ಎಲ್ಲ ಹಳ್ಳಿಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ: ಪ್ರಸನ್ನ ಖಂಡ್ರೆ

ಭಾಲ್ಕಿ:ಮೇ.30: ಪಟ್ಟಣದ ಚನ್ನಬಸವಾಶ್ರಮದಲ್ಲಿ ಶನಿವಾರ ಉಮಾದೇವಿ ಪ್ರಕಾಶ ಖಂಡ್ರೆ ಫೌಂಡೇಶನ್ ವತಿಯಿಂದ ತಾಲ್ಲೂಕಿನ ಎಲ್ಲ ಹಳ್ಳಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಯುವ ಮುಖಂಡ ಪ್ರಸನ್ನ ಖಂಡ್ರೆ ಮಾತನಾಡಿ, ‘ನಮ್ಮ ತಂದೆ ಪ್ರಕಾಶ ಖಂಡ್ರೆ ಅವರ ಮಾರ್ಗದರ್ಶನದ ಮೇರೆಗೆ ಉಮಾದೇವಿ ಪ್ರಕಾಶ ಖಂಡ್ರೆ ಫೌಂಡೇಶನ್‌ನಿಂದ 15 ಟ್ರ್ಯಾಕ್ಟರ್‌ ಮೂಲಕ ಎಲ್ಲ ಗ್ರಾಮ, ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. ಈಗಾಗಲೇ ಸ್ಯಾನಿಟೈಸರ್‌, ಮಾಸ್ಕ್‌, ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗಿದೆ’ ಎಂದು ತಿಳಿಸಿದರು.

ತಹಶೀಲ್ದಾರ್ ಅಣ್ಣಾರಾವ್‌ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ದೀಪಿಕಾ ನಾಯ್ಕರ್‌ ಮಾತನಾಡಿದರು.

ಎಪಿಎಂಸಿ ಸದಸ್ಯ ಸುಭಾಶ ಖಂಡ್ರೆ, ಯುವ ಉದ್ಯಮಿ ಜಗದೀಶ ಖಂಡ್ರೆ, ಗುರುಪ್ರಸಾದ ಖಂಡ್ರೆ, ಗೋವಿಂದರಾವ್‌ ಬಿರಾದಾರ, ಕಿರಣ ಖಂಡ್ರೆ, ಅಮರ ಜಲ್ದೆ, ಜೈಕಿಶನ ಬಿಯಾನಿ, ಅನಿಲ್‌ ಕುಂದೆ, ಪ್ರಶಾಂತ ಪಾತ್ರೆ, ರಾಜಕುಮಾರ ಜಲ್ದೆ, ಗುರಯ್ಯ ಸ್ವಾಮಿ, ನಾಗನಾಥ ಡಾವರಗಾಂವ, ಗಿರೀಶ ರಿಕ್ಕೆ, ಶಿವಾ ಸೋಂಪುರ, ಜೈರಾಜ ಕೊಳ್ಳಾ, ಶಿವಕುಮಾರ್ ಮೂಲಗೆ, ದೀಪಕ ಶಿಂಧೆ ಉಪಸ್ಥಿತರಿದ್ದರು.