ಎಲ್ಲ ಸಂಪತ್ತಿಗಿಂತ ಆರೋಗ್ಯಸಂಪತ್ತು ದೊಡ್ಡದು : ಮುರುಘೇಶ

ತಾಳಿಕೋಟೆ:ಮೇ.25: ಗಳಿಕೆ ಆಸ್ತಿ ಅಂತಸ್ತು ಇವು ಯಾವುಗಳು ನಮ್ಮ ಜೊತೆ ಬರುವುದಿಲ್ಲಾ ದಿನನಿತ್ಯ ಜೊತೆಯಾಗಿರುವುದೇ ಆರೋಗ್ಯ ಸಂಪತ್ತೆನ್ನುವುದು ಮಹಾ ಸಂಪತ್ತಾಗಿ ಪರಿಣಮಿಸಿದೆ ಈಕುರಿತು ಋಷಿಮುನಿಗಳು ಅನೇಕ ಆರೋಗ್ಯ ತಜ್ಞರು ಹೇಳುತ್ತಾ ಸಾಗಿಬಂದಿರುವುದು ಇದರಲ್ಲಿ ಏನೂ ತಪ್ಪಿಲ್ಲವೆಂದು ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿಯಾದ ವೇ|| ಮುರುಘೇಶ ವಿರಕ್ತಮಠ ಅವರು ನುಡಿದರು.
ಶುಕ್ರವಾರರಂದು ಶ್ರೀ ಬಿಎಂ ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಜಯಪುರ ಹಾಗೂ ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಭಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹಿರಿಯರು ಆರೋಗ್ಯವಂತ ಭಾವನೆ ಮೂಡಿಸುತ್ತಾ ಸಾಗಿಬಂದಿದ್ದರು ಇಂದಿನ ದಿನಮಾನದಲ್ಲಿ ಅದು ಮರೆತುಹೋದಂತೆ ಕಾಣುತ್ತದೆ ಒಳ್ಳೆಯ ಆಹಾರ ಸೇವನೆ ಹಾಗೂ ದಿನನಿತ್ಯ ವ್ಯಾಯಾಮದಂತಹ ಅಲ್ಲದೇ ಯೋಗ ಗಳಂತಹ ಸಾದನೆಗಳನ್ನು ಮಾಡುತ್ತಾ ಸಾಗಿದರೆ ಆರೋಗ್ಯದಲ್ಲಿ ಯಾವ ಏರಾಪೇರು ಆಗುವದಿಲ್ಲಾ ಎಂದು ಹೇಳಿದ ಅವರು ಇಂದು ವಿಜಾಪೂರದ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಭಿರವು ಇದು ಮಹತ್ವದ ಶಿಬಿರಾಗಿ ಮಾರ್ಪಟ್ಟಿದೆ ಎಂದ ಅವರು ಬಡ ಬಗ್ಗರ ಭಗ್ಗೆ ಕಾಳಜಿ ವಹಿಸಿ ವಿವಿಧ ರೋಗಗಳ ತಪಾಸಣೆ ನಡೆಸುತ್ತಾ ಸಾಗಿ ಬಂದ ಬಿಎಂ ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವಾ ಕಾರ್ಯ ಅಲ್ಲದೇ ಸಿಬ್ಬಂದಿಗಳ ಕಾರ್ಯ ಪ್ರಶಂಶನೀಯವಾಗಿದೆ ಎಂದರು.
