ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ದೊಡ್ಡದು:ಡಾ.ತಳ್ಳೊಳ್ಳಿ

ತಾಳಿಕೋಟೆ:ಫೆ.28: ಆಧುನಿಕ ಭರಾಟೆಯಲ್ಲಿ ನಾನು ಶ್ರೀಮಂತ ಎಂಬುದನ್ನು ತೋರಿಸಿಕೊಳ್ಳುವದ ಕೋಸ್ಕರ ಮಕ್ಕಳಿಗೆ ಬೇಕ್ರೀ ತಿನಿಸುಗಳನ್ನು ತಿನ್ನಿಸುತ್ತಾ ಸಾಗಿದ್ದರ ಫಲವಾಗಿ ಚಿಕ್ಕ ಮಕ್ಕಳಲ್ಲಿಯೂ ಶೂಗರ್, ಬಿಪಿ, ಹೃದಯಾಘಾತ ಕಾಯಿಲೆಗಳು ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ತಾಳಿಕೋಟೆ ಭಾಗ್ಯವಂತಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ವೈಧ್ಯ ಡಾ.ವೀರೇಶ ತಳ್ಳೊಳ್ಳಿ ಅವರು ಹೇಳಿದರು.
ರವಿವಾರರಂದು ತಾಲೂಕಿನ ನಾವದಗಿ ಗ್ರಾಮದಲ್ಲಿ ರಾಜಗುರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ ಮಠದ ಶ್ರೀ ರಾಜೇಂದ್ರ ಒಡೆಯರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕೀತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಕರಿದ ಪದಾರ್ಥಗಳನ್ನು ತಿನ್ನಿಸುವದು ಮತ್ತು ತಿನ್ನುವದು ಅಪಾಯಕಾರಿಯಾಗಿದೆ ನಿತ್ಯ ಮಕ್ಕಳಿಗೆ ಕುರುಕುರಿ, ಪಾಪಡಿ, ಬಜಿ, ಪಾನಿಪುರಿ, ಒಳಗೊಂಡಂತೆ ಇನ್ನಿತರ ಪದಾರ್ಥಗಳನ್ನು ಮನೆಗೆ ತರುವದು ಎಲ್ಲರಿಗೂ ರೂಡಿಯಾಗುತ್ತಾ ಸಾಗಿದೆ ಇದರಿಂದ ಮಕ್ಕಳಲ್ಲಿ ಹೆಚ್ಚಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಇದರ ಜೊತೆಗೆ ದೊಡ್ಡವರೂ ಕೂಡಾ ಮಧ್ಯಾಹ್ನ ಮತ್ತು ಸಾಯಂಕಾಲ ಪಂಚರಂಗಿ, ಬಜಿ, ಪಾನಿಪುರಿ, ಗೋಬಿಮಂಚೂರಿಯಂತಹ ಅನೇಕ ಖರೀದ ಪದಾರ್ಥಗಳನ್ನು ತಿನ್ನುತ್ತಿರುವದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾ ಸಾಗಿದ್ದಾರೆ ಮನುಷ್ಯನು ದುಡ್ಡನ್ನು ಗಳಿಸಬಹುದು, ಆಸ್ತಿಯನ್ನು ಗಳಿಸಬಹುದು ಆದರೆ ಎಲ್ಲ ಸಂಪತ್ತುಗಳಲ್ಲಿ ದೊಡ್ಡದಾದ ಆರೋಗ್ಯ ಕೆಟ್ಟು ಹೋದರೆ ಎಲ್ಲ ಸಂಪತ್ತಿಗೂ ಮರಣಶಾಸನ ಬರೆದಹಾಗೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ನಿತ್ಯ ಬೆಳೆಯುವ ಪದಾರ್ಥಗಳಿಗೂ ಕೂಡಾ ಹೆಚ್ಚಿನ ರೀತಿಯ ಕ್ರೀಮಿನಾಶಕ ಸಿಂಪಡಿಸುತ್ತಾ ಸಾvದ್ದರಿಂದ ನಾವು ಎಷ್ಟೇ ತೊಳೆದು ಅಡಿಗೆ ಮಾಡಿದರೂ ಕೂಡಾ ಅಲ್ಪ ಪ್ರಮಾಣದಲ್ಲಿ ಕ್ರೀಮಿನಾಶಕ ದೇಹವನ್ನು ಸೇರುತ್ತಿದೆ ಇದರಬಗ್ಗೆ ಹೆಚ್ಚಿಗೆ ಲಕ್ಷ ಕೊಡುವದು ಅಗತ್ಯವಾಗಿದೆ ಇತ್ತೀಚಿನ ದಿನಗಳಲ್ಲಿ 25 ರಿಂದ 30 ವಚಿiÀುಸ್ಸಿನ ಯುವಕರಿಗೂ ಕೂಡಾ ಹೃದಯಾಘಾತ ಹೆಚ್ಚಾಗುತ್ತಾ ಸಾಗಿದೆ ಬಿಪಿ ಮತ್ತು ಶುಗರ್ ಸಾಮಾನ್ಯವಾಗಿ ಕಾಣತೊಡಗಿದೆ ಇದಕ್ಕೆ ಕಾರಣ ಕೈಯಲ್ಲಿ ಹಣವಿದೆ ಎಂಬ ಕಾರಣದಿಂದ ಮನೆಯ ಊಟಕ್ಕಿಂತ ದಾಬಾ, ಹೋಟೆಲಗಳಕಡೆಗೆ ಯುವಕರು ವಾಲುತ್ತಾ ಸಾಗಿದ್ದರಿಂದ ಇಂತಹ ರೋಗಗಳು ಕಾಣಿಸಿಕೊಳ್ಳಲು ಕಾರಣವಾಗಿದ್ದು ಶುದ್ದ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮುಖ್ಯವಾಗಿದ್ದು ಎಲ್ಲ ಜನರು ಇದರ ಕಡೆಗೆ ಹೆಚ್ಚಿಗೆ ಲಕ್ಷ ವಹಿಸುವಂತಹ ಕಾರ್ಯ ಮಾಡಬೇಕೆಂದರು.
