ಎಲ್‌ಪಿಎಲ್ ಸೀಸನ್-೪ ಕ್ರಿಕೇಟ್ ಪಂದ್ಯಾವಳಿ ಉದ್ಘಾಟನೆ

ಕ್ರೀಡಾಂಗಣ ಶೀಘ್ರ ಲೋಕಾರ್ಪಣೆ : ಶಾಸಕ ಹೂಲಗೇರಿ
ಲಿಂಗಸುಗೂರು.ನ.೧೦- ತಾಲೂಕಿನ ಕ್ರೀಡಾಪಟುಗಳಿಗೆ ಅನುಕೂಲವಾಗಲು ಈಗಾಗಲೇ ನೆನೆಗುದಿಗೆ ಬಿದ್ದಿದ್ದ ಕ್ರೀಡಾಂಗಣ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರ ಕಾಮಗಾರಿಯನ್ನು ಪೂರ್ತಿಸಿ ಲೋಕಾರ್ಪಣೆ ಮಾಡಲಾಗುವುದೆಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಸ್ಥಳೀಯ ಸರಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಎಲ್‌ಪಿಎಲ್ ಸೀಸನ್-೪ (ಲಿಂಗಸುಗೂರು ಪ್ರೀಮಿಯರ್ ಲೀಗ್) ಕ್ರಿಕೇಟ್ ಟೂರ್ನಮೆಂಟ್‌ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಸಕ್ತಿ ಬೆಳೆಸಿಕೊಳ್ಳುವ ಮೂಲಕ ಸದೃಢ ಆರೋಗ್ಯ ಪಡೆಯಲು ಸಾಧ್ಯ. ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡೆಗಳತ್ತ ಒಲವು ತೋರಬೇಕು. ಕ್ರೀಡಾಳುಗಳಿಗೆ ಅನುಕೂಲವಾಗಲು ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ನಡೆದಿದ್ದು, ಶೀಘ್ರ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕ್ರೀಡಾ ಮನೋಭಾವದಿಂದ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಪುರಸಭೆ ಉಪಾದ್ಯಕ್ಷ ಮಹ್ಮದ್ ರಫಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಪುರಸಭೆ ಸದಸ್ಯರಾದ ಅಬ್ದುಲ್ ರೌಫ್ ಗ್ಯಾರಂಟಿ, ಪ್ರಮೋದ ಕುಲಕರ್ಣಿ, ಮುಖಂಡರಾದ ಬಸವರಾಜಗೌಡ ಗಣೇಕಲ್, ಬಾಬಾ ಖಾಜಿ, ಯಮನೂರ ಭೋವಿ, ಶರಣಬಸವ ಮೇಟಿ, ಶ್ರೀನಿವಾಸ ಅಮ್ಮಾಪೂರ ಪಂದ್ಯಾವಳಿ ಆಯೋಜಕ ಅಹ್ಮದ್ ಖಾದರಬಾಷಾ ಸೇರಿ ಇತರರು ಇದ್ದರು.