ಎಲ್‌ವಿಡಿ ಕಾಲೇಜ್: ಅಂಬೇಡ್ಕರ ಜನ್ಮ ದಿನಾಚರಣೆ

ರಾಯಚೂರು,ಏ.೧೫- ನಗರದ ಎಲ್‌ವಿಡಿ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ,ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ ಅವರ ೧೩೨ನೇ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಶರಣಗೌಡ ಬಿ.ಹೆಚ್ ಅವರು ಡಾ.ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಉಪ-ಪ್ರಾಚಾರ್ಯರುಗಳಾದ ಮೆಹಮೂದ್ ಟಿ, ಡಾ. ಆಂಜನೇಯ ಹಾಗೂ ಎನ್.ಎಸ್.ಎಸ್ ಅಧಿಕಾರಿ ಚನ್ನಾರೆಡ್ಡಿ, ಎನ್.ಸಿ.ಸಿ. ಅಧಿಕಾರಿ ಡಾ. ಶಿವರಾಜ, ದೈಹಿಕ ನಿರ್ದೆಶಕರಾದ ಡಾ. ತಾಯಮ್ಮ, ಅಧೀಕ್ಷಕ ರಾದ ರಾಘವೇಂದ್ರ ಕುಲಕರ್ಣಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.