ಗುತ್ತೇದಾರರು,ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ಕೋಟ್ಯಾಂತರ ರೂ. ಲೂಟಿ ಮಾಡಿ ಮಸ್ತ ಮಜಾ ಮಾಡಿದರೆ, ಜನ ಮಾತ್ರ ಕಲುಷಿತ ನೀರು ಕಡಿಯುವ ಅಮಾನವೀಯ ಸ್ಥಿತಿಯಲ್ಲಿ ಜೀವನ ನಡೆಸಬೇಕಾಗಿದೆ.
ಕಲುಷಿತ ನೀರು ಕುಡಿದು ಇದೇ ವರ್ಷ ಏಳು ಜನ ನಿಧರಾದ ಘಟನೆ ನಡೆದ ನಂತರವೂ ಇತ್ತ ನಗರಸಭೆ ಮತ್ತು ಅತ್ತ ಜನಪ್ರತನಿಧಿಗಳು ಶುದ್ಧ ಕುಡಿಯುವ ನೀರು ಪೂರೈಸುವ ಬಗ್ಗೆ ಕಾಳಜಿ ತೋರುತ್ತಿಲ್ಲ. ನಗರದ ಎಲ್.ಬಿ.ಎಸ್ ನಗರ ವ್ಯಾಪ್ತಿಯ ವಾರ್ಡ್ ೨೮ ಮತ್ತು ೨೯ ರಲ್ಲಿ ನಗರದ ಒಳ ಚರಂಡಿ ತ್ಯಾಜ್ಯ ಕುಡಿಯುವ ನೀರಿನೊಂದಿಗೆ ಪೂರೈಕೆಯಾಗುತ್ತಿದ್ದರೂ, ಇಲ್ಲಿ ಆಡಳಿತ ವ್ಯವಸ್ಥೆ ಜನರ ದೂರಿಗೆ ಕ್ಯಾರೆ ಎನ್ನದೆ ದಪ್ಪ ಚರ್ಚದಿಂದ ಜನ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುವಂತಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಬಡಾವಣೆಗೆ ಒಳಚರಂಡಿ ನೀರು ಪೂರೈಕೆಯಾಗುತ್ತಿದೆ. ಹೈದ್ರಾಬಾದ ರಸ್ತೆಯಲ್ಲಿರು ಕ್ರೌನ್ ಬೇಕರಿ ಮುಂಭಾಗದಿಂದ ಎಲ್.ಬಿ.ಎಸ್ ನಗರಕ್ಕೆ ನೀರು ಪೂರೈಸಲಾಗುತ್ತದೆ. ನಗರದಲ್ಲಿ ಮನೆ ಮನೆಗೆ ಪೈಪ್ ಲೈನ್ ಮೂಲಕ ಗ್ಯಾಸ್ ಪೂರೈಸುವ ಖಾಸಗಿ ಕಂಪನಿ ಕಳೆದ ವಾರ ಗ್ಯಾಸ್ ಪೈಪ್ ಲೈನ್ ಹಾಕುವ ಸಂದರ್ಭದಲ್ಲಿ ಕುಡಿಯುವ ನೀರಿನ ಮತ್ತು ಒಳ ಚರಂಡಿ ಪೈಪ್ ಒಡೆದ ಪರಿಣಾಮ ಎರಡು ವಾರ್ಡ್‌ಗಳ ಜನರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ಸ್ಥಳಿಯ ಜನರು ನೇರವಾಗಿ ನಗರಸಭೆ ಮತ್ತು ಸ್ಥಳೀಯ ಜನ ಪ್ರತಿನಿಧಿಗಳಿಗೆ ದೂರು ನೀಡಿದರು ಯಾವುದೆ ಉಪಯೋಗವಾಗಿಲ್ಲ ಎಂದು ಜನರ ಮಾಧ್ಯಕ್ಕೆ ದೂರು ನೀಡಿದರು.