ಇನ್ನೋರ್ವ ಬಿಎಲ್‍ಡಿ ಆಸ್ಪತ್ರೆಯ ನರರೋಗ ತಜ್ಞರಾದ ಡಾ. ವಿರುಪಾಕ್ಷ ಬಿರಾದಾರ ಅವರು ಮಾತನಾಡಿ ಅತಿಯಾದ ರಕ್ತದೊತ್ತಡದಿಂದ ಶುಗರ್ ಎಂಬುವುದು ಕಂಟ್ರೋಲ್ ಆಗುವದಿಲ್ಲಾ ಮಧ್ಯಪಾನ ಸೇವನೆ ಹಾಗೂ ಮಾನಸೀಕ ಒತ್ತಡ ಇರುವಂತಹ ವ್ಯಕ್ತಿಗೆ ಈ ನರರೋಗ ಖಾಯಿಲೆ ಬರಲು ಸಾಧ್ಯವಿದೆ ಎಂದರು 40 ವರ್ಷ ಮೇಲ್ಪಟ್ಟು ವಯೋಮಿಇ ಹೊಂದಿದವರು ನಿಯಮಿತವಾಗಿ ಶುಗರ್ ಕುರಿತು ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ದಿನನಿತ್ಯ ವ್ಯಾಯಾಮ ಲಘುವ್ಯಾಯಾಮ ಮಾಡಿಕೊಳ್ಳುವುದನ್ನು ರೂಢಿಮಾಡಿಕೊಳ್ಳಬೇಕು. ಶುಗರ್ ಬಿಪಿ ಇದ್ದವರು ವೈದ್ಯರ ಸಲಹೆ ಮೇರೆಗೆ ನಡೆದುಕೊಳ್ಳಬೇಕು ವ್ಯಾಯಾಮದೊಂದಿಗೆ ಯೋಗ, ಧ್ಯಾನ, ಕ್ರಮಬದ್ದ ಆಹಾರ ಸೇವನೆ ಮಾಡಬೇಕು ಇದರಿಂದ ನರರೋಗ ನರಗಳ ದೌರ್ಬಲ್ಯಗಳನ್ನು ದೂರಿಕರಿಸಬಹುದೆಂದರು.
ಇನ್ನೋರ್ವ ಹೃದಯಶಸ್ತ್ರ ವಿಭಾಗದ ತಜ್ಞವೈದ್ಯರಾದ ಡಾ. ಜಯಕೃಷ್ಣ ಮಿಶ್ರಾ ಅವರು ಮಾತನಾಡಿ ತೇಲಕಟ್ ಹೊಂದಿದ ಊಟ ತುಪ್ಪ ಅಲ್ಲದೇ ಪಾಮ್ ಆಯಿಲ್ ಮತ್ತು ಮಟನ್ ಚರಬಿ ಗಳಂತವುಗಳು ಸೇವಿಸುವದರಿಂದ ಹೃದಯ ಖಾಯಿಲೆ ಬರುವ ಸಾಧ್ಯತೆಯಿದೆ ವೈದ್ಯರು ಎದೆ ನೋವು ಎಂಬುದನ್ನು ತಿಳಿಸಿದಾಗ ಬಹಳೆ ಎಚ್ಚರದಿಂದ ಕೆಲಸ ಕಾರ್ಯಗಳಿಗೆ ಮುಂದಾಗಬೇಕು ಎದೆನೋವು ಬಂದಾಗ ಚಕ್ರ ಬರುವ ಸಾಧ್ಯತೆಯಿದೆ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆಯಬೇಕೆಂದು ಹೇಳಿದ ಅವರು ಶುಗರ್ ಬಿಪಿ ಕಂಟ್ರೋಲ್ ದಲ್ಲಿದ್ದರೆ ಹಾರ್ಟ್ ಪ್ರಾಬ್ಲಮ್ ಬರುವುದಿಲ್ಲವೆಂದು ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಮಾತನಾಡಿ ಬಿಎಂ ಪಾಟೀಲ ಸೂಪರ್ ಆಸ್ಪತ್ರೆ ಈ ಹಿಂದೆ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಇಂದಿನಂತಹ ಉಚಿತ ರೋಗ ತಪಾಸಣಾ ಕಾರ್ಯ ಕೈಕೊಳ್ಳುತ್ತಾ ಸಾಗಿಬಂದಿದೆ ಇದರಿಂದ ಬಡಬಗ್ಗರಿಗೆ ಬಹಳೇ ಅನುಕೂಲವಾಗಿದೆ ಅಂತಹ ಒಳ್ಳೆಯ ಸೇವಾ ಕಾರ್ಯವನ್ನು ಇಂದು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಏರ್ಪಡಿಸಿರುವುದು ಸಂತಸ ತಂದಿದೆ ಎಂದು ಬಿಎಲ್‍ಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯ ವೈಖರಿಗಳ ಕುರಿತು ಶ್ಲ್ಯಾಘಿಸಿದರು.
ಇನ್ನೋರ್ವ ಆಡಳಿತಾಧಿಕಾರಿಗಳಾದ ಶಾಂತೇಶ ಸಲಗಾರೆ ಅವರು ಮಾತನಾಡಿ ಶಿಭಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ತಿಳುವಳಿಕೆ ನೀಡಿ ಈ ಶಿಭಿರದಲ್ಲಿ ಪಾಲ್ಗೊಂಡವರು ವಿಂಜಯಪುರ ಆಸ್ಪತ್ರೆಗೆ ಆಗಮಿಸುವ ಸಮಯದಲ್ಲಿ ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್‍ಗಳನ್ನು ತಪ್ಪದೇ ತರಬೇಕು ಇದು ಅಲ್ಲದೇ ಈ ಶಿಭಿರದಲ್ಲಿ ನೀಡಲಾದ ಓಪಿಡಿ ಕಾರ್ಡ್ ನ್ನು ತರಬೇಕೆಂದು ಶಿಭಿರಾರ್ಥಿತಳಿಗೆ ತಿಳಿಹೇಳಿದರು.
