ಎಲ್‌ವಿಡಿ ಕಾಲೇಜು : ಕೋವಿಡ್ ಮಾರ್ಗಸೂಚಿ ಸಿದ್ಧತೆಯೊಂದಿಗೆ ಪ್ರಾರಂಭ

ರಾಯಚೂರು.ನ.೧೪- ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್.ವಿ.ಡಿ. ಪದವಿ ಮಹಾವಿದ್ಯಾಲಯ ಸರ್ಕಾರದ ಆದೇಶದಂತೆ ನ.೧೭ ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಕೋವಿಡ್ ಮಾರ್ಗಸೂಚಿಯನ್ವಯ ಪಾಲಿಸುತ್ತಾ ಕಾಲೇಜಿನ ಕಟ್ಟಡ ಹಾಗೂ ಎಲ್ಲಾ ತರಗತಿಗಳನ್ನು ಸ್ಯಾನಿಟೈಸ್ ಮಾಡಿಸಿ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಭೌತಿಕ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಪಾಲಕರ ಒಪ್ಪಿಗೆ ಪತ್ರ ಹಾಗೂ ಕೋವಿಡ್-೧೯ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ಕಾಲೇಜಿಗೆ ಒಪ್ಪಿಸಬೇಕೆಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.