ಇನ್ನೋರ್ವ ಅತಿಥಿ ತಜ್ಞ ವೈಧ್ಯರಾದ ಡಾ.ಎ.ಎ.ನಾಲಬಂದ ಅವರು ಮಾತನಾಡಿ ಆರೋಗ್ಯವೆಂಬುದನ್ನು ಮೋಜಿನ ಆಟದಂತೆ ಯುವಕರು ಉಪಯೋಗಿಸುತ್ತಾ ಎಲ್ಲೆಂದರಲ್ಲಿ ಖರೀದಿ ಪದಾರ್ಥಗಳನ್ನು ತಿನ್ನುತ್ತಾ ಮತ್ತು ದುಶ್ಚಟಗಳಾದ ಸಿಗರೇಟ ಮತ್ತು ಮಧ್ಯ ಸೇವನೆಕಡೆಗೆ ದಾಸರಾಗುತ್ತಾ ಸಾಗುತ್ತಾ ಸಾಗಿರುವದು ದೇಶದ ಭವಿಷ್ಯಕ್ಕೆ ಗÀಂಡಾಂತರವಿದ್ದಂತೆ ಇದನ್ನು ಪಾಲಕರು ಅರ್ಥೈಸಿಕೊಂಡು ನಿತ್ಯ ಮಕ್ಕಳು ಮನೆಯಿಂದ ಹೋದ ಮೇಲೆ ಯಾವ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬುದರ ಕಡೆಗೆ ಸ್ವಲ್ಪ ಲಕ್ಷ ವಹಿಸಬೇಕು ಇದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿ ಉಳಿಯುವದರ ಜೊತೆಗೆ ಉತ್ತಮ ಸಂಬಂದ ಗಟ್ಟಿಯಾಗಿ ಉಳಿಯಲು ಸಾಧ್ಯವೆಂದರು.
ಇನ್ನೋರ್ವ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಯ ಹಿರಿಯ ಹ್ಲದಯ ರೋಗ ತಜ್ಞ ವೈಧ್ಯರಾದ ಡಾ.ರಾಜಕುಮಾರ ಹಿರೇಮಠ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆದ ಸಾವು ನೋವುಗಳು ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬ ಅಹಂ ದೂರ ಮಾಡಿದೆ ಆರೋಗ್ಯದ ಮಹತ್ವ ಏನೆಂಬುದನ್ನು ತಿಳಿಸಿಕೊಟ್ಟಿದ್ದು, ಇಂದು ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮನಸ್ಥಿತಿ ಹೆಚ್ಚಿದೆ ಎಂದ ಅವರು ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಇಂದು ಮನುಕುಲಕ್ಕೆ ಮುಖ್ಯವಾಗಿದೆ, ಕೋವಿಡ್ ಸಂದರ್ಭದಲ್ಲಿ ಸ್ನೇಹಿತರು, ಅನೇಕ ಬಂಧುಗಳನ್ನು ಕಳೆದುಕೊಂಡ ಕಹಿ ನೆನಪು ಕಾಡುತ್ತಲೇ ಇರುವುದರಿಂದ ಜನತೆ ಆರೋಗ್ಯ ತಪಾಸಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು. ಗ್ರಾಮೀಣ ಜನತೆ ಕಷ್ಟದ ಬದುಕು ಸಾಗಿಸುತ್ತಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಅರಿವು ಇಲ್ಲದಿರುವುದರಿಂದ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ, ಉಚಿತ ತಪಾಸಣೆ ಶಿಬಿರಗಳ ಮೂಲಕ ಆರೋಗ್ಯ ರಕ್ಷಣೆಯ ಮಹತ್ವವನ್ನು ತಿಳಿಸಿಕೊಡುತ್ತಾ ಸಾಗಿರುವದು ಒಳ್ಳೆಯ ಬೆಳವಣಿಗೆ ಯಾಗಿದೆ ಎಂದರು.
