ಎಲ್ ಎಲ್ ಸಿ ಕಾಲುವೆಗೆ ನೀರು ಬಿಡುಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.16: ತುಂಗಭದ್ರ ಜಲಾಶಯದ ಬಲದಂಡೆಯ ಕೆಳಮಟ್ಟದ (ಎಲ್.ಎಲ್.ಸಿ) ಕಾಲುವೆಗೆ ನಿನ್ನೆ ನೀರು ಬಿಡಲಾಗಿದೆ.
ತುಂಗಭದ್ರ ಮಂಡಳಿಯ ಮುಖ್ಯ ಕಾರ್ಯದರ್ಶಿ ನಾಗಮೋಹನ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಶಶಿಕಾಂತ್ ರೆಡ್ಡಿ, ವಿಶ್ವನಾಥ್ ನೀರಾವರಿ ಅಧಿಕಾರಿಗಳು ಹಾಗೂ ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಶೋತ್ತಮ ಗೌಡ, ಆಂದ್ರ ಪ್ರದೇಶದ ರೈತ ಮುಖಂಡ ಸಮತಗೇರಿ ರಾಮರೆಡ್ಡಿ. ಟಿ.ರಂಜಾನ್‍ಸಾಬ್, ಬಂಡೆ ಗೌಡ, ವೀರನಗೌಡ, ತಳವಾರ ದುರ್ಗಣ್ಣ, ಗಂಗಾವತಿ ವೀರೇಶ್, ಮುಸ್ಟಗಟ್ಟೆ ಭೀಮನಗೌಡ, ಕಂಪ್ಲಿ ಸತ್ಯನಾರಾಯಣ, ಹೆಚ್.ವೀರಾಪುರ ಬಸವರಾಜ್, ಚನ್ನಪಟ್ಟಣ ಶೇಕ್ಷಾವಲಿ, ಆಧೋನಿ ಲಕ್ಷ್ಮಿಕಾಂತ್, ಒಳಗುಂದ ಗಾಳಿ ವೀರಭದ್ರಗೌಡ ಹಾಗೂ ಇತರೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.