ಒಟ್ಟು ಈ ಶಿಬಿರದಲ್ಲಿ 103 ರನ್ನು ತಪಾಸಣೆ ಕೈಕೊಳ್ಳಲಾಯಿತಲ್ಲದೇ ಮೂತ್ರಜನಕಾಂಗ ಶಸ್ತ್ರಚಿಕಿತೆಗೆ ಸಂಬಂದಿಸಿದ 15 ರೋಗಿಗಳನ್ನು ಆಯ್ಕೆ ಮಾಡಲಾಯಿತು. ಹೃದಯರೋಗ ಶಸ್ತ್ರ ಚಿಕಿತ್ಸೆಗೆ ಸಂಭಂದಿಸಿದ 48 ಜನರನ್ನು ಹಾಗೂ ನರರೋಗ ಶಸ್ತ್ರಚಿತ್ಸೆಗೆ ಸಂಬಂದಿಸಿದ 40 ಜನರನ್ನು ಹಾಗೂ ಸಕ್ಕರೆ ಖಾಯಿಲೆ ರೋಗಿಗೆ ಸಂಭಂದಿಸಿದ 72 ಜನರನ್ನು ಆಯ್ಕೆ ಮಾಡಲಾಯಿತಲ್ಲದೇ 40 ಜನರಿಗೆ ಇಸಿಜಿ ಮಾಡಲಾಯಿತಲ್ಲದೇ ಎಲ್ಲ ರೋಗಗಳ ಸಂಭಂದಿತ ರಕ್ತದೊತ್ತಡ, ನಾಡಿಮಿಡಿತ, ದೇಹತೂಕ ಸಂಭಂದಿಸಿದಂತೆ ವೈದ್ಯರು ಸಮಾಲೋಚನೆ ನಡೆಸಿ ತಿಳುವಳಿಕೆ ನೀಡಲಾಯಿತು.
ಈ ವೈದ್ಯರ ತಂಡದಲ್ಲಿ ಮೂತ್ರಶಸ್ತ್ರ ವಿಭಾಗದ ಡಾ. ದೃವ ಎಚ್‍ಎಂ, ಡಾ. ವೀರಪ್ಪ ಕೊಟಗಿ, ಹೃದಯ ಶಸ್ತ್ರ ವಿಭಾಗದ ಡಾ. ಸುನೀಲ್, ಹಾಗೂ ನರ್ಸಿಂಗ್ ಸ್ಟಾಪ್ ಕಲ್ಲಪ್ಪ ಸಾರವಾಡ, ದ್ರಾಕ್ಷಾಯಣಿ ಶೆಟಗಾರ, ದಿವ್ಯಶ್ರೀ ಜಾಲವಾದಿ, ರಾಜನ್ ಚವ್ಹಾಣ, ಪ್ರಜ್ವಲ್ ಹುಡೇದ, ಪ್ರೀಯಾ ಮಾಳಿ, ಸ್ನೇಹಾ ಡಿ, ಸ್ಪಂದನಾ ಎಚ್, ಸಿಬ್ಬಂದಿವರ್ಗದವರಾದ ಅಣ್ಣಾಸಾಬ ಇಚಿಡಿ, ಅನೀಲ ಪೂಜಾರಿ, ಅನೀಷಾ, ಕಸ್ತೂರಿ, ಮಹೇಶ, ಶಶಿಕಾಂತ, ತಾಳಿಕೋಟೆ ಖ್ಯಾತ ಔಷಧಿ ವ್ಯಾಪಾರಿಗಳಾದ ರಮೇಶ ಸಾಲಂಕಿ ಮೊದಲಾದವರು ಉಪಸ್ತಿತರಿದ್ದರು.
ಸಿಬ್ಬಂದಿಯಾದ ಪ್ರೀತು ದಶವಂತ ಸ್ವಾಗತಿಸಿದರು. ಸಹಾಯಕ ಸಂಪರ್ಕಾಧಿಕಾರಿ ಚನ್ನಬಸವ ಕೊಟಗಿ ವಂದಿಸಿದರು.