ಇನ್ನೋರ್ವ ಹಿರಿಯ ವೈಧ್ಯರಾದ ಡಾ.ವ್ಹಿ.ಎಸ್.ಕಾರ್ಚಿ ಅವರು ಮಾತನಾಡಿ ಅನೇಕ ಕಾಯಿಲೆಗಳ ಬಗ್ಗೆ ಅರಿವೇ ಇಲ್ಲದೆ ಜನ ತಮ್ಮ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ ಇಂತಹ ಶಿಬಿರಗಳ ಮೂಲಕ ಜನರಲ್ಲಿ ಜಾಗೃತಿ ಬರುತ್ತದೆ ಅದಕ್ಕಾಗಿ ಜನಸಮುದಾಯ ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕು ಮಕ್ಕಳಿಗೆ ಮೋಬೈಲ್ ಪೋನ್ ಮಾರಕವಾಗುತ್ತಿದ್ದು ಇದನ್ನು ಆದಷ್ಟು ಮಕ್ಕಳ ಕೈಯಿಂದ ಮೋಬೈಲ್ ದೂರುಳಿಯುವಂತೆ ನೋಡಿಕೊಳ್ಳಬೇಕೆಂದರು.
ಕಾರ್ಯಕ್ರಮದ ನಂತರ ಹೃದಯ ರೋಗ ಸಂಬಂದಿತ, ಆಯುರ್ವೇದಿಕ ಚಿಕೀತ್ಸೆ, ಮಹಳೆಯರಿಗೆ ಸಂಬಂದಿತ, ಚೀಕೀತ್ಸೆಗಳಲ್ಲದೇ ವಿಜಯಪುರ ಅನುಗೃಹ ಆಸ್ಪತ್ರೆಯ ವತಿಯಿಂದ ನೇತ್ರ ತಪಾಸಣೆ ಒಳಗೊಂಡು ಅನೇಕ ರೋಗಿಗಳನ್ನು ವೈಧ್ಯರು ತಪಾಸಣೆ ಮಾಡಿ ಸೂಕ್ತ ಚಿಕೀತ್ಸೆ ಮತ್ತು ಸಲಹೆ ಸೂಚನೆಗಳನ್ನು ನೀಡಿದರು.
ಗುತ್ತಿಗೆದಾರ ನವಲಿ ಹಿರೇಮಠ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಕೊಡೇಕಲ್ಲ ದುರದುಂಡೆಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಸಿಗೆ ನೀರುಣಿಸುವ ಮೂಲಕ ಉಸ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾವದಗಿ ಬೃಹನ್ ಮಠದ ಶ್ರೀ ರಾಜೇಂದ್ರ ದೇವರು ವಹಿಸಿದ್ದರು.
ಈ ಸಮಯದಲ್ಲಿ ಡಾ.ಕರಬಸಯ್ಯ ಹಿರೇಮಠ, ಡಾ.ಸಂತೋಷ ಕೊಂಗಂಡಿ, ಡಾ.ಸುಂಗಲಾ ಹಿರೇಮಠ, ಡಾ.ಶಿವರಾಜ ಒಡೆಯರ ಹಿರೇಮಠ, ಡಾ.ವೇದಮೂರ್ತಿ ಹಿರೇಮಠ, ಡಾ.ಶ್ರೀದೇವಿ ಹಿರೇಮಠ, ಡಾ.ಆರೀಫ್ ಮನಿಯಾರ್, ಡಾ.ರುದ್ರಸ್ವಾಮಿ ಹಿರೇಮಠ, ಡಾ.ವಿಶ್ವೇಶ್ವರಯ್ಯ ಮಠ, ಡಾ.ರಾಜೇಶ್ವರಿ ವಣಕ್ಯಾಳ, ಡಾ.ಶಾಂತಾ ಇಬ್ರಾಹಿಂಪೂರ, ಮುಖಂಡರಾದ ಬಸನಗೌಡ ವಣಕ್ಯಾಳ, ಮೊದಲಾದವರು ಇದ್ದರು.