ಕಲುಷಿತ ನೀರು ಕುಡಿದು ಜನರ ಅಸ್ವಸ್ಥಗೊಳ್ಳುತ್ತಿದ್ದಾರೆ. ಕೆಲವೆಡೆ ವಾಂತಿ ಭೇದಿ ಪ್ರಕರಣ ಕಂಡು ಬಂದಿವೆ. ಕಲುಷಿತ ನೀರಿನ ಸಮಸ್ಯೆ ಒಂದು ದಿನಕ್ಕೆ ಸೀಮಿತಗೊಳ್ಳ ಬಹುದೆಂದು ಸಹಿಸಿಕೊಂಡ ಜನರು, ಕಳೆದ ಮೂರು ದಿನಗಳಿಂದ ದುರ್ವಾಸನೆ ಮತ್ತು ಕೆಂಪು ಬಣ್ಣ ಮಿಶ್ರಿತ ಹಾಗೂ ನೀರಿನಲ್ಲಿ ಕೋಳಿ ಪುಚ್ಚ,ಇತರೆ ತ್ಯಾಜ್ಯ ಹರಿದು ಬರುತ್ತಿರುವುದರಿಂದ ಜನ ಭಯ ಭೀತರಾಗಿ ಕಲುಷಿತ ನೀರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ವಿನೂತ ಪ್ರತಿಭಟನೆಗಿಳಿದ್ದಾರೆ.
ಎರಡು ದಿನಕ್ಕೊಮ್ಮೆ ಪೂರೈಕೆಗೊಳ್ಳುವ ನೀರು ಕುಡಿಯುವುದಿರಲಿ, ಮನೆ ಸಾಮಾನು ಸರಂಜಾಮು ತೊಳೆಯುವುದಕ್ಕು ಯೊಗ್ಯವಾಗಿಲ್ಲ ಎಂದು ಜನ ಹೇಳುತ್ತಿದ್ದಾರೆ. ಪ್ರತಿನಿತ್ಯ ಈ ಬಗ್ಗೆ ನಗರಸಭೆ ಗಮನ ಸೆಳೆದರು ಯಾವುದೆ ಉಪಯೋಗವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸ್ಥಿತಿಯನ್ನು ಸಂಬಂಧ ಪಟ್ಟವರ ಗಮನಕ್ಕೆ ತರಲಾಗುತ್ತಿದೆ. ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹೆಸರಲ್ಲಿ ಇರುವ ವಾಟ್ಸಪ್ ಗುಂಪಿನಲ್ಲಿ ಕಲುಷಿತ ನೀರಿ ವಿಡಿಯೋ ಹಾಕಲಾಗಿದೆ ಎಂದು ಗೋಳು ತೋಡಿಕೊಂಡರು.
ನಗರಸಭೆ ಅಧಿಕಾರಿಗಳು, ಮತ್ತು ಸ್ಥಳೀಯ ಜನಪ್ರತಿನಿಧಿಗಳು ಒಮ್ಮೆ ಈ ಬಡಾವಣೆಗೆ ಭೇಟಿ ನೀಡಿ, ಪ್ರತಿನಿತ್ಯ ಜನರಿಗೆ ಪೂರೈಕೆಯಾಗುವ ಒಳ ಚರಂಡಿ ನೀರು ಸೇವಿಸಿದರೆ ಅಲ್ಲಿಯ ನಾಗರೀಕ ನೂವು ತಿಳಿಯುತ್ತದೆ. ಕಲುಷಿತ ಕುಡಿಯುವ ನೀರು ಎಲ್ಲಿ ಪೂರೈಕೆಯಾಗುತ್ತದೆ ಎನ್ನುವುದು ಸಂಶೋಧಿಸುವ ಶ್ರಮ ಇಲ್ಲದಂತೆ ಜನರೇ ಕಲುಷಿತ ನೀರಿನ ವಿಡಿಯೋ ಶಿವರಾಜ್ ಪಾಟೀಲ್ ಗುಂಪಿನಲ್ಲಿ ಹಾಕುವ ಮೂಲಕ ಅವರ ಸ್ಥಿತಿ ತೋಡಿಕೊಂಡ ಜನರನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಲು ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳವರೆ ಎನ್ನುವುದು ಕಾದು ನೋಡಬೇಕಾಗಿದೆ.