ಎಲ್‍ಕೆಜಿ,ಯುಕೆಜಿ ವಿದ್ಯಾರ್ಥಿಗಳಿಗೆ ಸ್ವಾಗತ

ಕಲಬುರಗಿ:ನ.8:ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಇಂದು ಎಲ್.ಕೆ.ಜಿ. ಯು.ಕೆ.ಜಿ. ಮತ್ತು ನರ್ಸರಿ ಶಾಲೆ ಆರಂಭವಾಗಿದ್ದು ತಳಿರು ತೋರಣ, ಹೂವಿನ ಹಾರಗಳು ಹಾಗೂ ಬಲೂನ್‍ನಿಂದ ಶೃಂಗರಿಸಿ ಅತಿ ವಿಜೃಂಭಣೆಯಿಂದ ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಶರಣಬಸವೇಶ್ವರ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಮಕ್ಕಳಿಂದ ಹಾರವನ್ನು ಹಾಕಿಸಿ ಹಾಗೂ ದೀಪವನ್ನು ಬೆಳಗುವದರ ಜೊತೆಗೆ ಶಾಲೆಯನ್ನು ಆರಂಭಿಸಲಾಯಿತು. ಮೊದಲನೇಯ ದಿನವೆ 9ನೇ ಪೀಠಾಧೀಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಕೂಡ ಶಾಲೆಗೆ ಆಗಮಿಸಿದ್ದರು. ವಿದ್ಯಾರ್ಥಿಗಳ ಜೊತೆಗೆ ಹಿರಿಯ ಶಿಕ್ಷಕಿಯರಾದ ಶ್ರೀಮತಿ. ಶಾರಾದ ರಾಂಪೂರೆ ಮತ್ತು ಶ್ರೀಮತಿ. ನಂದಾ ಪಾಟೀಲ್ ಮತ್ತು ಶಾಲೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕಿಯ ವೃಂದದವರು ಉಪಸ್ಥಿತರಿದ್ದರು.