ಎಲ್.ಐ.ಸಿ ಮುಂಭಾಗದ ಐತಿಹಾಸಿಕ ಕಂದಕ ಅತಿಕ್ರಮ

ಪುರಾತತ್ವ ಇಲಾಖೆ ಮೌನ-ಕಾಮಗಾರಿ ತಡೆಗೆ ಪೌರಾಯುಕ್ತರ ಆದೇಶ
ರಾಯಚೂರು ನ ೧೦:- ನಗರದ ಏಳು ಶತಮಾನ ಪುರಾತನ ಕಂದಕವನ್ನು ಅತಿಕ್ರಮಿಸುತ್ತಿದ್ದರು ನಗರಸಭೆ ಮತ್ತು ಪ್ರಾಚ್ಯವಸ್ತು ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದರಿಂದ ಕೊಟ್ಯಾಂತರ ರೂ. ಬೆಲೆ ಬಾಳುವ ಜಮೀನು ಪ್ರಭಾವಿಗಳ ಪಾಲಾಗುತ್ತಿದೆ.
ನಗರದ ರಾಷ್ಟ್ರೀಯ ಹೆದ್ದಾರಿ ಎಲ್ ಐ.ಸಿ ಮುಂಭಾಗದಲ್ಲಿರುವ ಕಂದಕವನ್ನು ಒತ್ತುವರಿ ಮಾಡಿ ಸಿಮೆಂಟ್ ಕಾಂಕ್ರೀಟ್ ಹಾಕಿ ಕಟ್ಟಡ ನಿರ್ಮಾಣಕ್ಕೆ ಬೃಹತ್ ಅಡಿಪಾಯ ಹಾಕಲಾಗಿದೆ.ಪಾದಾಚಾರಿ ರಸ್ತೆಯ ಮೇಲೆ ಗಿಡಗಳು ಮಾರುವ ಪರದೆ ಹಿಂದೆ ಕಳುವಿನಿಂದ ಕಟ್ಟಡ ನಿರ್ಮಾಣ ಅಡಿಪಾಯ ಹಾಕಾಲಾಗಿದೆ. ಕಂದಕ ಸ್ಥಳದಲ್ಲಿ ಸಿಮೆಂಟ್ ಕಾಲಂ ಹಾಕಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ. ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಇಲ್ಲದೆ ಇಷ್ಟು ಬೃಹತ್ ಕಟ್ಟಡ ನಿರ್ಮಿಸುತ್ತಿದ್ದರು ಸಂಬಂಧ ಪಟ್ಟ ಅಧಿಕಾರಿಗಳ ಮೌನ ಏಕೆ?.
ನಿತ್ಯ ಸಾವಿರಾರು ಜನರು ಓಡಾಡುವ ಈ ರಸ್ತೆಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದರು ಅಧಿಕಾರಿಗಳು ಏಕೆ ನಿಲ್ಲಿಸಲಿಲ್ಲ ಎಂಬುವುದು ಜನರ ಪ್ರಶ್ನೆಯಾಗಿದೆ. ಪ್ರಾಚ್ಯವಸ್ತು ಇಲಾಖೆಗೆ ಈ ಆಸ್ತಿ ಸೇರಿದೆ. ಏಳು ಶತಮಾನದ ಪುರಾತ ಈ ಕಂದಕ ರಕ್ಷಿಸುವ ಜವಾಬ್ದಾರಿ ಹೊಂದಿದ ಪುರಾತತ್ವ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗನ ಹರಿಸದಿರುವುದು ವಿಚಿತ್ರವಾಗಿದೆ.
ಮಳೆಗಾಲದಲ್ಲಿ ಮಾವಿನ ಕೆರೆ ನೀರು ಸೇರಿದಂತೆ ನಗರದ ವಿವಿಧ ಬಡಾವಣೆ ಭಾಗದ ನೀರು ಹರಿದು ಹೋಗಲು ಈ ಕಂದಕ ಪ್ರಮುಖವಾಗಿದೆ.ಆದರೆ ಈ ಕಂದಕ ಇಂದು ಒತ್ತುವರಿಗೆ ಗುರಿಯಾಗಿದೆ.ಈಗಾಗಲೆ ಡಾ. ಬಿ. ಆರ್.ಅಂಬೇಡ್ಕರ್ ವೃತ್ತದಲ್ಲಿ ಒಂದು ಶೆಡ್ ಹಾಕಲಾಗಿದೆ. ಕಂದಕ ಒತ್ತುವರಿ ಕಾನೂನು ಭಾಹಿರವಾಗಿ ಕಟ್ಟಡ ನಿರ್ಮಿಸಿದರು ಅಧಿಕಾರಿಗಳ ಈ ಬಗ್ಗೆ ಕೇಳದಿದ್ದರೆ ಐತಿಹಾಸ ಕಂದಕ ಉಳಿಯಲು ಸಾಧ್ಯವೆ.
ಈ ಕುರಿತು ನಗರಸಭೆ ಆಯುಕ್ತರನ್ನು ವಿಚಾರಿಸಿದಾಗ ಕಟ್ಟಡ ನಿರ್ಮಾಣ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.ಕಟ್ಟಡ ನಿರ್ಮಾಣ ಕಾಮಗಾರಿಗೆ ಪರವಾನಿಗೆ ನೀಡಿಲ್ಲ. ಈ ಸ್ಥಳಕ್ಕೆ ಸಂಬಂಧಿಸಿ ದಾಖಲೆಗಳನ್ನು ನೀಡುವಂತೆ ಕೇಳಲಾಗಿದೆ. ಮುಂದಿನ ಆದೇಶದವರಿಗೆ ಕಟ್ಟಡ ನಿರ್ಮಿಸದಂತೆ ಸೂಚಿಸಲಾಗಿದೆ.